Advertisement

ಕೋವಿಡ್ ಎಫೆಕ್ಟ್:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಎರಡನೇ ದಿನವೂ ಕುಸಿತ, ಹೂಡಿಕೆದಾರರಿಗೆ ನಷ್ಟ

05:20 PM Apr 20, 2021 | Team Udayavani |

ಮುಂಬಯಿ: ಕೋವಿಡ್ 19 ಸೋಂಕು ಹೆಚ್ಚಳ ಹಾಗೂ ವಿವಿಧೆಡೆ ನಿರ್ಬಂಧ, ಲಾಕ್ ಡೌನ್ ಜಾರಿಗೊಳಿಸಿರುವುದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿದ್ದು, ಮುಂಬಯಿ ಷೇರುಮಾರುಕಟ್ಟೆ ಸಂವೇದಿ ಸೂಚ್ಯಂಕ ಮತ್ತು ನಿಫ್ಟಿ ಸತತ ಎರಡನೇ ದಿನವಾದ ಮಂಗಳವಾರವೂ(ಏಪ್ರಿಲ್ 20) ನಷ್ಟದಲ್ಲಿಯೇ ವಹಿವಾಟು ಮುಕ್ತಾಯಗೊಳಿಸಿದೆ.

Advertisement

ಇದನ್ನೂ ಓದಿ:ವಿಟ್ಲ : ನಿಯಂತ್ರಣ ತಪ್ಪಿ 20 ಅಡಿ ಉರುಳಿದ ಉರುಳಿದ ಸ್ಕೂಟರ್ ಅಪಾಯದಿಂದ ಪಾರಾದ ಮಹಿಳೆ

ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 243.62 ಅಂಕ ಕುಸಿತ ಕಂಡಿದ್ದು, 47,705.80 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಕಂಡಿದೆ. ಇಂದು ಬೆಳಗ್ಗಿನ ವಹಿವಾಟಿನಲ್ಲಿ ಎನ್ ಎಸ್ ಇ ನಿಫ್ಟಿ 167 ಅಂಕ ಏರಿಕೆ ಕಂಡಿದ್ದು, 14,500ರ ಗಡಿ ತಲುಪಿತ್ತು.

ಆದರೆ ದಿನಾಂತ್ಯದ ವಹಿವಾಟಿನಲ್ಲಿ 63.05 ಅಂಕ ಕುಸಿತ ಕಂಡಿದ್ದು, 14,296.40 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ. ಸೆನ್ಸೆಕ್ಸ್ ಕುಸಿತದ ಪರಿಣಾಮ ಆಲ್ಟ್ರಾಟೆಕ್ ಸಿಮೆಂಟ್, ಎಚ್ ಸಿಎಲ್ ಟೆಕ್, ಎಚ್ ಡಿಎಫ್ ಸಿ, ಟೆಕ್ ಮಹೀಂದ್ರಾ, ಎಚ್ ಡಿಎಫ್ ಸಿ ಬ್ಯಾಂಕ್ ಮತ್ತು ಎಚ್ ಯುಎಲ್ ಷೇರುಗಳು ನಷ್ಟ ಅನುಭವಿಸಿದೆ.

ಏತನ್ಮಧ್ಯೆ ಬಜಾಜ್ ಫಿನ್ ಸರ್ವ್, ಡಾ.ರೆಡ್ಡೀಸ್, ಬಜಾಜ್ ಫೈನಾನ್ಸ್, ಬಜಾಜ್ ಆಟೋ ಮತ್ತು ಮಾರುತಿ ಷೇರುಗಳು ಲಾಭ ಗಳಿಸಿವೆ. ಕೋವಿಡ್ ಹೆಚ್ಚಳವಾಗುತ್ತಿರುವ ನಿಟ್ಟಿನಲ್ಲಿ ಕೆಲವು ರಾಜ್ಯಗಳು ನಿರ್ಬಂಧಗಳನ್ನು ಘೋಷಿಸಿರುವುದು ಹೂಡಿಕೆದಾರರ ಮೇಲೆ ಪರಿಣಾಮ ಬೀರಿರುವುದಾಗಿ ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next