Advertisement
ಫೆಡರೇಷನ್ ಆಫ್ ಇಂಡಿಯನ್ ಗ್ರಾನೈಟ್ ಮತ್ತು ಸ್ಟೋನ್ ಇಂಡಸ್ಟ್ರೀ (ಎಫ್ ಐಜಿಎಸ್‌ಐ) ಆಯೋಜಿಸಿರುವ ನಾಲ್ಕುದಿನಗಳ ಮೇಳದ ಪ್ರಯುಕ್ತ ಸೋಮವಾರ ನಡೆದ ಪತ್ರಿಕಾಗೋಷ್ಠಿಯ ನ್ನುದ್ದೇಶಿಸಿ ಒಕ್ಕೂಟದ ಅಧ್ಯಕ್ಷ ಆರ್. ಸೇಖರ್ ಅವರು ಮಾತನಾಡಿದರು. ಸ್ಟೋನಾ ಮೇಳ ಆಯೋಜಿಸುವ ಮೂಲಕ ನೈಸರ್ಗಿಕ ಶಿಲೆ ಉದ್ಯಮವನ್ನು ಜಾಗತಿಕವಾಗಿ ವಿಸ್ತರಿಸುವುದು ಹಾಗೂ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಉದ್ದೇಶವಾಗಿದೆ ಎಂದರು.
ಇದು 13ನೇ ಮೇಳವಾಗಲಿದೆ. ಗುಜರಾತ್, ಒಡಿಶಾ, ರಾಜಸ್ತಾನ, ಕರ್ನಾಟಕದ ಶಿಲೆಗಳ ಜೊತೆ ಇರಾನ್, ಟರ್ಕಿ, ಚೀನಾ, ಇಟಲಿ ಮುಂತಾದ ದೇಶಗಳ ಮಾರ್ಬಲ್ ಬ್ಲಾಕ್ಸ್ ಹಾಗೂ ಗ್ರಾನೈಟ್ ಶಿಲೆಗಳು ಮೇಳದಲ್ಲಿ ಪ್ರದರ್ಶನಗೊಳ್ಳಲಿವೆ ಎಂದರು.
ಎಫ್‌ಐಜಿಎಸ್‌ಐ ಉಪಾಧ್ಯಕ್ಷ ಎಸ್. ಕೃಷ್ಣಪ್ರಸಾದ್ ಗ್ರಾನೈಟ್ ಬ್ಲಾಕ್‌ಗಳ ಉತ್ಪಾದನೆಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದ್ದು
,ಕರ್ನಾಟಕ 5ನೇ ಸ್ಥಾನದಲ್ಲಿದೆ. ನೈಸರ್ಗಿಕ ಶಿಲೆ ವ್ಯಾಪಾರದಲ್ಲಿ ಕ್ಷೇತ್ರದಲ್ಲಿ ಸುಮಾರು 15 ಲಕ್ಷ ಮಂದಿ ತೊಡಗಿಸಿಕೊಂಡಿದ್ದಾರೆ. ಆದರೆ, ನಾಲ್ಕೈದು ವರ್ಷಗಳಿಂದ ರಾಜ್ಯದಲ್ಲಿ ಹೊಸ ಗಣಿಗಾರಿಕೆಗೆ ಅನುಮತಿ ನೀಡಿಲ್ಲದಿರುವು ದರಿಂದ ಉತ್ಪಾದನೆ ಪ್ರಮಾಣ ಕಡಿಮೆಯಾಗಿದೆ ಎಂದರು.