Advertisement

ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪನೆಗೆ ಕ್ರಮ

12:36 AM Aug 14, 2021 | Team Udayavani |

ಮಂಗಳೂರು: ಕರಾವಳಿಯಲ್ಲಿ ಭಯೋ ತ್ಪಾದನ ಸಂಘಟನೆಗಳ ನಂಟು ಹೆಚ್ಚುತ್ತಿರುವ ಹಿನ್ನೆಲೆ  ಯಲ್ಲಿ  ಮಂಗಳೂರಿನಲ್ಲಿ  ರಾಷ್ಟ್ರೀಯ ತನಿಖಾ ದಳ  (ಎನ್‌ಐಎ)ದ ಕಚೇರಿ ಸ್ಥಾಪನೆ ಗಾಗಿ ಅವಶ್ಯ ಕ್ರಮ ಗಳತ್ತ ರಾಜ್ಯ ಸರಕಾರ ಕಾರ್ಯೋನ್ಮುಖ ವಾಗಿದೆ.

Advertisement

ರಾಷ್ಟ್ರೀಯ ತನಿಖಾ ದಳದ ಕಚೇರಿಯನ್ನು ಆರಂಭಿಸುವುದಕ್ಕೆ ಪೂರಕವಾಗಿ ಸದ್ಯದಲ್ಲೇ ರಾಜ್ಯ ಗೃಹ ಸಚಿವರು ಮಂಗಳೂರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವ ರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕರಾ ವಳಿಗೆ ಭೇಟಿ ನೀಡಿದ್ದ ಮುಖ್ಯ ಮಂತ್ರಿ ಬೆಂಗಳೂರಿಗೆ ವಾಪಸಾಗುವ ಮಾರ್ಗದಲ್ಲಿ ನಗರದ ಸಕೀìಟ್‌ ಹೌಸ್‌ನಲ್ಲಿ ಶುಕ್ರವಾರ ಸುದ್ದಿಗಾರ ರೊಂದಿಗೆ ಮಾತನಾಡಿದರು.

ರಾಜ್ಯ ಸರಕಾರ ಓರ್ವ ದಕ್ಷ ಗೃಹ ಸಚಿವರನ್ನು ಹೊಂದಿದೆ. ಅಧಿಕಾರ ಸ್ವೀಕರಿಸಿದ ಬಳಿಕ ಅವರು ಎರಡು ಸಭೆಗಳನ್ನು ನಡೆಸಿ ವರದಿಗಳನ್ನು ಪಡೆದು ಕೊಂಡಿ ದ್ದಾರೆ. ಸದ್ಯದಲ್ಲೇ ಮಂಗಳೂರಿಗೆ ಆಗಮಿಸಿ ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲಿದ್ದಾರೆ. ಆ ಬಳಿಕ ನಾವೆಲ್ಲರೂ ಸೇರಿ ಈ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಎನ್‌ಐಎ ಕಚೇರಿ ಸ್ಥಾಪನೆ ನಿಟ್ಟಿನಲ್ಲಿ ಈಗಾಗಲೇ ಕೆಲವು ಹೆಜ್ಜೆಗಳನ್ನು ಇರಿಸಿದ್ದೇವೆ. ಆದರೆ ಈಗ ಬಹಿ ರಂಗ ಪಡಿಸಲಾಗದು. ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದೇವೆ ಎಂದರು.

ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಆರಂಭಿಸ ಬೇಕು ಎಂಬ ಬೇಡಿಕೆ ಹಲವಾರು ವರ್ಷಗಳಿಂದ ಇದೆ. ಈ ಬಗ್ಗೆ ಈಗಾಗಲೇ ದ. ಕನ್ನಡ ಮತ್ತು ಉಡುಪಿಯ ಸಂಸದರು, ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಹಿತ ಬಿಜೆಪಿ ಜನಪ್ರತಿನಿಧಿಗಳು ಕೇಂದ್ರ ಸರಕಾರಕ್ಕೆ ಮನವಿ ನೀಡಿ ಆಗ್ರಹಿಸಿದ್ದರು. ಈ ಬಗ್ಗೆ “ಉದಯವಾಣಿ’ ಕೂಡ ಆ. 12ರಂದು ವರದಿ ಪ್ರಕಟಿಸಿತ್ತು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next