ಅಹಮದಾಬಾದ್: ಬಾರ್ಡರ್-ಗಾವಸ್ಕರ್ ಟ್ರೋಫಿಯ ನಾಲ್ಕನೇ ಮತ್ತು ಅಂತಿಮ ಟೆಸ್ಟ್ ಪಂದ್ಯಕ್ಕೂ ನಾಯಕ ಪ್ಯಾಟ್ ಕಮಿನ್ಸ್ ಅವರು ಅಲಭ್ಯರಾಗುತ್ತಿದ್ದಾರೆ. ಹೀಗಾಗಿ ಆಸೀಸ್ ತಂಡವನ್ನು ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಮುನ್ನಡೆಸಲಿದ್ದಾರೆ.
ಕ್ರಿಕೆಟ್.ಕಾಂನಲ್ಲಿನ ವರದಿಯ ಪ್ರಕಾರ, ಸ್ಮಿತ್ ಆಸ್ಟ್ರೇಲಿಯಾವನ್ನು ಮತ್ತೊಮ್ಮೆ ನಾಯಕತ್ವ ವಹಿಸಲಿದ್ದಾರೆ. ಕಳೆದ ವಾರ ಇಂದೋರ್ ನಲ್ಲಿ ನಡೆದ ಮೂರನೇ ಟೆಸ್ಟ್ ನಲ್ಲಿ ತಂಡವನ್ನು ಮುನ್ನಡೆಸಿದ್ದ ಸ್ಮಿತ್ ಒಂಬತ್ತು ವಿಕೆಟ್ ಗೆಲುವು ಸಾಧಿಸಿದ್ದರು.
ಮೊದಲೆರಡು ಟೆಸ್ಟ್ ಪಂದ್ಯದ ಬಳಿಕ ಪ್ಯಾಟ್ ಕಮಿನ್ಸ್ ಅವರು ತವರಿಗೆ ಮರಳಿದ್ದಾರೆ. ಕಮಿನ್ಸ್ ಅವರ ತಾಯಿ ಮಾರಿಯಾ ಸ್ತನ ಕ್ಯಾನ್ಸರ್ ಅನಾರೋಗ್ಯದಿಂದ ಬಳಲುತ್ತಿದ್ದು, ಕಮಿನ್ಸ್ ಸಿಡ್ನಿಯಲ್ಲಿದ್ದು ಅವರ ಆರೈಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ಬಂಟ್ವಾಳ ಮೂಡೂರು- ಪಡೂರು ಕಂಬಳ; ಕಂಬಳ- ಯಕ್ಷಗಾನ ತುಳುನಾಡಿನ ಕಣ್ಣುಗಳು
ಆದರೆ ಭಾರತದ ವಿರುದ್ಧದ ಮುಂಬರುವ ಏಕದಿನ ಸರಣಿಯಲ್ಲಿ ಕಮಿನ್ಸ್ ಭಾಗವಹಿಸುವ ಬಗ್ಗೆ ವರದಿ ಖಚಿತ ಪಡಿಸಿಲ್ಲ.
ಮಾರ್ಚ್ 17 ರಿಂದ ಆರಂಭವಾಗುವ ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡದಲ್ಲಿ ಸ್ಥಾನ ಪಡೆದಿದ್ದ ಜೇ ರಿಚರ್ಡ್ಸನ್ ಗಾಯಗೊಂಡಿದ್ದು, ಅವರ ಬದಲಿಗೆ ನಾಥನ್ ಎಲ್ಲಿಸ್ ಸ್ಥಾನ ಪಡೆದಿದ್ದಾರೆ.