Advertisement

ಬಟ್ಲರ್‌, ಸ್ಟೋಕ್ಸ್‌, ವೋಕ್ಸ್‌ ಐಪಿಎಲ್‌ನಿಂದ ವಾಪಸ್‌

06:00 AM May 17, 2018 | Team Udayavani |

ಲಂಡನ್‌: ಇಂಗ್ಲೆಂಡ್‌ ಟೆಸ್ಟ್‌ ತಂಡದಲ್ಲಿ ಅಚ್ಚರಿಯ ಕರೆ ಪಡೆದಿರುವ ಜಾಸ್‌ ಬಟ್ಲರ್‌ ಐಪಿಎಲ್‌ ಪಂದ್ಯಾವಳಿಯ ನಡುವಲ್ಲೇ ತವರಿಗೆ ವಾಪಸಾಗಲಿದ್ದಾರೆ. ರಾಜಸ್ಥಾನ್‌ ರಾಯಲ್ಸ್‌ ತಂಡದ ಸ್ಟಾರ್‌ ಆಟಗಾರನಾಗಿ ಮೆರೆದ ಬಟ್ಲರ್‌ ಅತೀ ಮಹತ್ವದ ಅಂತಿಮ ಲೀಗ್‌ ಪಂದ್ಯಕ್ಕೆ ಲಭ್ಯರಿರುವುದಿಲ್ಲ.

Advertisement

ಜಾಸ್‌ ಬಟ್ಲರ್‌ ಜತೆಯಲ್ಲಿ ಬೆನ್‌ ಸ್ಟೋಕ್ಸ್‌, ಕ್ರಿಸ್‌ ವೋಕ್ಸ್‌ ಕೂಡ ಐಪಿಎಲ್‌ ಬಿಟ್ಟು ಹೋಗಲಿದ್ದಾರೆ. ಸ್ಟೋಕ್ಸ್‌ ಕೂಡ ಬಟ್ಲರ್‌ ಜತೆಯಲ್ಲಿ ರಾಜಸ್ಥಾನ್‌ ತಂಡವನ್ನು ಪ್ರತಿನಿಧಿಸುತ್ತಿದ್ದರು. ಕ್ರಿಸ್‌ ವೋಕ್ಸ್‌ ಆರ್‌ಸಿಬಿ ತಂಡದ ಆಟಗಾರನಾಗಿದ್ದಾರೆ. ಪ್ರವಾಸಿ ಪಾಕಿಸ್ಥಾನ ವಿರುದ್ಧ ಮುಂದಿನ ತಿಂಗಳು ನಡೆಯಲಿರುವ ಪ್ರಥಮ ಟೆಸ್ಟ್‌ ಪಂದ್ಯಕ್ಕಾಗಿ ಈ ತಂಡವನ್ನು ಪ್ರಕಟಿಸಲಾಗಿದೆ. 

ಇಂಗ್ಲೆಂಡ್‌ ತಂಡ: ಜೋ ರೂಟ್‌ (ನಾಯಕ), ಅಲಸ್ಟೇರ್‌ ಕುಕ್‌, ಮಾರ್ಕ್‌ ಸ್ಟೋನ್‌ಮ್ಯಾನ್‌, ಡೇವಿಡ್‌ ಮಾಲನ್‌, ಜಾನಿ ಬೇರ್‌ಸ್ಟೊ, ಜಾಸ್‌ ಬಟ್ಲರ್‌, ಕ್ರಿಸ್‌ ವೋಕ್ಸ್‌, ಬೆನ್‌ ಸ್ಟೋಕ್ಸ್‌, ಡಾಮ್‌ ಬೆಸ್‌, ಸ್ಟುವರ್ಟ್‌ ಬ್ರಾಡ್‌, ಮಾರ್ಕ್‌ ವುಡ್‌, ಜೇಮ್ಸ್‌ ಆ್ಯಂಡರ್ಸನ್‌.

Advertisement

Udayavani is now on Telegram. Click here to join our channel and stay updated with the latest news.

Next