Advertisement

ಪಕ್ಷಾಂತರ ನಿಲ್ಲಿಸಿ, ಪ್ರಜಾಪ್ರಭುತ್ವ ಉಳಿಸಲು ಎಲ್ಲರೂ “ಕೈ’ಬಲಪಡಿಸಿ

10:06 AM Dec 03, 2019 | Team Udayavani |

ಶಿರಸಿ: ಪ್ರಜಾಪ್ರಭುತ್ವ ಬಲಗೊಳಿಸಲು ಪಕ್ಷಾಂತರ ಹಾವಳಿ ಹೋಗಬೇಕು. ಹಣದ ಆಸೆ, ಅಧಿಕಾರಕ್ಕೆ ಪಕ್ಷಾಂತರ ಮಾಡಿದವರಿಗೆ ಪಕ್ಷಾತೀತವಾಗಿ ಪಾಠ ಕಲಿಸಲು ಎಲ್ಲ ಪಕ್ಷಗಳೂ ಕಾಂಗ್ರೆಸ್‌ ಜೊತೆ ಕೈ ಜೋಡಿಸಬೇಕು ಎಂದು ಮಾಜಿ ಸಚಿವ ಆರ್‌.ವಿ. ದೇಶಪಾಂಡೆ ಕರೆ ನೀಡಿದರು.

Advertisement

ಸೋಮವಾರ ನಗರದ ಪಂಚವಟಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಪಕ್ಷಾಂತರ ಪಿಡುಗು ತಡೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಗಂಡಾಂತರ ಬರಲಿದೆ. ಯಾವುದೇ ಪಕ್ಷ ಇದ್ದರೂ ತತ್ವ, ಸಿದ್ಧಾಂತ ಬಿಟ್ಟು ಪಕ್ಷಾಂತರ ಮಾಡುವವರಿಗೆ ಮತದಾರರೂ ಪಾಠ ಕಲಿಸಲು ಮುಂದಾಗಿದ್ದು, ಹೊಸ ಗಾಳಿ ಬೀಸುತ್ತಿದೆ. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಭೀಮಣ್ಣ ನಾಯ್ಕ ದೊಡ್ಡ ಮೊತ್ತದ ಮತಗಳಿಂದ ಗೆದ್ದು ಬರಲಿದ್ದಾರೆ ಎಂದರು.

ಉಪಚುನಾವಣೆಯಲ್ಲಿ ನಿರ್ದಿಷ್ಟ ಪ್ರಣಾಳಿಕೆಯಿಲ್ಲ. ಇಲ್ಲಿ ಸೀಮಿತ ವಿಷಯಗಳಿವೆ. ಪಕ್ಷಾಂತರ ಪಿಡುಗು ನಿಲ್ಲಬೇಕು. ಅನರ್ಹತೆಯನ್ನು ಎತ್ತಿ ಹಿಡಿದಿರುವ ಕೋರ್ಟ್‌ ತೀರ್ಪಿಗೆ ಗೌರವ ಕೊಟ್ಟು ಚುನಾವಣೆಯಲ್ಲಿ ಮತದಾರರು ಅದನ್ನು ಅನುಷ್ಠಾನ ಮಾಡಬೇಕು. ಇಲ್ಲಿದ್ದರೆ ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಅಪಚಾರ ಮಾಡಿದಂತಾಗುತ್ತದೆ. ಕಳೆದ ಹತ್ತಾರು ದಿನಗಳಿಂದ ಕ್ಷೇತ್ರದ ಹಲವಡೆ ಪ್ರವಾಸ ಮಾಡಿದ್ದೇನೆ.

