Advertisement

ಮುಂಬೈ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ ಭರ್ಜರಿ ಏರಿಕೆಯ ವಹಿವಾಟು, ನಿಫ್ಟಿ ಕೂಡಾ ಜಿಗಿತ

09:46 AM Nov 05, 2019 | Nagendra Trasi |

ಮುಂಬೈ:ಮುಂಬೈ ಶೇರುಪೇಟೆಯಲ್ಲಿ ಸೋಮವಾರ ಬೆಳಗ್ಗೆ ಭರ್ಜರಿ ವಹಿವಾಟು ಆರಂಭವಾಗುತ್ತಿದ್ದಂತೆಯೇ ಶೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕ 250ಅಂಕಗಳ ಏರಿಕೆ ಕಂಡಿದ್ದು, 40,343.83 ಅಂಕಗಳ ವಹಿವಾಟಿನ ಗುರಿ ತಲುಪಿದೆ.

Advertisement

ವಿದೇಶಿ ಬಂಡವಾಳದ ಒಳಹರಿವು ಹಾಗೂ ಕಾರ್ಪೋರೇಟ್ ತೆರಿಗೆ ಕಡಿತದ ಪರಿಣಾಮ ಚಿನಿವಾರ ಪೇಟೆಯ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕ 250 ಅಂಕಗಳ ಜಿಗಿತ ಕಂಡಿದೆ.

ಜಾಗತಿಕ ಶೇರುಪೇಟೆಯ ವಹಿವಾಟು ಕೂಡಾ ಭಾರೀ ಚೇತರಿಕೆ ಕಂಡಿದೆ. ಅಮೆರಿಕ ಮತ್ತು ಚೀನಾ ಶೇರುಪೇಟೆ ವಹಿವಾಟು ಏರುಗತಿಯಲ್ಲಿದೆ ಎಂದು ವರದಿ ತಿಳಿಸಿದೆ.

ಮುಂಬೈ ಶೇರುಪೇಟೆ ವಹಿವಾಟು ಬೆಳಗ್ಗೆ 9.27ಕ್ಕೆ ಆರಂಭಗೊಂಡಾಗ ಸೆನ್ಸೆಕ್ಸ್ 216.40 ಅಂಕ ಏರಿಕೆ ಕಂಡಿದೆ ಅಲ್ಲದೇ ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 81.70 ಅಂಕಗಳ ಏರಿಕೆ ಕಂಡಿದ್ದು, 11,972.30 ಅಂಕಗಳ ವಹಿವಾಟು ಆರಂಭಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next