Advertisement

ಕೋವಿಡ್ 19 ಎಫೆಕ್ಟ್: ಭಾರೀ ಕುಸಿತ ಕಂಡ ಮುಂಬೈ ಶೇರುಪೇಟೆ ಸೂಚ್ಯಂಕ, ಹೂಡಿಕೆದಾರರಿಗೆ ನಷ್ಟ

10:01 AM Apr 22, 2020 | Nagendra Trasi |

ಮುಂಬೈ: ಕೋವಿಡ್ 19 ವೈರಸ್ ಜಾಗತಿಕವಾಗಿ ಆರ್ಥಿಕ ನಷ್ಟಕ್ಕೆ ಕಾರಣವಾಗಿರುವ ಬೆನ್ನಲ್ಲೇ ಬ್ಯಾಂಕಿಂಗ್, ಆಟೋ ಮತ್ತು ಐಟಿ ವಲಯದ ಶೇರು ವಹಿವಾಟು ಕ್ಷೀಣಗೊಂಡ ಪರಿಣಾಮ ಮಂಗಳವಾರ ಮುಂಬೈ ಶೇರುಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಬರೋಬ್ಬರಿ 1000 ಅಂಕಗಳಷ್ಟು ನಷ್ಟದೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.

Advertisement

ಮುಂಬೈ ಶೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕ 1,011ರಷ್ಟು ಅಂಕಗಳು ಕುಸಿತಗೊಂಡು 30,637 ಅಂಕಗಳೊಂದಿಗೆ ವಹಿವಾಟು ಅಂತ್ಯಗೊಂಡಿದೆ. ನಿಫ್ಟಿ 9000ಸಾವಿರಕ್ಕಿಂತಲೂ ಕೆಳ ಮಟ್ಟದಲ್ಲಿ ವಹಿವಾಟು ಕೊನೆಗೊಳಿಸಿದೆ.

ಶೇರುಗಳ ಮೌಲ್ಯದಲ್ಲಿ ಶೇ.12.30ರಷ್ಟು ಕುಸಿತ ಕಂಡ ಪರಿಣಾಮ ಇಂಡಸ್ ಲ್ಯಾಂಡ್ ಬ್ಯಾಂಕ್ ಸೆನ್ಸೆಕ್ಸ್ ಸೂಚ್ಯಂಕ ತೀವ್ರ ನಷ್ಟಕ್ಕೆ ಒಳಗಾಗಿದೆ. ಇನ್ನು ಬಜಾಜ್ ಫೈನಾನ್ಸ್, ಐಸಿಐಸಿಐ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಎಂ ಆ್ಯಂಡ್ ಎಂ, ಟಾಟಾ ಸ್ಟೀಲ್ ಮತ್ತು ಒಎನ್ ಜಿಸಿ ಶೇರುಗಳು ಶೇ.9.04ರಷ್ಟು ಕುಸಿತ ಕಂಡಿದೆ.

ಭಾರತದಲ್ಲಿ ಕೋವಿಡ್ 19 ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 600ಕ್ಕೆ ಸಮೀಪಸಿದ್ದು, ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 19ಸಾವಿರಕ್ಕೆ ಏರಿಕೆಯಾಗಿದೆ. ಏತನ್ಮಧ್ಯೆ ಡಾಲರ್ ಎದುರು ರೂಪಾಯಿ ಮೌಲ್ಯ ಕೂಡಾ ಕುಸಿತ ಕಂಡಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next