ಮುಂಬಯಿ: ಷೇರುಪೇಟೆಯ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಲಾಭಾಂಶವನ್ನು ಕಾಯ್ದಿರಿಸಿದ ಪರಿಣಾಮ ಮಂಗಳವಾರ(ಜೂನ್ 29) ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 186 ಅಂಕ ಕುಸಿತ ಕಂಡಿದೆ. ಇದರಿಂದ ಐಸಿಐಸಿಐ, ಇನ್ಫೋಸಿಸ್ ಷೇರುಗಳು ನಷ್ಟ ಕಂಡಿದೆ.
ಇದನ್ನೂ ಓದಿ:ಕೋರ್ಟ್ ಆದೇಶ ಧಿಕ್ಕರಿಸಿದ ಆರೋಪ : ದ.ಆಫ್ರಿಕಾ ಮಾಜಿ ಅಧ್ಯಕ್ಷರಿಗೆ 15 ತಿಂಗಳು ಜೈಲು ಶಿಕ್ಷೆ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 185.93 ಅಂಕ ಕುಸಿತ ಕಂಡಿದ್ದು, 52,549.66 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಳಿಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 66.25 ಅಂಕ ಕುಸಿತವಾಗಿದ್ದು, 15,748.45ರ ಗಡಿಗೆ ಕುಸಿದಿದೆ.
ಸೆನ್ಸೆಕ್ಸ್ ಮತ್ತು ನಿಫ್ಟಿ ಕುಸಿತದಿಂದ ಕೋಟಕ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಟೆಕ್ ಮಹೀಂದ್ರ, ಬಜಾಜ್ ಆಟೋ, ಮಹೀಂದ್ರ ಆ್ಯಂಡ್ ಮಹೀಂದ್ರ, ಎಸ್ ಬಿಐ ಮತ್ತು ಆ್ಯಕ್ಸಿಸ್ ಬ್ಯಾಂಕ್ ಷೇರುಗಳು ನಷ್ಟ ಅನುಭವಿಸಿದೆ.
ಪವರ್ ಗ್ರಿಡ್, ಎಚ್ ಯುಎಲ್, ಎನ್ ಟಿಪಿಸಿ, ಡಾ.ರೆಡ್ಡೀಸ್ ಮತ್ತು ನೆಸ್ಲೆ ಇಂಡಿಯಾ ಷೇರುಗಳು ಲಾಭ ಗಳಿಸಿದೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ನೆಗೆಟಿವ್ ವಹಿವಾಟು ಹೂಡಿಕೆದಾರರಲ್ಲಿ ಪರಿಣಾಮ ಬೀರಿರುವುದಾಗಿ ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.