ಮುಂಬಯಿ: ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ ಬುಧವಾರ(ಆಗಸ್ಟ್ 04)ದ ಆರಂಭಿಕ ವಹಿವಾಟಿನಲ್ಲಿ 400 ಅಂಕಗಳ ಏರಿಕೆಯೊಂದಿಗೆ ಇದೇ ಮೊದಲ ಬಾರಿಗೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 54,000 ಅಂಕಗಳ ಗಡಿಯನ್ನು ತಲುಪಿದೆ. ಸೆನ್ಸೆಕ್ಸ್ ಜಿಗಿತದಿಂದ ಇನ್ಫೋಸಿಸ್, ಎಚ್ ಡಿಎಫ್ ಸಿ ಮತ್ತು ಐಸಿಐಸಿಐ ಬ್ಯಾಂಕ್ ಷೇರುಗಳು ಲಾಭಗಳಿಸಿದೆ.
ಇದನ್ನೂ ಓದಿ:ಮಾಜಿ ಶಾಸಕ ಇದಿನಬ್ಬ ಪುತ್ರನ ಮನೆ ಮೇಲೆ ಎನ್ ಐ ಎ ಅಧಿಕಾರಿಗಳ ದಾಳಿ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಇಂದು ಆರಂಭಿಕ ವಹಿವಾಟಿನಲ್ಲಿ 415.33 ಅಂಕ ಏರಿಕೆಯಾಗಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟದ 54,256.13 ಅಂಕಗಳ ಗಡಿ ಮುಟ್ಟಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ ಕೂಡಾ 116.10 ಅಂಕಗಳ ಏರಿಕೆಯೊಂದಿಗೆ 16,246,85 ಅಂಕಗಳ ಗಡಿ ತಲುಪಿದೆ.
ಸೆನ್ಸೆಕ್ಸ್ ಏರಿಕೆಯಿಂದ ಟಾಟಾ ಸ್ಟೀಲ್, ಎಚ್ ಡಿಎಫ್ ಸಿ, ಐಸಿಐಸಿಐ ಬ್ಯಾಂಕ್, ಡಾ.ರೆಡ್ಡೀಸ್, ಇನ್ಫೋಸಿಸ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತ ಎಚ್ ಡಿಎಫ್ ಸಿ ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಏತನ್ಮಧ್ಯೆ ಭಾರ್ತಿ ಏರ್ ಟೆಲ್, ನೆಸ್ಲೆ ಇಂಡಿಯಾ, ಎಸ್ ಬಿಐ, ಎಚ್ ಯುಎಲ್ ಮತ್ತು ಆಲ್ಟ್ರಾ ಟೆಕ್ ಸಿಮೆಂಟ್ ಷೇರುಗಳು ನಷ್ಟ ಕಂಡಿದೆ.
ಮಂಗಳವಾರ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 872.73 ಅಂಕಗಳ ಭರ್ಜರಿ ಏರಿಕೆಯೊಂದಿಗೆ ದಾಖಲೆಯ 53,823.36 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿತ್ತು. ಎನ್ ಎಸ್ ಇ ನಿಫ್ಟಿ ಕೂಡಾ 245.60 ಅಂಕ ಏರಿಕೆಯೊಂದಿಗೆ 16,130.75ರ ಗಡಿ ತಲುಪಿತ್ತು.