ಮುಂಬಯಿ: ಅಮೆರಿಕದ ವಾಲ್ ಸ್ಟ್ರೀಟ್ ಷೇರುಮಾರುಕಟ್ಟೆಯಲ್ಲಿನ ಭರ್ಜರಿ ವಹಿವಾಟಿನ ಹಿನ್ನೆಲೆಯಲ್ಲಿ ಬುಧವಾರ (ಏಪ್ರಿಲ್ 20) ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 574 ಅಂಕಗಳಷ್ಟು ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ.
ಇದನ್ನೂ ಓದಿ:ಬಿಳಿಗಿರಿರಂಗನಾಥ ಸ್ವಾಮಿಗೆ ಸೋಲಿಗರಿಂದ ದೊಣ್ಣೆ ಏಟು..!
ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 574.35 ಅಂಕ ಏರಿಕೆಯಾಗಿದ್ದು, 57,037.50 ಅಂಕಗಳಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 177.90 ಅಂಕ ಏರಿಕೆಯೊಂದಿಗೆ 17,136.55 ಅಂಕಗಳ ಮಟ್ಟ ತಲುಪಿದೆ.
ಮಾರುತಿ, ಆಲ್ಟ್ರಾಟೆಕ್ ಸಿಮೆಂಟ್, ರಿಲಯನ್ಸ್, ಬಿಪಿಸಿಎಲ್, ಟಾಟಾ ಮೋಟಾರ್ಸ್, ಶ್ರೀಸಿಮೆಂಟ್ಸ್ ಮತ್ತು ಏಷಿಯನ್ ಪೇಂಟ್ಸ್ ಷೇರುಗಳು ಭರ್ಜರಿ ಲಾಭಗಳಿಸಿದೆ. ಮತ್ತೊಂದೆಡೆ ಬಜಾಜ್ ಫಿನ್ ಸರ್ವ್, ಐಸಿಐಸಿಐ ಬ್ಯಾಂಕ್, ಜೆಎಸ್ ಡಬ್ಲ್ಯು ಸ್ಟೀಲ್ ಮತ್ತು ಐಟಿಸಿ ಷೇರು ನಷ್ಟ ಕಂಡಿದೆ.
ಮಂಗಳವಾರ ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 703.59 ಅಂಕ ಇಳಿಕೆಯಾಗಿದ್ದು, 56,463.15 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿತ್ತು. ಅದೇ ರೀತಿ ಎನ್ ಎಸ್ ಇ ನಿಫ್ಟಿ 215 ಅಂಕ ಕುಸಿತಗೊಂಡಿದ್ದು, 16,958.65 ಅಂಕಗಳಲ್ಲಿ ವಹಿವಾಟು ಕೊನೆಗೊಂಡಿತ್ತು.