Advertisement

Theft: ಓಎಲ್‌ಎಕ್ಸ್ ನಲ್ಸಿ ಕದ್ದ ಬೈಕ್‌ ಮಾರಾಟ!

11:35 AM Oct 02, 2024 | Team Udayavani |

ಬೆಂಗಳೂರು: ದ್ವಿಚಕ್ರ ವಾಹನಗಳನ್ನು ಕಳವು, ಮಾಡಿ, ಓಎಲ್‌ಎಕ್ಸ್‌ನಲ್ಲಿ ಹಾಕಿ ಮಾರುತ್ತಿದ್ದ ಇಬ್ಬ ರನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿ ದ್ದಾರೆ. ಶಿವಾಜಿನಗರ ನಿವಾಸಿ ಶಹಬಾಜ್‌ (26) ಮತ್ತು ದೊಡ್ಡನಾಗಮಂಗಲ ನಿವಾಸಿ ಓಂ(19) ಬಂಧಿತರು.

Advertisement

12.75 ಲಕ್ಷ ರೂ. ಮೌಲ್ಯದ 13 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಇತ್ತೀಚೆಗೆ ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯ ಎಇಸಿಎಸ್‌ ಲೇಔಟ್‌ನ ಸಿಂಗಸಂದ್ರ ನಿವಾಸಿಯೊºಬರು ಮನೆ ಮುಂದೆ ನಿಲುಗಡೆ ಮಾಡಿದ್ದ ಬೈಕ್‌ ಕಳವು ಮಾಡಿದ್ದರು. ಆರೋಪಿಗಳ ಪೈಕಿ ಶಹಬಾಜ್‌, ಮನೆ ಮತ್ತು ಪಾರ್ಕಿಂಗ್‌ ಸ್ಥಳಗಳಲ್ಲಿ ನಿಲುಗಡೆ ಮಾಡುತ್ತಿದ್ದ ದ್ವಿಚಕ್ರ ವಾಹನಗಳ ಹ್ಯಾಂಡಲ್‌ ಲಾಕ್‌ ಮುರಿದು, ವೈಯರ್‌ ಡೈರೆಕ್ಟ್ ಮಾಡಿ ಕಳವು ಮಾಡುತ್ತಿದ್ದ.

ಇನ್ನು ಓಂ ಯಾವ ಸ್ಥಳಗಳಲ್ಲಿ ಹೆಚ್ಚು ಬೈಕ್‌ಗಳು ನಿಲ್ಲಿಸಲಾಗುತ್ತದೆ ಎಂಬ ಮಾಹಿತಿಯನ್ನು ಶಹಬಾಜ್‌ಗೆ ನೀಡುತ್ತಿದ್ದ. ಹೀಗಾಗಿ ಇಬ್ಬರು ಸೇರಿ ಬೈಕ್‌ಗಳ ಕಳವು ಮಾಡುತ್ತಿದ್ದರು. ಕಳವು ಬೈಕ್‌ಗಳ ಪೋಟೋಗಳನ್ನು ಓಂ ತನ್ನ ಓಎಲ್‌ಎಕ್ಸ್‌ ಖಾತೆಯಲ್ಲಿ ಹಾಕಿ, ಗ್ರಾಹಕರನ್ನು ಸಂಪರ್ಕಿಸುತ್ತಿದ್ದರು. ಬಳಿಕ ಕಡಿಮೆ ಮೊತ್ತಕ್ಕೆ ಮಾರುತ್ತಿದ್ದರು. ಆರೋಪಿಗಳ ಬಂಧನದಿಂದ ರಾಮಮೂರ್ತಿನಗರ, ಪರಪ್ಪನ ಅಗ್ರಹಾರ, ಆರ್‌ .ಟಿ.ನಗರ, ಕೆ.ಆರ್‌.ಪುರ, ಬ್ಯಾಟರಾಯನಪುರ ಠಾಣೆಗಳಲ್ಲಿ ದಾಖಲಾಗಿದ್ದ 9 ಪ್ರಕರಣಗಳು ಪತ್ತೆಯಾಗಿವೆ. ಠಾಣಾಧಿಕಾರಿ ಬಿ.ಎಸ್‌.ಸತೀಶ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next