ಬಾಗಲಕೋಟೆ: ಹೊಟ್ಟೆ ನೋವು ಕಾಣಿಸಿಕೊಂಡರೆ, ಅದಕ್ಕೆ ಹೊಟ್ಟೆಯ ಭಾಗದಲ್ಲೇ ಸೂಕ್ತ ಶಸ್ತ್ರ ಚಿಕಿತ್ಸೆ ಮಾಡಲಾಗುತ್ತದೆ. ಬಾಯಿಗೆ ಆಪರೇಶನ್ ಮಾಡಲ್ಲ. ಆದರೆ, ಮೋದಿ ಅವರು, ತೆರಿಗೆ ವಸೂಲಿ ಹೆಚ್ಚಳಕ್ಕೆ ನೋಟು ನಿಷೇಧ ಮಾಡಿ, ಇಡೀ ದೇಶದ ಆರ್ಥಿಕ ವ್ಯವಸ್ಥೆ ಹದಗೆಡಿಸಿದ್ದಾರೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ, ಹಿರಿಯ ಮುಖಂಡ ಡಾ|ಎಂ.ಪಿ. ನಾಡಗೌಡ ಹೇಳಿದರು.
ನೆಹರೂ, ವಾಜಪೇಯಿ ಗೌರವಿಸಿದ್ದರು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಆಡಳಿತಕ್ಕೆ ಒಂದು ಪ್ರಬಲವಾದ ವಿರೋಧ ಪಕ್ಷ ಇರಬೇಕು. ಆದರೆ, ಮೋದಿ ಎಷ್ಟು ಅದೃಷ್ಟವಂತರು ಎಂದರೆ, ಅವರಿಗೆ ಲೋಕಸಭೆಯಲ್ಲಿ ಪ್ರಭಲ ವಿರೋಧ ಪಕ್ಷವೇ ಇಲ್ಲ. ಹೀಗಿದ್ದಾಗ ಅವರು, ದೇಶಕ್ಕಾಗಿ ಅತ್ಯುತ್ತಮ ಯೋಜನೆ ನೀಡಬೇಕಿತ್ತು. ಆ ಕೆಲಸ ಮಾಡಲಿಲ್ಲ ಎಂದು ಟೀಕಿಸಿದರು.
ಹಿಂದೆ ವಾಜಪೇಯಿ ಅವರು ಒಂದು ಕ್ಷೇತ್ರದಿಂದ ಸ್ಪರ್ಧಿಸಿದ್ದಾಗ ಅಲ್ಲಿ ನೀವು ಸೋಲುತ್ತೀರಿ. ಇನ್ನೊಂದು ಕ್ಷೇತ್ರದಿಂದ ಸ್ಪರ್ಧಿಸಿ, ಗೆಲ್ಲಿ. ನಿಮ್ಮಂತವರು ಲೋಕಸಭೆಯಲ್ಲಿ ಇರಬೇಕು ಎಂದು ಬಯಸಿದ್ದು. ಪ್ರಬಲ ವಿರೋಧ ಪಕ್ಷಗಳಿದ್ದಾಗಲೇ ಉತ್ತಮ ಆಡಳಿತ ಸಾಧ್ಯ. ಆದರೆ, ವಿರೋಧ ಪಕ್ಷಗಳನ್ನೇ ರಾಜಕೀಯವಾಗಿ ಮುಗಿಸುತ್ತೇನೆ ಎಂದು ಹೇಳುತ್ತಿದ್ದಾರೆ ಎಂದರು.
ಇವಿಎಂನಲ್ಲಿ ಮೋದಿ ಫೋಟೋ ಇದ್ರೆ ಮತ ಹಾಕಿ: 3ರಿಂದ 4 ಬಾರಿ ಆಯ್ಕೆಯಾದವರು, ಕೇಂದ್ರದಲ್ಲಿ ಸಚಿವರಾದವರು ತಮಗೆ ಮತ ಹಾಕಿ ಎನ್ನುವ ಬದಲು, ನರೇಂದ್ರ ಮೋದಿ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ತಮ್ಮ ಸಾಧನೆ ಹೇಳಿಕೊಂಡು, ಮತ ಕೇಳಲೂ ಆಗದಂತಹ ಸ್ಥಿತಿಯಲ್ಲಿ ಬಿಜೆಪಿಯ ಸಂಸದರು, ಸಚಿವರಿದ್ದಾರಾ? ಜಿಲ್ಲೆಯ ಲೋಕಸಭೆ ಚುನಾವಣೆಯ ಮತದಾನದಂದು ಇವಿಎಂ ಮತ ಯಂತ್ರದಲ್ಲಿ ಮೋದಿ ಫೋಟೋ ಇದ್ದರೆ, ಅವರಿಗೆ ಮತ ಕೊಡಿ ಎಂದು ಟೀಕಿಸಿದರು.
Advertisement
ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೋಟು ನಿಷೇಧ ಮಾಡಿದ ಬಳಿಕ ಒಬ್ಬರಾದರೂ ಜೈಲಿಗೆ ಹೋದರಾ. ಶೇ.99.3ರಷ್ಟು ಹಳೆಯ ನೋಟು ಪುನಃ ಬಂದಿವೆ. ಹಾಗಾದರೆ, ನೋಟು ನಿಷೇಧದ ಉದ್ದೇಶ ಸಫಲವಾಯಿತೇ? ತೆರಿಗೆಗಳ್ಳರನ್ನು ಜೈಲಿಗೆ ಹಾಕಿಲಿಲ್ಲ ಏಕೆ. ತೆರಿಗೆಗಳ್ಳರನ್ನು ಹಿಡಿಯಲು ನೋಟು ನಿಷೇಧವೇ ಮಾಡಬೇಕಿತ್ತಾ. ಅದಕ್ಕೆ ಪರ್ಯಾಯ ಮಾರ್ಗಗಳು ಇರಲಿಲ್ಲವೇ ? ಎಂದು ಪ್ರಶ್ನಿಸಿದರು.
Related Articles
Advertisement
ವೀಣಾ ಕಾಶಪ್ಪನವರ, ಜಿ.ಪಂ. ಅಧ್ಯಕ್ಷೆಯಾಗಿ ಅತ್ಯುತ್ತಮ ಕೆಲಸ ಮಾಡಿದ್ದು, ಕ್ರಿಯಾಶೀಲರಾಗಿದ್ದಾರೆ. ಇಲ್ಲಿಂದ ಮೂರು ಬಾರಿ ಗೆದ್ದವರು, ಮೋದಿ ನೋಟಿ ಮತ ಕೊಡಿ ಎನ್ನುತ್ತಿದ್ದಾರೆ. ಹೀಗಾಗಿ ಜನರು, ಮೋದಿಯನ್ನು ನಂಬಲು ಸಿದ್ಧರಿಲ್ಲ. ಕಾಂಗ್ರೆಸ್‌ಗೆ ಮತ ಕೊಡಿ ಎಂದು ಮನವಿ ಮಾಡಿದರು.