Advertisement

ರೈಲಲ್ಲಿ ಗೊರಕೆಗೆ ಬಿತ್ತು ತಡೆ

10:10 AM Feb 15, 2018 | Harsha Rao |

ಮುಂಬಯಿ: ಗೊರಕೆ ಹೊಡೆಯುತ್ತಿದ್ದ ಪ್ರಯಾಣಿಕನಿಗೆ ಯುವಕರ ಗುಂಪೊಂದು ನಿದ್ರೆ ಮಾಡುವುದಕ್ಕೇ ಬಿಡದ ವಿಚಿತ್ರ ಘಟನೆ ದರ್ಭಾಂಗ ಪವನ್‌ ಎಕ್ಸ್‌ ಪ್ರಸ್‌ ರೈಲಿನಲ್ಲಿ ನಡೆದಿದೆ. ಸೋಮವಾರ ಈ ಘಟನೆ ನಡೆದಿದ್ದು, ಎಸಿ ಬೋಗಿಯಲ್ಲಿ ಪ್ರಯಾಣಿಕನೊಬ್ಬ ದೊಡ್ಡದಾಗಿ ಗೊರಕೆ ಹೊಡೆಯುತ್ತಿದ್ದ. ಇದರಿಂದ ಈ ಬೋಗಿಯಲ್ಲಿದ್ದ ಇತರ ಪ್ರಯಾಣಿಕರಿಗೆ ನಿದ್ರೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆಗ ಯುವಕರ ತಂಡವೊಂದು ಆತನನ್ನು ಎಬ್ಬಿಸಿ ನಿದ್ರೆ ಮಾಡದೇ ಇರಲು ಸೂಚಿಸಿದೆ.

Advertisement

ಆರಂಭದಲ್ಲಿ ಅದು ಜಗಳಕ್ಕೆ ಕಾರಣವಾಗಿದ್ದರೂ ಪರಿಸ್ಥಿತಿ ಅರ್ಥ ಮಾಡಿಕೊಂಡ ಆತ  5-6 ತಾಸು ನಿದ್ದೆ ಮಾಡದೆಯೇ ಪ್ರಯಾಣ ಮಾಡಿದ್ದಾನೆ.  ದೂರದ ರೈಲು ಪ್ರಯಾಣದಲ್ಲಿ ಗೊರಕೆ ಸಮಸ್ಯೆ ಹೆಚ್ಚಿದ್ದು, ಈ ಬಗ್ಗೆ ದೂರುಗಳು ಬರುವುದು ಅತ್ಯಂತ ಸಾಮಾನ್ಯ ಎಂದು  ಟಿಕೆಟ್‌ ಇನ್‌ಸ್ಪೆಕ್ಟರ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next