Advertisement

ಮಲ್ಯಾಡಿ ದೇವಸ್ಥಾನದಲ್ಲಿ ಕಳವು:ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

06:32 AM Mar 18, 2019 | |

ತೆಕ್ಕಟ್ಟೆ: ಕುಂದಾಪುರ ತಾಲೂಕಿನ ತೆಕ್ಕಟ್ಟೆ  ಮಲ್ಯಾಡಿ ಶ್ರೀ ಸತ್ಯಗಣಪತಿ ಹಾಗೂ ಶ್ರೀ ಮಹಾದೇವಿ ನಂದಿಕೇಶ್ವರ ದೇವಸ್ಥಾನದಲ್ಲಿ ರವಿವಾರ ತಡರಾತ್ರಿ ಗಂಟೆ 1.06 ರ ಸುಮಾರಿಗೆ ನಾಲ್ವರು ಮುಸುಕುಧಾರಿಗಳ ತಂಡ ಕಳ್ಳತನ ಮಾಡಿದ ಘಟನೆ ಸಂಭವಿಸಿದೆ.

Advertisement

ಸರಿ ಸುಮಾರು ರಾತ್ರಿ ಗಂಟೆ 1.06 ರ ಸುಮಾರಿಗೆ ಉಳ್ಳೂರು ಕಡೆಯಿಂದ ಮಾರುತಿ ಸ್ವಿಫ್ಟ್‌ ಡಿಸೈಯರ್‌ ಕಾರಿನಲ್ಲಿ ಬಂದ ನಾಲ್ವರು ಮುಸುಕುಧಾರಿಗಳ ತಂಡ ಮೊದಲು ಮಲ್ಯಾಡಿ ಶ್ರೀ ಸತ್ಯಗಣಪತಿ ದೇವಳದಲ್ಲಿದ್ದ ಕಾಣಿಕೆ ಡಬ್ಬವನ್ನು ಹೊತ್ತೂಯ್ದು ನಂತರ ದೇವಳ ಗರ್ಭಗುಡಿಯನ್ನು ಪ್ರವೇಶಿಸಿರುವ ದೃಶ್ಯ ದೇವಳದಲ್ಲಿ ಅಳವಡಿಸಿದ ಸಿಸಿ ಕೆಮರಾದಲ್ಲಿ ದಾಖಲಾಗಿದೆ.


ನಂತರ ಸಮೀಪದಲ್ಲಿರುವ ಶ್ರೀ ಮಹಾದೇವಿ ನಂದಿಕೇಶ್ವರ ದೇವಸ್ಥಾನದಲ್ಲಿನ ಕಾಣಿಕೆ ಡಬ್ಬ ಸಹಿತ ಒಟ್ಟು ನಾಲ್ಕು ಕಾಣಿಕೆ ಡಬ್ಬ ಹಾಗೂ ಕಾಣಿಕೆ ಡಬ್ಬದಲ್ಲಿದ್ದ ಸುಮಾರು 35 ಸಾವಿರಕ್ಕೂ ಅಧಿಕ ಮೊತ್ತವನ್ನು ಕಳ್ಳರು ಎರಗಿಸಿ ಕಾರಿನಲ್ಲಿ ಪರಾರಿಯಾದ್ದಾರೆ ಎಂದು ಮಾಜಿ ಗ್ರಾ.ಪಂ. ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.

ಸಿಸಿ ಕೆಮರಾದಲ್ಲಿ ದೃಶ್ಯ ಸೆರೆ

ನಾಲ್ವರು ಮುಸುಕುಧಾರಿಗಳು ಉದ್ದನೆಯ ಶರ್ಟ್‌ ಹಾಗೂ ಕೈ ಚೀಲ ( ಗ್ಲೌಸ್‌) ಧರಿಸಿದ್ದು ಅತ್ಯಂತ ಜಾಣಾಕ್ಷತೆಯಿಂದ ದೇವಸ್ಥಾನದ ಕಾಣಿಕೆ ಡಬ್ಬವನ್ನು ಇಬ್ಬರು ಹೊತ್ತೂಯ್ಯುವ ದೃಶ್ಯ ಸೆರೆಯಾಗಿದೆ. ಇತ್ತೀಚೆಗಷ್ಟೆ ಕುಂದಾಪುರ ತಾಲೂಕಿನ ಗೋಳಿಯಂಗಡಿಯ ಜುವೆಲ್ಲರಿ ಶಾಪ್‌ನಲ್ಲಿ ನಡೆದ ಕಳ್ಳತನ ಮಾದರಿಯಲ್ಲಿಯೇ ಬಿಳಿ ಮಾರುತಿ ಸ್ವಿಫ್ಟ್‌ ಡಿಸೈಯರ್‌ ಕಾರು ಬಳಸಲಾಗಿದೆ. ಜಿಲ್ಲೆಯಲ್ಲಿ ಯಾವುದೋ ಅಂತರರಾಜ್ಯ ಕಳ್ಳರ ತಂಡ ಕಾರ್ಯಚರಿಸುತ್ತಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.


ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಕೋಟ ಪೊಲೀಸ್‌ ಠಾಣಾಧಿಕಾರಿ ರಫೀಕ್‌, ಜಿಲ್ಲಾ ಬೆರಳಚ್ಚು ತಜ್ಞರು, ಶ್ವಾನದಳ ಹಾಗೂ ಕೋಟ ಪೊಲೀಸ್‌ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next