ಮುಂಬಯಿ: ದೇಶದಲ್ಲಿ ಕೋವಿಡ್ ನ ಎರಡನೇ ಅಲೆ ತೀವ್ರಗತಿಯಲ್ಲಿ ಮುಂದುವರಿದ ಹಿನ್ನೆಲೆಯಲ್ಲಿ ಮುಂಬಯಿ ಷೇರುಮಾರುಕಟ್ಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಿದ್ದು, ಸೋಮವಾರ(ಏ.19) ಸಂವೇದಿ ಸೂಚ್ಯಂಕ ಬರೋಬ್ಬರಿ 1000 ಅಂಕ ಕುಸಿತ ಕಂಡಿದೆ.
ಇದನ್ನೂ ಓದಿ:ತುಂಡಾಗಿ ಬಿದ್ದಿದ್ದ ಹೈಟೆನ್ಷನ್ ವಿದ್ಯುತ್ ತಂತಿ ತಗುಲಿ ರೈತ ಸಾವು:ಕರಕಲಾಗಿ ಬೇರ್ಪಟ್ಟ ರುಂಡ!
ಮುಂಬಯಿ ಷೇರುಪೇಟೆಯ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 1053.55 ಅಂಕಗಳಷ್ಟು ಇಳಿಕೆಯಾಗಿದ್ದು, 47,778.75 ಅಂಕಗಳ ವಹಿವಾಟು ನಡೆಸಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 332. 45 ಅಂಕ ಕುಸಿತವಾಗಿದ್ದು, 14, 280.50ರ ಗಡಿಗೆ ತಲುಪಿದೆ.
ದಲಾಲ್ ಸ್ಟ್ರೀಟ್ ನಲ್ಲಿ ಷೇರು ಸೂಚ್ಯಂಕ ಕುಸಿತದಿಂದ ಐಸಿಐಸಿಐ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಎಚ್ ಡಿಎಫ್ ಸಿ ಮತ್ತು ಎಸ್ ಬಿಐ ಷೇರುಗಳು ನಷ್ಟ ಅನುಭವಿಸಿದೆ. ಏತನ್ಮಧ್ಯೆ ವಿಪ್ರೋ ಷೇರು ಮಾತ್ರ ಲಾಭಗಳಿಸಿದೆ.
ಭಾರತದಲ್ಲಿ ಸತತ ಹನ್ನೊಂದು ದಿನಗಳಿಂದ ಕೋವಿಡ್ ಸೋಂಕು ಪ್ರಕರಣ ಹೆಚ್ಚಳವಾಗುತ್ತಿದ್ದು, ನಾಲ್ಕನೇ ದಿನವಾದ ಸೋಮವಾರ ಕೂಡಾ 2 ಲಕ್ಷಕ್ಕಿಂತಲೂ ಅಧಿಕ ಕೋವಿಡ್ ಸೋಂಕು ಪ್ರಕರಣ ವರದಿಯಾಗಿದೆ.