Advertisement

ಲಂಡನ್‌ನಲ್ಲಿ ಸಿಕು¤ ಬುದ್ಧನ ವಿಗ್ರಹ

06:00 AM Aug 16, 2018 | |

ಲಂಡನ್‌: ಅರವತ್ತು ವರ್ಷಗಳ ಹಿಂದೆ ಭಾರತದಿಂದ ಕಳವಾಗಿದ್ದ 12 ಶತಮಾನದ ಬುದ್ಧನ ಪ್ರತಿಮೆಯನ್ನು ಬ್ರಿಟನ್‌ ಭಾರತಕ್ಕೆ ಮರಳಿಸಿದೆ. ಭಾರತದ ಸ್ವಾತಂತ್ರ್ಯ ದಿನದಂದೇ ಈ ವಿಗ್ರಹ ಭಾರ ತಕ್ಕೆ ಮರಳಿರುವುದು ವಿಶೇಷ. 

Advertisement

ಸ್ಕಾಟ್ಲೆಂಡ್‌ಯಾರ್ಡ್‌ ಪೊಲೀಸರು ಯು.ಕೆ.ಯಲ್ಲಿರುವ ಭಾರತದ ಹೈಕಮಿಷನರ್‌ ವೈ.ಕೆ.ಸಿನ್ಹಾ ಹಸ್ತಾಂತರಿಸಿದ್ದಾರೆ. ನಳಂದಾ ದ ಲ್ಲಿ ರುವ ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ವಸ್ತು ಸಂಗ್ರಹಾಲಯದಿಂದ  1961 ರಲ್ಲಿ 14 ವಿಗ್ರಹಗಳು ಕಳುವಾಗಿದ್ದವು. ಅದರಲ್ಲಿ ಬುದ್ಧನ ಈ ಕಂಚಿನ ವಿಗ್ರಹವೂ ಒಂದು. ಕಳ್ಳರಿಂದ ಮಾರಾಟವಾದ ನಂತರ, ಲಂಡನ್‌ನಲ್ಲಿರುವ ಪ್ರಾಚೀನ ವಸ್ತು ಮಾರಾಟದ ಮಳಿಗೆ  ನೀಡಲಾಗಿತ್ತು. ಭಾರತದ ವಿಜಯ ಕುಮಾರ್‌ ಮತ್ತು ಎಸೋಸಿ ಯೇಷನ್‌ ಫಾರ್‌ ರಿಸರ್ಚ್‌ ಇನ್‌ ಟು ಕ್ರೈಮ್ಸ್‌ ಎಗೆ ನೆಸ್ಟ್‌ ಆರ್ಟ್ಸ್ (ಎಆರ್‌ಸಿಎ) ಮಾರ್ಚ್‌ನಲ್ಲಿ ನಡೆದಿದ್ದ ವಾಣಿಜ್ಯ ಉತ್ಸವದಲ್ಲಿ ವಿಗ್ರಹ ಪತ್ತೆ ಮಾಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next