Advertisement

Alankaru ಅಕ್ಕಿಯಲ್ಲಿ ಕಲ್ಲು,ಪಂಚಕಜ್ಜಾಯ ಭಾಗ್ಯ: ಪ್ರಾ. ಕೃ.ಪ. ಸ. ಸಂಘದ ಶಾಖೆಯಲ್ಲಿ ಪ್ರಕರಣ

12:06 AM Sep 16, 2023 | Team Udayavani |

ಆಲಂಕಾರು: ಪಡಿತರದಾರರಿಗೆ ಅನ್ನ ಭಾಗ್ಯದ ಅಕ್ಕಿಯಲ್ಲಿ ಕಲ್ಲು, ಪಂಚಕಜ್ಜಾಯ, ಹುಣಸೆ ಬೀಜದ ಜತೆಗೆ ಕಳಪೆ ಅಕ್ಕಿಯನ್ನು ಪೂರೈಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Advertisement

ಈ ಸಂಬಂಧ ಆಲಂಕಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಕೊಯಿಲ ಶಾಖೆಯ ವಿರುದ್ಧ ತಹಶೀಲ್ದಾರರಿಗೆ ದೂರು ನೀಡಲಾಗಿದೆ.

ಕಳಪೆ ಮಟ್ಟದ ಅಕ್ಕಿ ಪೂರೈಕೆ ಅಥವಾ ಅಕ್ಕಿಯಲ್ಲಿ ಕಲ್ಲು ಮಣ್ಣು ಪ್ಯಾಕೆಟ್‌ ಸಿಕ್ಕಿ ರುವ ಬಗ್ಗೆ ದೂರು ಬಂದಿದೆ. ಆಹಾರ ಪರಿವೀಕ್ಷಕರು ಹಾಗೂ ಕಂದಾಯ ನಿರೀ ಕ್ಷಕರನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.

ವರದಿ ಬಂದ ಬಳಿಕ ಕ್ರಮ ಕೈಗೊಳ್ಳುವುದಾಗಿ ಕಡಬ ತಹಶೀಲ್ದಾರ್‌ ಪ್ರಭಾಕರ ಖಜೂರೆ ತಿಳಿಸಿದ್ದಾರೆ.

ಆಲಂಕಾರಿನ ಆಹಾರ ಇಲಾಖೆಯ ಗೋದಾಮಿ ನಿಂದ‌ ಸರಬರಾಜಾದ 300 ಚೀಲ ಅಕ್ಕಿಯ ಪೈಕಿ 25 ತೆರೆಯಲಾಗಿತ್ತು. ಅದರಲ್ಲಿ ನಾಲ್ಕರಲ್ಲಿ ಒಂದು ಕೆ.ಜಿ. ತೂಗುವ ಎರಡು ಕಲ್ಲಿನ ಪ್ಯಾಕ್‌, ಹುಣಸೆ ಬೀಜ, ಗೋಧಿ ಪುಡಿಯಂತಹ ಪಂಚಕಜ್ಜಾಯ ಪ್ರಸಾದ ಸಿಕ್ಕಿವೆ. ಕಳಪೆ ಅಕ್ಕಿಯೂ ಇದ್ದು, ಸಿಬಂದಿ ಸಂಘದ ಆಡಳಿತ ಮಂಡಳಿಯ ಗಮನಕ್ಕೆ ತಂದಿ ದ್ದಾರೆ.

Advertisement

ಅಕ್ಕಿಯಲ್ಲಿ ಕಲ್ಲು ಇನ್ನಿತರ ವಸ್ತುಗಳು ಸಿಕ್ಕಿ ರುವ ಬಗ್ಗೆ ಸಂಘದ ಅಧ್ಯಕ್ಷ ಧರ್ಮಪಾಲ ರಾವ್‌ ಅವರು, ಇದರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.

ಅಧಿಕಾರಿಗಳ ಭೇಟಿ
ಶಾಸಕರ ಸೂಚನೆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಕಡಬ ಆಹಾರ ನಿರೀಕ್ಷಕ ಎಂ.ಎಲ್‌. ಶಂಕರ್‌, ಕಂದಾಯ ನಿರೀಕ್ಷಕ ಪೃಥ್ವಿರಾಜ್‌, ಆಹಾರ ಇಲಾಖೆಯ ಗೋದಾಮು ವ್ಯವಸ್ಥಾಪಕ ಚಂದ್ರಹಾಸ ಮಣಿಯಾಣಿ ಭೇಟಿ ನೀಡಿ ಪರಿಶೀ ಲಿಸಿ ದರು. ಈ ಬಗ್ಗೆ ಜಿಲ್ಲಾಧಿಕಾರಿಯವರ ಗಮನಕ್ಕೆ ತರಲಾಗುವುದು. ಸಮಸ್ಯೆ ಇರುವ ಅಕ್ಕಿ ಚೀಲಗಳನ್ನು ಬದಲಿಸಿ ಬೇರೆ ನೀಡಲಾಗುವುದು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರಗಿಸುವಂತೆ ವರದಿ ನೀಡುವುದಾಗಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next