Advertisement

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 364 ಅಂಕ ಏರಿಕೆ, 15,885ರ ಗಡಿ ದಾಟಿದ ನಿಫ್ಟಿ

04:43 PM Aug 02, 2021 | Team Udayavani |

ಮುಂಬಯಿ:ಈಕ್ವಿಟಿ ಸೂಚ್ಯಂಕ ಸೋಮವಾರ (ಆಗಸ್ಟ್ 02) ಏರಿಕೆ ಕಂಡ ಪರಿಣಾಮ ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 350ಕ್ಕೂ ಹೆಚ್ಚು ಅಂಕ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ಇದರಿಂದ ಐಟಿ ಮತ್ತು ಆಟೋ ಷೇರುಗಳು ಲಾಭ ಗಳಿಸುವಂತಾಗಿದೆ.

Advertisement

ಇದನ್ನೂ ಓದಿ:ಡೆಲ್ಟಾ ಪ್ಲಸ್ ರೂಪಾಂತರಿ ವಿರುದ್ಧ ಕೋವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿಯಾಗಿದೆ: ಐಸಿಎಂಆರ್

ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 364 ಅಂಕಗಳಷ್ಟು ಏರಿಕೆ ಕಂಡಿದ್ದು, 52,951 ಅಂಕಗಳೊಂದಿಗೆ ದಿನದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 122 ಅಂಕಗಳಷ್ಟು ಜಿಗಿತ ಕಂಡಿದ್ದು, 15,885ರ ಗಡಿ ತಲುಪುವಂತಾಗಿದೆ.

ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಟೈಟಾನ್, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ರಿಲಯನ್ಸ್, ಟಿಸಿಎಸ್, ಆ್ಯಕ್ಸಿಸ್ ಬ್ಯಾಂಕ್, ಮಾರುತಿ ಮತ್ತು ಇನ್ಫೋಸಿಸ್ ಷೇರುಗಳು ಶೇ.3.44ರಷ್ಟು ಲಾಭಗಳಿಸಿದೆ. ಏತನ್ಮಧ್ಯೆ ಟಾಟಾ ಸ್ಟೀಲ್, ಬಜಾಜ್ ಫಿನ್ ಸರ್ವ್, ಬಜಾಜ್ ಫೈನಾನ್ಸ್, ಎನ್ ಟಿಪಿಸಿ ಮತ್ತು ಎಚ್ ಡಿಎಫ್ ಸಿ ಷೇರುಗಳು ನಷ್ಟ ಕಂಡಿದೆ.

ಎನ್ ಎಸ್ ಇ ನಿಫ್ಟಿ ಸೂಚ್ಯಂಕ ಏರಿಕೆಯಿಂದ ಆಟೋ ಮತ್ತು ಐಟಿ ಷೇರುಗಳು ಶೇ.4.79ರಷ್ಟು ಲಾಭಗಳಿಸಿದೆ.  ಮುಂಬಯಿ ಷೇರುಪೇಟೆಯ ಇಂದಿನ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 333.69 ಅಂಕಗಳಷ್ಟು ಏರಿಕೆಯಾಗಿದ್ದು, 52,920.53 ಅಂಕಗಳ ವಹಿವಾಟು ನಡೆಸಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 101.65 ಅಂಕ ಏರಿಕೆಯೊಂದಿಗೆ 15,864.70ರ ಗಡಿ ತಲುಪಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next