Advertisement
ಇದು ಯಾವುದೋ ಪಬ್‌ನಲ್ಲಿ ಕುಡಿಯುತ್ತಾ ಕುಳಿತವರ ಲೊಟಗುಟ್ಟುವಿಕೆಯಲ್ಲ. ಮುಂದಿನ 4 ವರ್ಷದಲ್ಲಿ ಅಂತರಿಕ್ಷದಲ್ಲಿ ನಿರ್ಮಾಣವಾಗುವ “ವೊಯೇಜರ್ ಸ್ಟೇಷನ್’ ಎಂಬ ಹೋಟೆಲೊಂದರ ಬಣ್ಣನೆ!
ಮೂರು ವರ್ಷಗಳ ಹಿಂದೆ ಹುಟ್ಟಿದ್ದ ಆರ್ಬಿಟಲ್ ಅಸೆಂಬ್ಲಿ ಕಾರ್ಪೊರೇಷನ್ (ಒಎಸಿ) ಸಂಸ್ಥೆ ವೊಯೇಜರ್ ಸ್ಟೇಷನ್ ನಿರ್ಮಿಸಲು ಸಜ್ಜಾಗಿದೆ. ಸೌಲಭ್ಯಗಳು ಯಾವುವು?
ಯೋಜನೆ ಪ್ರಕಾರ, ವೊಯೇಜರ್‌ನಲ್ಲಿ ಪಾಡ್ ಮಾದರಿಯ ಸುಮಾರು 400 ರೂಮುಗಳು ಇರಲಿವೆ. ವೃತ್ತಾಕಾರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತೆರಳಲು ಮಧ್ಯದಲ್ಲಿ ಇಂಗ್ಲೀಷ್ ಎಕ್ಸ್ ಅಕ್ಷರದಂತೆ ಸ್ಕೈ ವಾಕರ್ ರೀತಿಯ ಲಿಂಕ್ ಕಲ್ಪಿಸಲಾಗುತ್ತದೆ. ಹೋಟೆಲ್‌ನ ಅಲ್ಲಲ್ಲಿ ಥೀಮ್ಡ್ ರೆಸ್ಟೋರೆಂಟ್‌ಗಳು, ಹೆಲ್ತ್ ಸ್ಪಾ, ಸಿನಿಮಾ ಮಂದಿರ, ಜಿಮ್, ಲೈಬ್ರರಿ, ಸಾಂಸ್ಕೃತಿಕ ಮಂದಿರ, ಭೂಮಂಡಲ ವೀಕ್ಷಣಾ ಗೃಹಗಳು, ಬಾರ್‌ಗಳು ಇರಲಿವೆ. ಜೊತೆಗೆ, 65ಗಿ 49 ಅಡಿ ಅಳತೆಯ ಖಾಸಗಿ ರೂಮುಗಳೂ ಇರಲಿದ್ದು, ಅವುಗಳನ್ನು ಬುಕ್ ಮಾಡುವ ಮೂಲಕ ಖಾಸಗಿ ವಿಲ್ಲಾಗಳಂತೆ ಬಳಸಬಹುದು. ಇದಲ್ಲದೆ, ಬಾಹ್ಯಾಕಾಶ ಯಾತ್ರಿಕರಿಗೆ ಅಲ್ಲಿ ಟ್ರೈನಿಂಗ್ ಸೆಂಟರ್ ಕೂಡ ಇರಲಿದ್ದು, ಅಮೆರಿಕ ಮತ್ತಿತರ ದೇಶಗಳ ಸರ್ಕಾರಗಳು ತಮ್ಮ ವಿಜ್ಞಾನಿಗಳನ್ನು ಅಲ್ಲಿಗೆ ಕಳುಹಿಸಬಹುದಾಗಿದೆ. ಅಂದಹಾಗೆ, ವರ್ಷದಲ್ಲಿ ಪ್ರತಿ 90 ನಿಮಿಷಗಳಿಗೊಮ್ಮೆ ಇದು ಭೂ ಪ್ರದಕ್ಷಿಣೆ ಮಾಡಲಿದೆ.
Related Articles
Advertisement
ಇದನ್ನೂ ಓದಿ:ಭೂಮಿಯ ಬಗ್ಗೆ ಪಿನ್ ಟು ಪಿನ್ ಮಾಹಿತಿ ನೀಡುತ್ತದೆ “ದಿಶಾಂಕ್ ಆ್ಯಪ್”..!
ಯಾವಾಗ ಸಿದ್ಧವಾಗುತ್ತೆ?ಎಲ್ಲವೂ ಅಂದುಕೊಂಡಂತೆ ನಡೆದರೆ 2027ಕ್ಕೆ ಈ ಪರಿಕಲ್ಪನೆ ನನಸಾಗಲಿದೆಯಂತೆ! ಇದರಲ್ಲಿ ಮೊದಲಿಗೆ ಹೋಟೆಲ್ 2025ಕ್ಕೆ ಸಿದ್ಧವಾದರೆ, ರೆಸಾರ್ಟ್ ವಿಭಾಗ 2027ರಿಂದ ಕಾರ್ಯಾರಂಭ ಮಾಡಲಿದೆ ಎಂದು ಸಂಸ್ಥೆ ಹೇಳಿದೆ.