Advertisement
ಅಶ್ಲೀಲ ನೃತ್ಯಗಳಿಗೆ ಆಸ್ಪದ ನೀಡುತ್ತಿರುವ ಆರ್ಕೆಸ್ಟ್ರಾ ತಂಡಗಳನ್ನು ನಿಷೇ ಧಿಸುವಂತೆ ಒತ್ತಾಯಿಸಿ ನಗರದ ಸಪ್ತಸ್ವರ ಸಾಂಸ್ಕೃತಿಕ ಸಂಸ್ಥೆಯ ಕಲಾವಿದರು ಹಾಗು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸೋಮವಾರ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಕಲಾವಿದರಿಗೆ ಕಲೆಯೆ ಬದುಕಾಗಬೇಕೆ ವಿನಃ ಆರ್ಕೆಸ್ಟ್ರಾ ಹೆಸರಲ್ಲಿ ಹರೆಯದ ಹೆಣ್ಣುಮಕ್ಕಳನ್ನು ಬಳಸಿಕೊಂಡು ಅರೆಬರೆ ಬಟ್ಟೆತೊಟ್ಟು ನಂಗಾನಾಚ್
ನೃತ್ಯದಲ್ಲಿ ತೊಡಗಿಸಿ ಸಂಸ್ಕೃತಿಗೆ ಧಕ್ಕೆ ತರುತ್ತಿರುವುದು ಖಂಡನೀಯ ಎಂದರು.
ಸಂಪೂರ್ಣವಾಗಿ ನಿಷೇ ಧಿಸಿ ಉತ್ತಮ ಕಲೆಗಳ ಪ್ರದರ್ಶನಕ್ಕೆ ಒತ್ತು ನೀಡುವಂತಾಗಬೇಕು ಎಂದು ಆಗ್ರಹಿಸಿ ಸೂಕ್ತ ಕ್ರಮಕ್ಕೆ ಬೆಂಗಳೂರಿನ ಪೊಲೀಸ್
ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗುವುದು. ನಿಜವಾದ ಕಲಾವಿದರಿಗೆ ನ್ಯಾಯ ದೊರೆಯುವವರೆಗೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ಹೇಳಿದರು. ಸಚಿವೆ ಉಮಾಶ್ರೀ ಅವರು ಅನುಭವಿ ಹಿರಿಯ ಕಲಾವಿದರಾಗಿ ಇಂತಹ ನೀಚ ಕೃತ್ಯಗಳು ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿರುವುದು ದುರಂತ.
ಕನ್ನಡ ನಾಡು ಉಳಿವಿಗೆ ಹೋರಾಡುತ್ತಿರುವ ರಕ್ಷಣಾ ವೇದಿಕೆ ನೈಜ ಕಲಾವಿದರಿಗೆ ಬೆಂಬಲ ನೀಡಿ ಪ್ರೋತ್ಸಾಹ ನೀಡುತ್ತಿರುವುದು ನಿಜಕ್ಕೂ ಹೆಮ್ಮೆಯ
ಸಂಗತಿಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಮುಖ್ಯ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ
ಪ್ರತಿಭಟನಾಕಾರರು ರಂಗಪ್ಪ ವೃತ್ತದಬಳಿ ಮಾನವ ಸರಪಳಿ ನಿರ್ಮಿಸಿ ರಸ್ತೆತಡೆ ನಡೆಸಿ ನಂತರ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಕಲಾವಿದರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕಿ ಜ್ಯೋತಿ, ಮಾದಿಗ ಸಮಾಜದ ಮಂಜುನಾಥ್, ಹಿತ ರಕ್ಷಣೆ ಸಮಿತಿ ಮಂಜುನಾಥ್, ತಾಲೂಕು ಅಧ್ಯಕ್ಷ ಗಿರೀಶ್ ವಾದ್ಯಗೋಷ್ಟಿ ಕಲಾವಿದರ ಸಂಘದ ಗುರುದತ್, ಸಪ್ತಸ್ವರ ಕಲಾವಿದರ ಸಂಘದ ಜಯಶೀಲ, ವಿಕ್ರಂ, ಶಂಕರ್, ಅಂತೋಣಿ, ಪರಮೇಶ್, ಅಪೇಕ್ಷ ಮಂಜುನಾಥ್, ಶಂಕರಮೂರ್ತಿ, ಚಿಂದೋಡಿ ಶಂಭುಲಿಂಗಪ್ಪ, ತಿಪ್ಪೇಸ್ವಾಮಿ, ಧರ್ಮರಾಜ್, ಚಿದಾನಂದ, ಮನು, ವಾಸು, ಮಾರ್ಟಿನ್, ಗೋವಿಂದರಾಜ್, ಬಿ.ಎನ್.
ರಾಜು ಇತರರು ಪಾಲ್ಗೊಂಡಿದ್ದರು.