ಹಿಂದಿನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ’ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
Advertisement
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ, “ಜಾತಿ, ಧರ್ಮಗಳ ವಿಚಾರದಲ್ಲಿ ಯಾವುದೇ ಪಕ್ಷಗಳು, ರಾಜಕಾರಣಿಗಳು ಭಾಗಿಯಾಗಬಾರದು. ಧರ್ಮ, ಜಾತಿ ಕುರಿತು ಆಯಾಮಠಾಧೀಶರುಗಳು ತೀರ್ಮಾನಿಸುತ್ತಾರೆ. ಲಿಂಗಾಯಿತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದೇನೆ. ಅದಕ್ಕೆ ನಾನು ಈಗಲೂ ಬದ್ದ. ಲಿಂಗಾಯಿತ ಪ್ರತ್ಯೇಕ ಧರ್ಮ ವಿಷಯ ಬಂದಾಗ ನಾನೂ ಸರ್ಕಾರದಲ್ಲಿದ್ದೆ. ಹಾಗಾಗಿ, ನಾನೂ ಅದಕ್ಕೆ ಹೊಣೆಯಾಗಿದ್ದು, ನನಗೆ ಈಗ ತಪ್ಪಿನ ಅರಿವಾಗಿದೆ’ ಎಂದು ಪುನರುಚ್ಚರಿಸಿದರು. ಹಾಗಿದ್ದರೆ ದಕ್ಷಿಣ ಕರ್ನಾಟಕದಲ್ಲಿ ನೀವು ಎಷ್ಟು ಸೀಟು ಗೆದ್ದಿದ್ದೀರಿ ಎಂಬ ಎಂ.ಬಿ.ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿ, “ನಾನು ಲೀಡರ್ ಅಲ್ಲ. ನಾನೊಬ್ಬ ಕಾರ್ಯಕರ್ತ. ನನ್ನ ಕ್ಷೇತ್ರದಲ್ಲಿ ನಾನು ಗೆದ್ದಿದ್ದೇನೆ’ ಎಂದು ತಿರುಗೇಟು ನೀಡಿದರು.