ಕುಷ್ಟಗಿ: ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟಕ್ಕೆ ಬೆಳಗಾವಿ, ವಿಜಯಪುರ, ಬಾಗಲಕೋಟೆಯಿಂದ ಮೂರುವರೆ ಸಾವಿರ ಸಂಖ್ಯೆಯಲ್ಲಿ ಹನುಮ ಮಾಲಾಧಾರಿಗಳು ಬರುತ್ತಿದ್ದು, ಅಂಜನೇಯ ಬೆಟ್ಟ ಹತ್ತೇ ಹತ್ತುತ್ತೇವೆ ಹೇಗೆ ತಡೆಯುತ್ತೀರಿ ನೋಡೊಣ ಎಂದು ಶ್ರೀ ರಾಮಚಂದ್ರ ಸೇನೆಯ ವಿಭಾಗೀಯ ಅಧ್ಯಕ್ಷ ಸಂಜೀವ ಮರಡಿ ಸವಾಲು ಹಾಕಿದ್ದಾರೆ.
ಕುಷ್ಟಗಿಯಲ್ಲಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲಾಧಿಕಾರಿಗಳು, ಅನ್ಯ ಜಿಲ್ಲೆಯ ಹನುಮಮಾಲಾದಾರಿಗಳಿಗೆ ನಿರ್ಬಂಧ ಹೇರಿದ್ದಾರೆ. ಒಂದು ಜಿಲ್ಲೆಯ ಜಿಲ್ಲಾಧಿಕಾರಿ ಇನ್ನೊಂದು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಹನುಮಮಾಲಧಾರಿಗಳ ನಿರ್ಬಂಧದ ಬಗ್ಗೆ ಪತ್ರ ಬರೆದಿದ್ದು ಯಾವ ಅರ್ಹ ಪತ್ರ ಅಲ್ಲ. ಜಿಲ್ಲಾಧಿಕಾರಿಗಳು ಇತರೇ ಜಿಲ್ಲೆಗಳ ಜಿಲ್ಲಾಧಿಕಾರಿಗೆ ಮನವಿ ಮಾಡಬೇಕೆ ವಿನಃ ಆದೇಶ ಮಾಡಿರುವುದು ಸರಿ ಅಲ್ಲ. ಕೊಪ್ಪಳ ಜಿಲ್ಲಾಧಿಕಾರಿಗಳೇ ನೀವು ಜನ ಸೇವಕರಾಗಿದ್ದು, ಜನ ಸೇವೆ ಮಾಡಬೇಕು ಎಂದರು.
ಚುನಾವಣೆ ಬಂದಾಗ ಯಾಕೆ ಸುಮ್ಮನಾಗುತ್ತೀರಿ? ಚುನಾವಣೆ ವೇಳೆ ಪ್ರಚಾರ, ಮತದಾನ ಇವೆಲ್ಲದಕ್ಕೂ ಅವಕಾಶ ಕಲ್ಪಿಸುತ್ತೀರಿ ಇದೇ ಡಿ.14ಕ್ಕೆ ವಿಧಾನ ಪರಿಷತ್ ಫಲಿತಾಂಶವಿದ್ದು ಆ ವೇಳೆ ಬಿಜೆಪಿಯವರನ್ನು ತಡೆಯುತ್ತೀರೇನು, ಅವರೇ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ವಿಜಯೋತ್ಸವ ಆಚರಿಸುತ್ತಾರೆ ಅದನ್ನು ತಡೆಯುತ್ತಿರೇನು? ಬರೀ ದೇವಸ್ಥಾನಗಳ ಮೇಲೆ ಟಾರ್ಗೆಟ್ ಯಾಕೆ? ಪ್ರಶ್ನಿಸಿದರು. ಜಿಲ್ಲಾಧಿಕಾರಿಗಳು ನಿರ್ಬಂಧ ಹೇರುವುದಾದರೆ ಕೋವಿಡ್ ಹೋಗುವವರೆಗೂ ಸಭೆ ಸಮಾರಂಭ ಬೇಡ, ಚುನಾವಣೆಯೂ ಬೇಡ ಇಲ್ಲ ರಾಜಿನಾಮೆ ನೀಡಿ ಹೋಗಿ ಎಂದರು.
ಮೂರು ಜಿಲ್ಲೆಗಳಿಂದ ಹನುಮಮಾಲಾಧಾರಿಗಳು ಬರುತ್ತಿದ್ದು ತಡೆಯುವ ಧಂ ಇದ್ದರೆ ತಡೆಯಿರಿ ಎಂದು ಸವಾಲು ಹಾಕಿದರು.
ಈ ವೇಳೆ ತಾಲ್ಲೂಕು ಅಧ್ಯಕ್ಷ ಪ್ರಮೋದ್ ಬಡಿಗೇರ, ಯಮನೂರ ಕೋಮಾರ್ ಮತ್ತಿತರಿದ್ದರು.