ಮುಂಬೈ: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಬುಧವಾರ (ಮಾರ್ಚ್ 27) 495.83 ಅಂಕಗಳ ಏರಿಕೆಯೊಂದಿಗೆ ವಹಿವಾಟು ಆರಂಭಿಸಿದೆ.
ಇದನ್ನೂ ಓದಿ:Cricket betting: ಗಲ್ಲಿ ಗಲ್ಲಿಗಳಲ್ಲಿ ನಡೆಯುತ್ತಿದೆ ಕ್ರಿಕೆಟ್ ಬೆಟ್ಟಿಂಗ್ ದಂಧೆ
ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕವು 495.83 ಅಂಕ ಏರಿಕೆಯೊಂದಿಗೆ 72, 966.13 ಅಂಕಗಳಲ್ಲಿ ವಹಿವಾಟು ಮುಂದುವರಿದಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 143.30 ಅಂಕ ಏರಿಕೆಯಾಗಿದ್ದು, 22, 148 ಅಂಗಳ ಮಟ್ಟ ತಲುಪಿದೆ.
ಷೇರುಪೇಟೆ ಸಂವೇದಿ ಸೂಚ್ಯಂಕ ಏರಿಕೆಯಾದ ಪರಿಣಾಮ ಮೋದಿಸನ್, ಬ್ರ್ಯಾಂಡ್ ಕಾನ್ಸೆಪ್ಟ್, ಥಾಮಸ್ ಸ್ಕಾಟ್, ಯುನಿ ಹೆಲ್ತ್, ರಾಜ್ ಆಯಿಲ್ ಮಿಲ್ಸ್, ಮಿಲಿಯಮ್ಸ್ ಸನ್ , ವಿಷ್ಣುಸೂರ್ಯ ಪ್ರೊ, ಮೈಕ್ರೋಸಾಫ್ಟ್, ಕೋಟಾಕ್ ಮಹೀಂದ್ರ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್ ಡಿಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಷೇರುಗಳು ಲಾಭಗಳಿಸಿದೆ.
ಮತ್ತೊಂದೆಡೆ ಫಿಡೆಲ್ ಸಾಫ್ಟ್ ಟೆಕ್, ಬಾಂಬೆ ಮೆಟ್ರಿಕ್ಸ್, ಎಸಿಇ ಇಂಟಗ್ರೇಟೆಡ್, ಪ್ಯಾರಾಮೌಂಡ್, ಲೀಡ್ ರೀಕ್ಲೈಮ್ ಷೇರುಗಳು ನಷ್ಟ ಕಂಡಿವೆ.
ಮಂಗಳವಾರ (ಮಾರ್ಚ್ 26) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 362 ಅಂಕ ಇಳಿಕೆಯೊಂದಿಗೆ 72,470 ಅಂಕಗಳಲ್ಲಿ ವಹಿವಾಟು ಮುಕ್ತಾಯ ಕಂಡಿತ್ತು. ಎನ್ ಎಸ್ ಇ ನಿಫ್ಟಿ ಕೂಡಾ 92 ಅಂಕ ಇಳಿಕೆಯೊಂದಿಗೆ 22,005 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿತ್ತು.