ಹೊಸದಿಲ್ಲಿ: ಕ್ರೊವೇಶಿಯ ವಿಶ್ವಕಪ್ ತಂಡವನ್ನು ಪ್ರತಿನಿಧಿಸಿದ್ದ ಐಗರ್ ಸ್ಟಿಮಾಕ್ ಅವರನ್ನು ಭಾರತ ಫುಟ್ಬಾಲ್ ತಂಡದ ನೂತನ ಕೋಚ್ ಆಗಿ ನೇಮಕ ಮಾಡಿದೆ. ಕೆಲವು ದಿನಗಳ ಹಿಂದೆಯೇ ಸಿಮಾಕ್ ನೇಮಕ ಅಂತಿಮಗೊಂಡಿತ್ತಾದರೂ ಇದನ್ನು ಬುಧವಾರ ಅಧಿಕೃತವಾಗಿ ಘೋಷಿಸಲಾಯಿತು.
ಸ್ಟಿಮಾಕ್ 1998ರ ವಿಶ್ವಕಪ್‌ನಲ್ಲಿ 3ನೇ ಸ್ಥಾನ ಪಡೆದ ಕ್ರೊವೇಶಿಯ ತಂಡದಲ್ಲಿದ್ದರು. ಇದಕ್ಕೂ ಮುನ್ನ ಯುಇಎಫ್ಎ ಯುರೋಪಿಯನ್ ಚಾಂಪಿಯನ್‌ಗೆ ಅರ್ಹತೆ ಪಡೆದ ತಂಡದಲ್ಲೂ ಇವರು ಸದಸ್ಯರಾ ಗಿದ್ದರು. ರಾಷ್ಟ್ರೀಯ ತಂಡ ಹೊರತುಪಡಿಸಿ 1987ರ ಫಿಫಾ ಅಂಡರ್-20 ವಿಶ್ವಕಪ್ ವಿಜೇತ ಯುಗೋಸ್ಲಾವಿಯ ಅಂಡರ್-19 ತಂಡದ ಆಟಗಾರರಾಗಿದ್ದರು.
Advertisement
ಕ್ರೊವೇಶಿಯದ 51 ವರ್ಷದ ಸ್ಟಿಮಾಕ್‌ಗೆ ರಾಷ್ಟ್ರೀಯ ತಂಡವನ್ನು ತರಬೇತಿಗೊಳಿಸಿದ ಸುದೀರ್ಘ ಅನುಭವವಿದೆ. ಇವರ ತರಬೇತಿ ಯಲ್ಲಿ ಕ್ರೊವೇಶಿಯ 2014ರ ವಿಶ್ವಕಪ್ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು.
ಸ್ಟಿಮಾಕ್ ಸೂಕ್ತ ಆಯ್ಕೆ
‘ಬ್ಲು ಟೈಗರ್ ತಂಡದ ಕೋಚ್ ಸ್ಥಾನಕ್ಕೆ ಐಗರ್ ಸ್ಟಿಮಾಕ್ ಸೂಕ್ತ ವ್ಯಕ್ತಿ. ಭಾರತೀಯ ಫುಟ್ಬಾಲ್ ಬೋರ್ಡ್‌ಗೆ ಆಗಮಿಸಲಿರುವ ಅವರಿಗೆ ಸ್ವಾಗತ. ನಮ್ಮ ಫುಟ್ಬಾಲ್ ತಂಡದಲ್ಲಿ ಈಗಾಗಲೇ ಬದಲಾವಣೆಗಳು ಸಂಭವಿಸುತ್ತಿದ್ದು, ಅವರ ಅನುಭವ ತಂಡಕ್ಕೆ ನೆರವಾಗುವುದರಲ್ಲಿ ಸಂಶಯವಿಲ್ಲ’ ಎಂದು ಎಐಎಫ್ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ಹೇಳಿದ್ದಾರೆ. ಸ್ಟಿಮಾಕ್ ‘ಕಿಂಗ್ಸ್ ಕಪ್’ನೊಂದಿಗೆ ತಮ್ಮ ಕರ್ತವ್ಯ ಆರಂಭಿಸಲಿದ್ದಾರೆ. ಈ ಪಂದ್ಯಾವಳಿ ಜೂನ್‌ನಲ್ಲಿ ನಡೆಯಲಿದೆ.