ರಸ್ತೆಯಲ್ಲಿ 15-20 ಕಿಮಿ ವೇಗದಲ್ಲೂ ಕಾರು ಓಡದಷ್ಟು ಹಾಳಾಗಿದೆ. ಹೆಬ್ಟಾರ ಅವರು ಸಿದ್ದರಾಮಯ್ಯ ಅವರು ದೇವರೆಂದು, ತಂದೆ ಸಮಾನ ಎಂದು ಹಣ ತಂದಿದ್ದು ರಸ್ತೆ, ಸೇತುವೆ ಮೇಲೆ ಕಾಣುತ್ತಿಲ್ಲ. ಅದೇ ಹೆಬ್ಟಾರರು ಇಂದು ಅವರನ್ನು ತೆಗಳುತ್ತಿದ್ದಾರೆ. ಅಂಥವರಿಗೆ ದ್ರೋಹ ಮಾಡಿ ಹೋಗಿದ್ದಾರೆ. ಹೆಬ್ಟಾರರು ಆಗ ಹೇಳಿದ್ದು ಸರಿಯಾ, ಈಗ ಹೇಳಿದ್ದು ಎಂಬುದನ್ನು ಅವರೇ ಹೇಳಬೇಕು ಎಂದ ಅವರು, ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಒಳ್ಳೆಯ ವಾತಾವವರಣವಿದೆ. ಹಿಂದೆ ನಾನು ಆರು ಬಾರಿ ಆಯ್ಕೆಯಾದ ಕ್ಷೇತ್ರದ ಶೇ.65ರಷ್ಟು ಭಾಗ ಈ ಕ್ಷೇತ್ರದಲ್ಲಿದೆ. ಪ್ರಚಾರಕ್ಕೆ ತೆರಳಿದಾಗ ಜನ ಪ್ರೀತಿಯಿಂದ ನೋಡಿದ್ದಾರೆ. ಉಪಚುನಾವನೆಯಲ್ಲಿ ಪಕ್ಷದ ಅಭ್ಯಥಿ ಭೀಮಣ್ಣ ನಾಯ್ಕ 10ರಿಂದ 13ಸಾವಿರ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದೂ ಹೇಳಿದರು.

ತತ್ವಾಧಾರಿತವಾಗಿ ರಾಜಕಾರಣ ಮಾಡಬೇಕು, ಅಂತಹ ಸಂದರ್ಭ ಬಂದರೆ ಅ ಕಾರ ಬಿಟ್ಟು ಹೋಗಬೇಕು, ಆದರೆ ಇಲ್ಲಿ ರಾಜೀನಾಮೆ ನೀಡಿ ಅನರ್ಹರಾದವರು ಮತದಾರರು ಕೊಟ್ಟ ಅಧಿಕಾರದ ಮೇಲೆ ವ್ಯವಹಾರ ಮಾಡಿದ್ದಾರೆ. ಕೊನೇ ತನಕ ಹೋದವರಿಗೆ ಅನರ್ಹ ಎಂಬ ಹಣೆಪಟ್ಟಿ ಇರುತ್ತದೆ. ರಾಜಕೀಯ ಸ್ಥಿತಿ ತಳಮಟ್ಟಕ್ಕೆ ಇಳಿದಿದೆ. ಇದಕ್ಕೆ ಆಸ್ಪದ ನೀಡಿದರೆ ಪ್ರಜಾಪ್ರಭುತ್ವ ಇನ್ನಷ್ಟು ಅಪಾಯ ಸಿಲುಕುತ್ತದೆ. ಪಕ್ಷಾಂತರ ನಿಷೇಧ ಕಾಯ್ದೆ ಇನ್ನಷ್ಟು ಬಿಗಿಯಾಗಬೇಕು. ಎಂದೂ ಹೇಳಿದರು.

Advertisement

ಜಿಲ್ಲಾ ವಕ್ತಾರ ದೀಪಕ ದೊಡೂxರು, ಬ್ಲಾಕ್‌ ಗಟಕಗಳ ಅಧ್ಯಕ್ಷರಾದ ಜಗದೀಶ ಗೌಡ, ಸಿ.ಎಫ್‌.ನಾಯ್ಕ, ಸುನೀಲ ನಾಯ್ಕ, ಸತೀಶ ನಾಯ್ಕ ಮುಂತಾದವರು ಪಾಲ್ಗೊಂಡಿದ್ದರು.

ಮತದಾನದ ಮುನ್ನ ಹಣ, ಹೆಂಡದ ಅಸ್ತ್ರ ಉಪಯೋಗಿಸುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಮತದಾರರು ಇಂತಹ ಆಮಿಷಕ್ಕೆ ಬಲಿಯಾಗಬಾರದು. ಕಾಂಗ್ರೆಸ್‌ ಪಕ್ಷನ್ನು ಬೆಂಬಲಿಸೇಕು.
– ಆರ್‌.ವಿ.ದೇಶಪಾಂಡೆ, ಮಾಜಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next