Advertisement

ಸ್ಟೀಫನ್ ಪ್ರಯೋಗ್ ರ ‘ದೀಪು ಗೆಳೆಯರ ಬಳಗ’ ಕಿರುಚಿತ್ರ

04:55 PM Sep 05, 2022 | Team Udayavani |

“ದೀಪು ಗೆಳೆಯರ ಬಳಗ’- ಹೀಗೊಂದು ಕಿರುಚಿತ್ರ ತಯಾರಾಗಿದೆ. ಸ್ಟೀಫ‌ನ್‌ ಪ್ರಯೋಗ್‌ ಈ ಚಿತ್ರದ ನಿರ್ದೇಶಕರು. ಸಂಗೀತ ನಿರ್ದೇಶಕರಾಗಿರುವ ಸ್ಟೀಫ‌ನ್‌ ಈಗ ಕಿರುಚಿತ್ರ ಮೂಲಕ ನಿರ್ದೇಶಕರಾಗಿದ್ದಾರೆ.

Advertisement

“ನಾನು ಸಂಗೀತ ವಿಭಾಗದಲ್ಲಿ ಹಲವು ಸಿನಿಮಾಗಳಿಗೆ ಕಾರ್ಯ ನಿರ್ವಹಿಸಿದ್ದೇನೆ. ಪ್ಯಾರಿಸ್‌ ಪ್ರಣಯ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ರಾಜ್ಯ ಪ್ರಶಸ್ತಿ ಸಹ ಬಂದಿದೆ. ತಮಿಳಿನಲ್ಲೂ ಕೆಲವು ಚಿತ್ರಗಳಿಗೆ ಸಂಗೀತ ನೀಡಿದ್ದೀನೆ. ಕೊರೊನಾ ಸಮಯದಲ್ಲಿ ನನಗೆ ನಿರ್ದೇಶನದತ್ತ ಒಲವು ಬಂತು. ಆದರೆ ನನಗೆ ನಿರ್ದೇಶನದ ಬಗ್ಗೆ ಹೆಚ್ಚು ತಿಳಿದಿಲ್ಲ. ಹಾಗಾಗಿ, ನ್ಯೂಯಾರ್ಕ್‌ ಫಿಲಂ ಅಕಾಡೆಮಿಯಲ್ಲಿ ಆನ್‌ ಲೈನ್‌ ಮೂಲಕ ನಿರ್ದೇಶನದ ಕಾರ್ಯವೈಖರಿ ಕಲಿತೆ. ರಂಗಭೂಮಿಯ ಸಾಕಷ್ಟು ಕಲಾವಿದರು ದೀಪು ಗೆಳೆಯರ ಬಳಗದಲ್ಲಿ ಅಭಿನಯಿಸಿದ್ದಾರೆ. ನನ್ನದೇ ಸಂಗೀತ ಚಿತ್ರ ಕ್ಕಿದೆ. ಇದರಲ್ಲಿ ಬರುವ ಕೆಲವು ಸನ್ನಿವೇಶಗಳನ್ನು ನಾನು, ನಿಜ ಜೀವನದಲ್ಲಿ ಅನುಭವಿಸಿದ್ದೀನಿ ಅಂದರೆ ತಪ್ಪಾಗಲಾರದು. ಹಿರಿತೆರೆಯಲ್ಲೂ ಎರಡು ಚಿತ್ರಗಳನ್ನು ನಿರ್ದೇಶಿಸಲಿದ್ದೇನೆ’ ಎಂದು ಮಾಹಿತಿ ನೀಡಿ ದರು ನಿರ್ದೇಶಕ ಸ್ಟೀಫ‌ನ್‌ ಪ್ರಯೋಗ್‌.

ದೀಪು ಪಾತ್ರ ಮಾಡಿರುವ ರೂಪಾಂತರ ತಂಡದ ವರುಣ್‌ ಕುಮಾರ್‌, ಪ್ರಶಾಂತ್‌, ಭರತ್‌ ಕುರ್ಮಾ, ಉಮಾ ಹಾಗೂ ಸತೀಶ್‌ ಚೌಹಾನ್‌ ತಮ್ಮ ಪಾತ್ರ ಹಾಗೂ ಕಿರುಚಿತ್ರದ ಬಗ್ಗೆ ಮಾಹಿತಿ ನೀಡಿದರು. ಕಿರುಚಿತ್ರಕ್ಕೆ ಗಂಗಾಧರ್‌ ತಲಕಾಡ್‌ ಹಾಗೂ ಪ್ರಶಾಂತ್‌ ತಲಕಾಡ್‌ ಅವರ ಛಾಯಾಗ್ರಹಣವಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next