ಬಳ್ಳಾರಿ: ಜಿಂದಾಲ್ ಕಂಪನಿಗೆ ಜಮೀನು ಪರಭಾರೆ ಮಾಡುವ ವಿಷಯವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನವರು ಸವಾಲು ಹಾಕಿ ನನ್ನನ್ನು ಪ್ರಚೋದಿಸುತ್ತಿದ್ದಾರೆ. ಈಗಲೂ ಜಿಂದಾಲ್ ಗೆ ಜಮೀನು ಪರಭಾರೆ ಮಾಡಬಾರದು ಎಂಬುದು ನನ್ನ ನಿಲುವಾಗಿದೆ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಮಾಡಲು ರಾಜ್ಯ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದೆ. ಈ ಬಗ್ಗೆ ನಾನು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ಮಾಡುತ್ತೇನೆ. ಜಿಂದಾಲ್ ಗೆ ಜಮೀನು ಪರಭಾರೆ ವಿಚಾರ ಮುಂದಿಟ್ಟುಕೊಂಡು ಹಿಂದೆ ನಾನು ರಾಜೀನಾಮೆ ನೀಡಿದ್ದು, ಆಗ ನಾನು ಮಾತು ಕೊಟ್ಟಿದ್ದೇನೆ. ಹಾಗಾಗಿ ಈ ನಿರ್ಣಯದ ಬಗ್ಗೆಯೂ ಮುಖ್ಯಮಂತ್ರಿಗಳಿಗೆ ಮಾಹಿತಿ ಕೊರತೆ ಇರಬಹುದು. ಈ ಕುರಿತು ನಾನು ಮನವರಿಕೆ ಮಾಡಿಕೊಡುವೆ ಎಂದರು.
ಇದನ್ನೂ ಓದಿ:ಕೊರೊನಾ ಜನಕ ಕತೆಗಳು: ನಾನೂ ಅಮ್ಮನ ಬಳಿ ದೇವರತ್ರ ಹೋಗ್ತಿನಿ ಅಂತಾನೆ..
ಜಿಂದಾಲ್ ಗೆ ಜಮೀನು ಪರಭಾರೆ ಮಾಡುವುದರಿಂದ ಸಂಸ್ಥೆಯವರು ಬ್ಯಾಂಕ್ ನಲ್ಲಿ ಜಮೀನು ಅಡವಿಟ್ಟು ಸಾಲ ಪಡೆದು ಕೈಗಾರಿಕೆ ನಡೆಸಲು ಮುಂದಾಗುತ್ತಿದ್ದಾರೆ. ನಾನು ವ್ಯಾಪಾರಿ ಕುಟುಂಬದಿಂದ ಬಂದ ವ್ಯಕ್ತಿಯಾಗಿದ್ದು, ನನಗೂ ವ್ಯವಹಾರದ ಬಗ್ಗೆ ಅಲ್ಪಸ್ವಲ್ಫ ಮಾಹಿತಿ ಇದೆ. ಕೈಗಾರಿಕೆಯವರಿಗೂ ಸರ್ಕಾರ ಯಾವಾಗ ಜಮೀನು ಹಿಂಪಡೆಯಲಿದೆ ಎಂಬ ಭಯ ಇರಬಹುದು. ಆದರೆ, ಸರ್ಕಾರ ಜಮೀನು ಪರಭಾರೆ ಮಾಡುವ ಬದಲಿಗೆ ಕೈಗಾರಿಕೆಯವರು ಸಾಲ ತೀರಿಸುವ ವರೆಗೂ ಜಮೀನು ವಾಪಸ್ ಪಡೆಯಲ್ಲ ಎಂದು ಅಂಡರ್ ಟೇಕನ್ ನೀಡಬಹುದು. ಈ ಎಲ್ಲ ಮಾಹಿತಿ ಕುರಿತು ಸಿಎಂ ಅವರಿಗೆ ಮಾಹಿತಿ ಕೊರತೆ ಇರಬಹುದು. ಈ ನಿಟ್ಟಿನಲ್ಲಿ ಅವರನ್ನು ಮನವರಿಕೆ ಮಾಡುವ ಕೆಲಸ ಮಾಡುವೆ ಎಂದರು.
ಸಚಿವ ಸಂಪುಟದಲ್ಲಿ ಅನುಮೋದನೆಯಾದ ಮಾತ್ರಕ್ಕೆ ಆದೇಶ ಜಾರಿಯಾಗಿಲ್ಲ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟಪಡಿಸಿದರು