Advertisement

ರೈನಾ ನಿರ್ಧಾರ ಅಚ್ಚರಿ ತಂದಿದೆ: ರೋಹಿತ್‌

02:19 AM Aug 17, 2020 | Hari Prasad |

ಮುಂಬಯಿ: ಧೋನಿ ನಿವೃತ್ತಿ ಘೋಷಿಸಿದ ಕೆಲವೇ ನಿಮಿಷಗಳಲ್ಲಿ ಸುರೇಶ್‌ ರೈನಾ ಕೂಡ ವಿದಾಯದ ನಿರ್ಧಾರ ತೆಗೆದುಕೊಂಡದ್ದು ತನಗೆ ಅಚ್ಚರಿಯಾಗಿ ಕಂಡಿದೆ ಎಂಬುದಾಗಿ ರೋಹಿತ್‌ ಶರ್ಮ ಹೇಳಿದ್ದಾರೆ.

Advertisement

‘ನಾವಿಬ್ಬರೂ ತಂಡಕ್ಕೆ ಆಗಮಿಸಿದ ದಿನಗಳನ್ನು ಮರೆತಿಲ್ಲ. ನಿಮ್ಮ ನಿವೃತ್ತ ಬದುಕು ಉಜ್ವಲವಾಗಿರಲಿ ಬ್ರದರ್‌’ ಎಂಬುದಾಗಿ ರೋಹಿತ್‌ ಶರ್ಮ ಟ್ವೀಟ್‌ ಮಾಡಿದ್ದಾರೆ.

ಧೋನಿಗೆ ಹೋಲಿಸಿದರೆ ರೈನಾಗೆ ಟೀಮ್‌ ಇಂಡಿಯಾಕ್ಕೆ ಮರಳುವ ಯಾವ ಮಾರ್ಗವೂ ಇರಲಿಲ್ಲ. 2015ರಲ್ಲಿ ಕೊನೆಯ ಟೆಸ್ಟ್‌ ಆಡಿದ ರೈನಾ, 2018ರ ಇಂಗ್ಲೆಂಡ್‌ ಪ್ರವಾಸದ ವೇಳೆ ಕೊನೆಯ ಸಲ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಹೀಗಾಗಿ ರೈನಾ ಟೀಮ್‌ ಇಂಡಿಯಾ ಪಾಲಿಗೆ ಅನಿವಾರ್ಯವೇನೂ ಆಗಿರಲಿಲ್ಲ. ಅಲ್ಲದೇ ತಂಡದಲ್ಲಿ ಜಾಗವೂ ಇರಲಿಲ್ಲ.

ಹೀಗಾಗಿ ಜೀವದ ಗೆಳೆಯ ಧೋನಿ ನಿವೃತ್ತಿ ಘೋಷಿಸಿದೊಡನೆಯೆ ರೈನಾ ಕೂಡ ಇದೇ ಹಾದಿ ಹಿಡಿದರು. ಇಬ್ಬರೂ ಐಪಿಎಲ್‌ ಅಭ್ಯಾಸಕ್ಕೆಂದು ಚೆನ್ನೈಗೆ ಆಗಮಿಸಿದ್ದು, ಒಟ್ಟಿಗೆ ಚರ್ಚಿಸಿ ಈ ನಿರ್ಧಾರಕ್ಕೆ ಬಂದಿರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next