Advertisement

ಬಲವಂತದ ಸಮೀಕ್ಷೆ ನಿಲ್ಲಿಸಿ

11:05 AM Jul 06, 2019 | Suhan S |

ಗದಗ: ಸ್ಲಂ ಪ್ರದೇಶದಲ್ಲಿ ಬಲವಂತದ ಸಮೀಕ್ಷೆ ನಿಲ್ಲಿಸಿ, ವಸತಿ ರಹಿತ ಕುಟುಂಬಗಳಿಗೆ ಮನೆ ಕಲ್ಪಿಸಬೇಕು ಎಂದು ಸ್ಲಂ ಜನಾಂದೋಲನ ಕರ್ನಾಟಕ ಮತ್ತು ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣ ಸಮಿತಿ ಒತ್ತಾಯಿಸಿದೆ.

Advertisement

ಈ ಕುರಿತು ಸಮಿತಿ ಪದಾಧಿಕಾರಿಗಳು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿ, ಅವಳಿ ನಗರದಲ್ಲಿ ಸರಿಸುಮಾರು 70ಕ್ಕೊ ಹೆಚ್ಚು ಕೊಳಚೆ ಪ್ರದೇಶಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳಿಲ್ಲದೇ, 60 ಸಾವಿರಕ್ಕೊ ಹೆಚ್ಚು ಸ್ಲಂ ನಿವಾಸಿಗಳು ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಆದರೆ, ಕೇಂದ್ರ ಮತ್ತು ರಾಜ್ಯ ಸರಕಾರದ ಸಹಯೋಗದಲ್ಲಿ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ನಗರದ ಗಂಗಿಮಡಿ ಆಶ್ರಯ ಕಾಲೋನಿ ಬಳಿ 3,630 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪೌರಾಯುಕ್ತರ ಆದೇಶದ ಮೇರೆಗೆ ನಗರದ ಕೊಳಚೆ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸುತ್ತಿರುವ ನಗರಸಭೆ ಸಿಬ್ಬಂದಿಗಳು ಪುನರ್ವಸತಿ ನೆಪ್ಪದಲ್ಲಿ ಕೊಳಗೇರಿಗಳನ್ನು ಎತ್ತಂಗಡಿಗೆ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

ನಗರದಲ್ಲಿ ಘೋಷಣೆಯಾಗಿರುವ ಕೊಳಚೆ ಪ್ರದೇಶಗಳಿಗೆ ನಗರಸಭೆಯಿಂದ ಫಾರ್ಮ ನಂ-3 ನೀಡಬೇಕೆಂದು ಒತ್ತಾಯಿಸಿ ಸುಮಾರು ವರ್ಷಗಳಿಂದ ಸಂಘಟನೆಯ ಮೂಲಕ ನಿರಂತರ ಹೋರಾಟ ನಡೆಸಿ ನಗರಸಭೆ ಪೌರಾಯುಕ್ತರಿಗೆ ತಿಳಿಸಿದರು. ಸಹ ನಗರಸಭೆ ಪೌರಾಯುಕ್ತರು ಮತ್ತು ಸಿಬ್ಬಂದಿಗಳು ಸ್ಲಂ ಜನರ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಕೊಡಲೇ ನಗರಸಭೆ ಪೌರಾಯುಕ್ತರು ಘೋಷಣೆಯಾಗಿರುವ ಕೊಳಚೆ ಪ್ರದೇಶಗಳನ್ನು ವಸತಿ ನೆಪ್ಪದಲ್ಲಿ ಸಮೀಕ್ಷೆ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಇಮ್ತಿಯಾಜ ಮಾನ್ವಿ, ರವಿಕುಮಾರ ಬೆಳಮಕರ, ಮೆಹರುನಿಸಾ ಢಾಲಾಯತ, ತಮನ್ನಾ ಧಾರವಾಡ, ಉಸ್ಮಾನ ಚಿತ್ತಾಪೂರ, ರಫೀಕ ಧಾರವಾಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.