Advertisement

ಗಬ್ಬೆದ್ದು ನಾರುತ್ತಿದೆ ನೀರು ಶುದ್ಧೀಕರಣ ಘಟಕ

12:21 PM Apr 27, 2019 | Team Udayavani |

ಬನಹಟ್ಟಿ: ಇಲ್ಲಿಯ ಹಳೆ ನೀರಿನ ಟಾಕಿ ಹತ್ತಿರವಿರುವ ಕುಡಿಯುವ ನೀರಿನ ಶುದ್ಧೀಕರಣ ಘಟಕದಿಂದಲೇ ನಗರದ ಜನತೆಗೆ ನಗರಸಭೆ ಕುಡಿಯುವ ನೀರು ಸರಬರಾಜು ಮಾಡುತ್ತಿದೆ. ಆದರೆ, ಶುದ್ಧೀಕರಣ ಘಟಕ ಗಬ್ಬೆದ್ದು ನಾರುತ್ತಿದ್ದು, ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡಿಲ್ಲ.

Advertisement

ಕೃಷ್ಣಾ ನದಿಯಿಂದ ಲಕ್ಷಾಂತರ ಲೀಟರ ನೀರು ನಿತ್ಯ ಘಟಕದಲ್ಲಿ ಸಂಗ್ರಹವಾಗುತ್ತದೆ. ಆದರೆ, ಕಳೆದ ಹಲವಾರು ದಿನಗಳಿಂದ ನದಿ ಸಂಪೂರ್ಣ ಬತ್ತಿದ್ದರಿಂದ ಘಟಕದ ಎಲ್ಲ ಹೊಂಡಗಳು ಒಣಗಿವೆ. ಇಲ್ಲಿಯ ಎಲ್ಲ ಹೊಂಡಗಳಲ್ಲಿ ಟನ್‌ಗಟ್ಟಲೇ ಮಣ್ಣು ಬಿದ್ದು ಖಾಲಿಯಾದ ಕೆರೆಕಟ್ಟೆಗಳು ಒಣಗಿದ ಹಾಗೆ ಮಣ್ಣಿನ ಬಿರುಕು ಕಾಣುತ್ತಿವೆ. ಅಲ್ಲದೆ ಅಳಿದುಳಿದ ನೀರಿನಲ್ಲಿ ಕ್ರಿಮಿಕೀಟಗಳು ಉತ್ಪತ್ತಿಯಾಗಿವೆ. ಹೊಸದಾಗಿ ಆರಂಭಿಸಿರುವ ಘಟಕದಲ್ಲಿಯೂ ನೀರು ಪಾಚಿಗಟ್ಟಿದ್ದು, ಜನರು ಆತಂಕಗೊಂಡಿದ್ದಾರೆ.

ಅನೈತಿಕ ಚಟುವಟಿಕೆಗಳ ಕೇಂದ್ರ: ಶುದ್ಧ ಕುಡಿಯುವ ನೀರಿನ ಘಟಕದ ಸುತ್ತ ಬಹಿರ್ದೆಸೆ ಮಾಡುವುದರ ಜೊತೆಗೆ ಅಲ್ಲಿಯೇ ಮದ್ಯ ಸೇವನೆ ಮಾಡಿ ಬಾಟಲಿ, ಪಾಕಿಟ್‌ಗಳನ್ನು ಎಸೆಯಲಾಗಿದೆ. ನೀರಿನ ಘಟಕದ ಸುತ್ತ ಮುಳ್ಳಿನ ಕಂಟಿ ಬೆಳೆದಿದ್ದು, ಸ್ವಚ್ಛ ಮಾಡಿಲ್ಲ.

ಈಗ ಶುದ್ಧೀಕರಣ ಘಟಕ ಸಂಪೂರ್ಣ ಖಾಲಿಯಾಗಿದೆ. ಈಗಲೇ ಇದರಲ್ಲಿರುವ ಮಣ್ಣು ಮತ್ತು ಇನ್ನೀತರ ಕಸ ಹೂಳೆತ್ತಲು ಸೂಕ್ತ ಸಮಯ. ನದಿಗೆ ನೀರು ಬಂದ ಮೇಲೆ ನೀರಿನ ಕೊರತೆ ಇರುವುದರಿಂದ ಅವಸರವಾಗಿ ಹಾಗೇ ನದಿಯಿಂದ ನೀರು ಸಂಗ್ರಹಿಸುವ ಕಾರ್ಯ ಮುಂದುವರಿಯಬಹುದು. ಈ ಗಲೀಜಾದ ಮಣ್ಣು ಹಾಗೇ ಉಳಿದು ಕಲ್ಮಶ ನೀರೇ ಪೂರೈಕೆಯಾಗಬಹುದು.

ಇಲ್ಲಿನ ನೀರು ಸಂಗ್ರಹ ಘಟಕದ ಹೊಂಡಗಳಲ್ಲಿನ ಮಣ್ಣು ತೆಗೆದು ಸ್ವಚ್ಛಗೊಳಿಸಬೇಕು. ಅಲ್ಲಿ ಯಾವುದೇ ಸುರಕ್ಷತೆಯಿಲ್ಲ. ಅಲ್ಲಿನ ಮಣ್ಣು ತೆಗೆದು, ಸುರಕ್ಷತೆಯ ಬಗ್ಗೆ ಗಮನ ಹರಿಸಬೇಕು. ಜೊತೆಗೆ ಮಣ್ಣು ತೆಗೆಯುವುದರಿಂದ ಇಂತಹ ಸಂದರ್ಭದಲ್ಲಿ ನಮ್ಮ ಭಾಗಕ್ಕೆ ಇಲ್ಲಿ ಉಳಿಯುವ ನೀರು ಸುಮಾರು 20 ದಿನಗಳವರೆಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

Advertisement
Advertisement

Udayavani is now on Telegram. Click here to join our channel and stay updated with the latest news.

Next