ಮುಂಬಯಿ: ಜಾಗತಿಕ ಷೇರುಪೇಟೆಯ ಧನಾತ್ಮಕ ವಹಿವಾಟಿನ ಪರಿಣಾಮ ಗುರುವಾರ(ಅಕ್ಟೋಬರ್ 20) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ 250ಕ್ಕೂ ಅಧಿಕ ಅಂಕ ಏರಿಕೆಯಾಗಿದ್ದು, ಎಚ್ ಡಿಎಫ್ ಸಿ, ಕೋಟಕ್ ಬ್ಯಾಂಕ್, ಇನ್ಫೋಸಿಸ್ ಷೇರುಗಳು ಹೆಚ್ಚಿನ ಲಾಭಗಳಿಸಿವೆ.
ಇದನ್ನೂ ಓದಿ:ತಿಂಗಳಿಗೆ 75 ಸಾವಿರ ರೂ. ದುಡಿಯುತ್ತಿದೆ ಒಂದು ವರ್ಷದ ಮಗು! ಹೇಗೆ ಗೊತ್ತಾ?
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 265.84 ಅಂಕಗಳಷ್ಟು ಏರಿಕೆಯಾಗಿದ್ದು, 61,525.80 ಅಂಕಗಳೊಂದಿಗೆ ಆರಂಭಿಕ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 93.45 ಅಂಕ ಏರಿಕೆಯಾಗಿದ್ದು, 18,360.05 ಅಂಕಗಳ ಗಡಿ ತಲುಪಿದೆ.
ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಸನ್ ಫಾರ್ಮಾ, ಪವರ್ ಗ್ರಿಡ್, ಎನ್ ಟಿಪಿಸಿ, ಎಚ್ ಡಿಎಫ್ ಸಿ, ಕೋಟಕ್ ಬ್ಯಾಂಕ್ ಮತ್ತು ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಎಚ್ ಸಿಎಲ್ ಟೆಕ್, ಟೆಕ್ ಮಹೀಂದ್ರ, ಟಿಸಿಎಸ್ ಮತ್ತು ಭಾರ್ತಿ ಏರ್ ಟೆಲ್ ಷೇರುಗಳು ನಷ್ಟ ಕಂಡಿದೆ.
ಬುಧವಾರ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 456/09 ಅಂಕಗಳಷ್ಟು ಕುಸಿತ ಕಂಡಿದ್ದು, 61,259.96 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು. ಎನ್ ಎಸ್ ಇ ನಿಫ್ಟಿ ಕೂಡಾ 152.15 ಅಂಕ ಇಳಿಕೆಯಾಗಿದ್ದು, 18,266.60 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿತ್ತು.