Advertisement

ದೈವಸ್ಥಾನದಿಂದ ಕಳವು: ಸೆರೆ

11:40 AM Apr 24, 2018 | Harsha Rao |

ಮೂಲ್ಕಿ: ಬಪ್ಪನಾಡು ದೇವಸ್ಥಾನದ ಬಳಿ ಇರುವ ವರ್ತೆ ಪಂಜುರ್ಲಿ ದೈವಸ್ಥಾನದಲ್ಲಿ ಮಾ.27ರಿಂದ 31ರ ಅವಧಿಯಲ್ಲಿ ನಡೆದ ಬೆಳ್ಳಿಯ ವಸ್ತುಗಳ ಕಳವು ಪ್ರಕರಣದ ಆರೋಪಿಯನ್ನು ಮೂಲ್ಕಿ ಪೊಲೀಸರು  ಸೊತ್ತು ಸಹಿತ ಬಂಧಿಸಿ  ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Advertisement

ಆರೋಪಿ ಎಸ್‌. ನಾಗರಾಜ್‌ (30)  ತಮಿಳುನಾಡಿನ ತಿರುಪೂರು ತಾಲೂಕಿನ ಅನುಪರಂಪಾಳಯಂ ನಿವಾಸಿಯಾಗಿದ್ದು, ಖಚಿತ ಮಾಹಿತಿ  ಪಡೆದು ಅಲ್ಲಿಗೆ ತೆರಳಿದ ಮೂಲ್ಕಿ ಪೊಲೀಸರು  ಬೆಳ್ಳಿಯ ಒಂದು ಖಡ್ಗ, 2 ಬೆಳ್ಳಿಯ ದೀಪ ಮತ್ತು ರಿಂಗ್‌ ಹಾಕಿರುವ ಬೆತ್ತದೊಂದಿಗೆ ಆತನನ್ನು ಬಂಧಿಸಿ ಮೂಲ್ಕಿಗೆ ಕರೆತಂದಿದ್ದಾರೆ. 

ಕಮಿಷನರ್‌ ವಿಪುಲ್‌ ಕುಮಾರ್‌ ಮಾರ್ಗದರ್ಶನದಲ್ಲಿ ಡಿಸಿಪಿಗಳಾದ ಹನುಮಂತರಾಯ ಮತ್ತು ಉಮಾ ಪ್ರಶಾಂತ್‌ ಅವರ ನಿರ್ದೇಶನದಂತೆ ಪಣಂಬೂರು ಎಸಿಪಿ ರಾಜೇಂದ್ರ   ನೇತೃತ್ವದಲ್ಲಿ ಮೂಲ್ಕಿ ಇನ್ಸ್‌ಪೆಕ್ಟರ್‌  ಶ್ರೀಕಾಂತ್‌ ಕೆ., ಎಸ್‌.ಐ. ಶೀತಲ್‌ ಅಲಗೂರು, ಎ.ಎಸ್‌.ಐ. ಚಂದ್ರಶೇಖರ್‌, ಸಿಬಂದಿ ವರ್ಗದ  ಧರ್ಮೇಂದ್ರ, ಅಣ್ಣಪ್ಪ, ಸುರೇಶ್‌, ಮಹಮ್ಮದ್‌ ಹುಸೇನ್‌, ಬಸವರಾಜ, ಮನೋಜ್‌ ಕುಮಾರ್‌ಮುಂತಾದವರು ಆತನನ್ನು  ಬಂಧಿಸುವಲ್ಲಿ ಶ್ರಮಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next