Advertisement

ಜಾಗತಿಕ ಸ್ಥಿರತೆ : ಮುಂಬಯಿ ಶೇರು 141 ಅಂಕ ಏರಿಕೆ

04:14 PM Feb 15, 2018 | udayavani editorial |

ಮುಂಬಯಿ : ಜಾಗತಿಕ ಶೇರು ಮಾರುಕಟ್ಟೆಗಳಲ್ಲಿನ ಸ್ಥಿರತೆ, ಡಾಲರ್‌ ಎದುರು ರೂಪಾಯಿ ಬಲವರ್ಧನೆಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದು ಗುರುವಾರದ ವಹಿವಾಟನ್ನು 141.52 ಅಂಕಗಳ ಏರಿಕೆಯೊಂದಿಗೆ 34,297.47 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ.

Advertisement

ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 44.60 ಅಂಕಗಳ ಮುನ್ನಡೆಯನ್ನು ಸಾಧಿಸಿ ದಿನದ ವಹಿವಾಟನ್ನು 10,618.10 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿದೆ. 

ರಖಂ ಬೆಲೆ ಸೂಚ್ಯಂಕ ಆರು ತಿಂಗಳ ಕನಿಷ್ಠ ಮಟ್ಟವಾಗಿ ಕಳೆದ ಜನವರಿಯಲ್ಲಿ ಶೇ.2.84ಕ್ಕೆ ಇಳಿದಿರುವುದು ಮತ್ತು ಕಂಪೆನಿಗಳ ಡಿಸೆಂಬರ್‌ ತ್ತೈಮಾಸಿಕ ಫ‌ಲಿತಾಂಶ ಉತ್ತಮ ಇರುವುದು ಶೇರು ಮಾರುಕಟ್ಟೆಗೆ ಪುಷ್ಟಿ ನೀಡಿದೆ. 

ವಿದೇಶಿ ಹೂಡಿಕೆದಾರರು ನಿವ್ವಳ 728.71 ಕೋಟಿ ಮೌಲ್ಯದ ಶೇರುಗಳನ್ನು ಮಾರಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು 152.39 ಕೋಟಿ ಶೇರುಗಳನ್ನು ಮಾರಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next