ಮುಂಬಯಿ: ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೋಮವಾರ(ಜುಲೈ 26) 123.53 ಅಂಕಗಳಷ್ಟು ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಮುಕ್ತಾಯಗೊಳಿಸಿದೆ. ನಿಫ್ಟಿ ಕೂಡಾ 31.60ಅಂಕಗಳಷ್ಟು ಕುಸಿತ ಕಂಡಿದೆ.
ಇದನ್ನೂ ಓದಿ:24 ಗಂಟೆಯಲ್ಲಿ 262 ತಾಲಿಬಾನ್ ಉಗ್ರರನ್ನು ಹೊಡೆದುರುಳಿಸಿದ ಅಫ್ಘಾನ್ ಭದ್ರತಾ ಪಡೆ
ಮುಂಬಯಿ ಷೇರುಪೇಟೆಯ ಸಂವೇದಿ ಸೂಚ್ಯಂಕ 123.53 ಅಂಕಗಳಷ್ಟು ಇಳಿಕೆಯಾಗಿದ್ದು, 52,852.27 ಅಂಕಗಳೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ನಿಫ್ಟಿ ಕೂಡಾ 31.60 ಅಂಕಗಳಷ್ಟು ಇಳಿಕೆಯಾಗಿದ್ದು, 15,824.45ರ ಗಡಿಗೆ ಕುಸಿದಿದೆ.
ಸೆನ್ಸೆಕ್ಸ್ ಇಳಿಕೆಯಿಂದ ಪಿಎಸ್ ಯು ಬ್ಯಾಂಕ್ಸ್, ಆಟೋ ಷೇರುಗಳು ಹೆಚ್ಚಿನ ನಷ್ಟ ಅನುಭವಿಸಿದೆ. ಬಜಾಜ್ ಫಿನ್ ಸರ್ವ್, ಆಲ್ಟ್ರಾಟೆಕ್, ಸನ್ ಫಾರ್ಮಾ ಮತ್ತು ಇತರ ಷೇರುಗಳು ಲಾಭಗಳಿಸಿದ್ದು, ಎಸ್ ಬಿಐ, ಆರ್ ಐಎಲ್, ಮಹೀಂದ್ರ ಆ್ಯಂಡ್ ಮಹೀಂದ್ರ ಷೇರುಗಳು ನಷ್ಟ ಅನುಭವಿಸಿದೆ.
ಇಂದು ಮುಂಬಯಿ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 53,103.42ರ ಗಡಿ ತಲುಪಿತ್ತು. ಕೊನೆಗೆ 123 ಅಂಕ ಕುಸಿತವಾಗುವ ಮೂಲಕ 52,852.27 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ.