Advertisement

ಕ್ರೊಕೊಡೈಲ್‌ ಹಂಟರ್‌ ಸ್ಟೀವ್‌ ಇರ್ವಿನ್‌

09:30 AM Feb 28, 2020 | mahesh |

ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು…

Advertisement

1. ವನ್ಯಜೀವಿ ತಜ್ಞ ಸ್ಟೀವ್‌ ಇರ್ವಿನ್‌ 1962ರ ಫೆಬ್ರವರಿ 22ರಂದು ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಹುಟ್ಟಿದರು.

2. ಅವರ ಹೆತ್ತವರು ವನ್ಯಜೀವಿಗಳ ಅಧ್ಯಯನದಲ್ಲಿ ತೊಡಗಿಕೊಂಡಿದ್ದರು. ಅವರು ಮೃಗಾಲಯವನ್ನು ಸ್ಥಾಪಿಸಿದ್ದರು.

3. ಮೊದಲ ಬಾರಿಗೆ ಮೊಸಳೆಯೊಂದನ್ನು ರಕ್ಷಿಸಿದಾಗ ಸ್ಟೀವ್‌ನ ವಯಸ್ಸು ಕೇವಲ 9.

4. ಸ್ಟೀವ್‌ರ ಪತ್ನಿ ಟೆರ್ರಿಗೆ ಕೂಡಾ ವನ್ಯಜೀವಿಗಳ ಬಗ್ಗೆ ಅಪಾರ ಆಸಕ್ತಿಯಿತ್ತು. ಅವರಿಬ್ಬರೂ ಮೊದಲ ಬಾರಿ ಭೇಟಿಯಾಗಿದ್ದು ಮೃಗಾಲಯದಲ್ಲಿಯೇ.

Advertisement

5. ಸ್ಟೀವ್‌ ಇರ್ವಿನ್‌, “ದಿ ಕ್ರೊಕೊಡೈಲ್‌ ಹಂಟರ್‌’ ಎಂಬ ವನ್ಯಜೀವಿಗಳ ಕುರಿತಾದ ಟಿ.ವಿ. ಶೋ ನಡೆಸಿಕೊಡುತ್ತಿದ್ದರು. ಅದರಲ್ಲಿ ಪತ್ನಿ ಟೆರ್ರಿ ಕೂಡಾ ಭಾಗವಹಿಸುತ್ತಿದ್ದರು.

6. 130ಕ್ಕೂ ಹೆಚ್ಚು ದೇಶಗಳಲ್ಲಿ ಆ ಟಿ.ವಿ ಶೋ ಪ್ರಖ್ಯಾತಿಯನ್ನು ಪಡೆದಿತ್ತು. ಅದರಿಂದಾಗಿ ಜನರು ಸ್ಟೀವ್‌ರನ್ನು “ಕ್ರೊಕೊಡೈಲ್‌ ಹಂಟರ್‌’ ಎಂದೇ ಗುರುತಿಸತೊಡಗಿದರು.

7. ಭಯಾನಕ ಹಾವು, ಮೊಸಳೆ, ಪ್ರಾಣಿಗಳನ್ನು ಕಂಡರೂ ಹೆದರದ ಸ್ಟೀವ್‌ ಇರ್ವಿನ್‌ಗೆ, ಗಿಳಿಗಳನ್ನು ಕಂಡರೆ ಸ್ವಲ್ಪ ಹೆದರಿಕೆಯಾಗುತ್ತಿತ್ತಂತೆ.

8. ಇದುವರೆಗೆ ಯಾರೂ ನೋಡಿರದ ಹೊಸ ಪ್ರಭೇದದ ಆಮೆಯೊಂದನ್ನು ಸ್ಟೀವ್‌ ಇರ್ವಿನ್‌ ಜಗತ್ತಿಗೆ ಪರಿಚಯಿಸಿದರು. ಆ ಪ್ರಭೇದದ ಆಮೆಗಳಿಗೆ “ಎಲ್ಸಿಯಾ ಇರ್ವಿನಿ’ ಅಂತಲೇ ಹೆಸರಿಡಲಾಗಿದೆ.

9. ನೀರಿನಾಳದಲ್ಲಿ ಸಾಕ್ಷ್ಯಚಿತ್ರ ಚಿತ್ರೀಕರಣದ ನಡೆಸುತ್ತಿದ್ದ ವೇಳೆ, ಸ್ಟಿಂಗ್‌ರೇ ಎಂಬ ಮೀನಿನಿಂದ ಇರಿತಕ್ಕೊಳಗಾಗಿ ಸ್ಟೀವ್‌ ಸಾವನ್ನಪ್ಪಿದ್ದು ಪ್ರಕೃತಿಲೋಕಕ್ಕೆ ಉಂಟಾದ ನಷ್ಟ.

10. ಈಗ ಸ್ಟೀವ್‌ ಇರ್ವಿನ್‌ನ ಮಗ ರಾಬರ್ಟ್‌ ಇರ್ವಿನ್‌ ಅಪ್ಪನ ಹಾದಿಯಲ್ಲಿಯೇ ಸಾಗುತ್ತಿದ್ದಾರೆ.

ಸಂಗ್ರಹ: ಪ್ರಿಯಾಂಕ

Advertisement

Udayavani is now on Telegram. Click here to join our channel and stay updated with the latest news.

Next