Advertisement
ಆಂಗ್ಲ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದ ವೇಳೆ ಸಂಜೀವ್ ಗೊಯೆಂಕಾ ಮೇಲಿನಂತೆ ಹೇಳಿಕೆ ನೀಡಿದ್ದಾರೆ. ಆರಂಭದಲ್ಲಿ ಕೆಲ ಪಂದ್ಯ ಸೋತ ಬಳಿಕ ಸ್ಮಿತ್ ನಡೆದುಕೊಂಡು ಹಾದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಸೋಲು ಅಥವಾ ಗೆಲುವು ಏನೇ ಇರಲಿ. ಸಂದಿಗ್ಧ ಪರಿಸ್ಥಿತಿಯಲ್ಲಿ ಅವರು ಸಾಗಿದ ರೀತಿ ತಂಡದ ಮೇಲೆಕಾರಾತ್ಮಕ ಪರಿಣಾಮ ಬೀರಿದೆ ಎಂದು ಗೊಯೆಂಕಾ ಸ್ಮಿತ್ ಕುರಿತ ಹೇಳಿಕೆ ಕುರಿತಂತೆ ಸಮರ್ಥಿಸುತ್ತಾ ಹೋಗಿದ್ದಾರೆ.
ಸ್ಮಿತ್ ಬ್ಯಾಟಿಂಗ್ ಅದಕ್ಕೆ ನೆರವಾಗಿತ್ತು. ಆಗ ಸ್ಮಿತ್‌ರನ್ನು ಹೊಗಳುವ ಭರದಲ್ಲಿ ಹರ್ಷ ಧೋನಿಯನ್ನು ಟೀಕಿಸಿದ್ದರು. ಧೋನಿಯನ್ನು ನಾಯಕತ್ವದಿಂದ ಕೆಳಗಿಳಿಸಿದ್ದು ಸರಿಯಾಗಿದೆ. ಧೋನಿಯನ್ನು ಸ್ಮಿತ್ ಪೂರ್ಣ ಮಸುಕು ಮಾಡಿದ್ದಾರೆ. ಕಾಡಿನ ರಾಜ ಯಾರೆಂದು ಸಾಬೀತು ಮಾಡಿದ್ದಾರೆ ಎಂದು ಹರ್ಷ ಟ್ವೀಟ್ ಮಾಡಿದ್ದರು.