ಮುಂಬೈ: ಜಾಗತಿಕ ವಿದ್ಯಮಾನಗಳ ನಡುವೆಯೇ ಶುಕ್ರವಾರ (ಆ.16) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 1000ಕ್ಕೂ ಅಧಿಕ ಅಂಕಗಳ ಜಿಗಿತದೊಂದಿಗೆ ವಹಿವಾಟು ಮುಂದುವರಿದಿದ್ದು, ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿದೆ.
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 1004.72 ಅಂಕಗಳ ಏರಿಕೆಯೊಂದಿಗೆ 80,110.60 ಅಂಕಗಳೊಂದಿಗೆ ವಹಿವಾಟು ನಡೆದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 283.20 ಅಂಕಗಳ ಏರಿಕೆಯೊಂದಿಗೆ 24,426 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ.
ಸಂವೇದಿ ಸೂಚ್ಯಂಕ, ನಿಫ್ಟಿ ಏರಿಕೆಯಿಂದ ವಿಪ್ರೋ, ಎಲ್ ಟಿಐ ಮೈಂಡ್ ಟ್ರೀ, ಮಹೀಂದ್ರಾ & ಮಹೀಂದ್ರಾ, ಟೆಕ್ ಮಹೀಂದ್ರಾ, ಟಾಟಾ ಮೋಟಾರ್ಸ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಎಸ್ ಬಿಐ ಲೈಫ್, ಎಚ್ ಡಿಎಫ್ ಸಿ ಲೈಫ್, ಸನ್ ಫಾರ್ಮಾ, ಹೀರೋ ಮೋಟೊಕಾರ್ಪ್ ಷೇರುಗಳು ನಷ್ಟ ಕಂಡಿದೆ.
ಎಂಟಿಎನ್ ಎಲ್ ಜತೆಗಿನ ಸರ್ವೀಸ್ ಅಗ್ರಿಮೆಂಟ್ ಗೆ ಬಿಎಸ್ ಎನ್ ಎಲ್ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದ್ದು, ಇದರ ಪರಿಣಾಮ ಎಂಟಿಎನ್ ಎಲ್ ಷೇರು ಬೆಲೆ ಶೇ.3.14ರಷ್ಟು ಕುಸಿತ ಕಂಡಿದೆ.