Advertisement

War: 2 ವರ್ಷಗಳಿಂದ ನಡೆಯುತ್ತಿರುವ ರಷ್ಯಾ-ಉಕ್ರೈನ್‌ ಯುದ್ಧ: ಉಕ್ರೈನ್‌ ಸಂಪೂರ್ಣ ನಾಶ

06:12 PM Feb 24, 2024 | Team Udayavani |

ಮಾಸ್ಕೋ: ಕದನ ವಿರಾಮ ಘೋಷಿಸಿ ಎಂಬ ವಿಶ್ವಸಂಸ್ಥೆಯ ಎಚ್ಚರಿಕೆಗೂ ಬಗ್ಗದ ರಷ್ಯಾ, ಉಕ್ರೈನ್‌ ವಿರುದ್ಧ ಯುದ್ಧಕ್ಕಿಳಿದು ಎರಡು ವರ್ಷಗಳು ಸಂದಿವೆ. ಏತನ್ಮಧ್ಯೆ ರಷ್ಯಾದ ಯುದ್ಧದಲ್ಲಿ ಉಕ್ರೈನ್‌ ಸಂಪೂರ್ಣ ನಾಶಗೊಂಡಿರುವ ದೃಶ್ಯ ಸೆಟಲೈಟ್‌ ನಲ್ಲಿ ಸೆರೆಯಾಗಿದೆ.

Advertisement

ಇದನ್ನೂ ಓದಿ:Manoj Rajput: ಮದುವೆ ಆಗುವುದಾಗಿ 13 ವರ್ಷಗಳಿಂದ ನಿರಂತರ ಅತ್ಯಾಚಾರ; ಖ್ಯಾತ ನಟ ಬಂಧನ

ಕಳೆದ ಎರಡು ವರ್ಷಗಳಿಂದ ರಷ್ಯಾ ನಿರಂತರವಾಗಿ ಉಕ್ರೈನ್‌ ಮೇಲೆ ಬಾಂಬ್‌ ದಾಳಿ ನಡೆಸುತ್ತಲೇ ಇದೆ. ರಾಜಿಗೆ ಹೆಚ್ಚಿನ ಮಹತ್ವ ಇಲ್ಲ ಎಂದು ಘೋಷಿಸಿರುವ ವ್ಲಾದಿಮಿರ್‌ ಪುಟಿನ್‌, ಯಾವುದೇ ಮಾತುಕತೆ ಇದ್ದರೂ ಕೂಡಾ ಅದು ರಷ್ಯಾದ ನಿಯಮಕ್ಕೊಳಪಟ್ಟಿರುತ್ತದೆ ಎಂದು ತಿಳಿಸುವ ಮೂಲಕ ಯುದ್ಧಕ್ಕೆ ವಿರಾಮ ಘೋಷಿಸುವುದನ್ನು ಪರೋಕ್ಷವಾಗಿ ತಳ್ಳಿಹಾಕಿದ್ದರು.

ರಷ್ಯಾದ ದಾಳಿಯಿಂದಾಗಿ ಉಕ್ರೈನ್‌ ನ ಶಾಲೆಗಳು, ಯೂನಿರ್ವಸಿಟಿ ಕಟ್ಟಡಗಳು, ಅಪಾರ್ಟ್‌ ಮೆಂಟ್ಸ್‌ ಮತ್ತು ರೇಡಿಯೋ ಸ್ಟೇಶನ್‌, ಸಾವಿರಾರು ಮನೆಗಳು ಸಂಪೂರ್ಣವಾಗಿ ನಾಶಗೊಂಡು ಸ್ಮಶಾನದಂತೆ ಆಗಿರುವ ದೃಶ್ಯ ಸೆಟಲೈಟ್‌ ಚಿತ್ರದಿಂದ ಬಹಿರಂಗವಾಗಿದೆ.

ಅವ್ದಿಕಾ ಪ್ರದೇಶದಲ್ಲಿ ಉಕ್ರೈನ್‌ ಸೇನೆ ಹಿಂದೆ ಸರಿದ ಬಳಿಕ ರಷ್ಯಾ ಸಂಪೂರ್ಣ ಹಿಡಿತ ಸಾಧಿಸಿರುವುದಾಗಿ ಘೋಷಿಸಿತ್ತು. ಆದರೆ ಉಕ್ರೇನಿಯನ್‌ ಸೇನಾ ಪಡೆಗಳು ಇನ್ನೂ ಕೂಡಾ ರಷ್ಯಾದ ಪ್ರದೇಶದಲ್ಲಿ ಯುದ್ಧದಲ್ಲಿ ನಿರತರಾಗಿರುವುದಾಗಿ ಮಾಸ್ಕೋ ತಿಳಿಸಿದ್ದು, ಇದರಿಂದ ಯುದ್ಧದ ನಂತರದ ತೀವ್ರವಾದ ಪರಿಣಾಮ ಬಿಂಬಿಸುತ್ತಿದೆ ಎಂದು ವರದಿ ವಿವರಿಸಿದೆ.

Advertisement

2024ರಲ್ಲಿಯೂ ಈ ಸಂಘರ್ಷ ಮುಂದುವರಿಯುವ ಸಾಧ್ಯತೆ ಇದ್ದಿರುವುದಾಗಿ ವಿಶ್ಲೇಷಕರು ಮತ್ತು ರಾಯಭಾರಿಗಳು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. ಕೈವ್‌ ಬೇಷರತ್‌ ಶರಣಾಗಬೇಕು ಎಂಬ ಪುಟಿನ್‌ ಬೇಡಿಕೆಯನ್ನು ಉಕ್ರೈನ್‌ ತಳ್ಳಿಹಾಕಿತ್ತು. ಮತ್ತೊಂದೆಡೆ ಭವಿಷ್ಯದಲ್ಲಿ ಯಾವುದೇ ಮಾತುಕತೆ ಇಲ್ಲ ಎಂದು ರಷ್ಯಾ ತಿರುಗೇಟು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next