ಸ್ಟೆÇÉಾ ಮಿಸ್ : Dog says bow wow….
Donkey says hee haaa
Cow says moo mooo
ಚಿಂಟು (ಎಲ್‌ಕೆಜಿ ಸ್ಟೂಡೆಂಟ್): ಮಿಸ್, ನಮ್ ಅಜ್ಜನ್ ಮನೇಲ್ಲಿ ಹಸು “ಅಂಬಾ’ ಅನ್ನತ್ತೆ. “ಮೂ ಮೂ’ ಅನ್ನಲ್ಲ.
ಸ್ಟೆÇÉಾ ಮಿಸ್ : No, it says mooo mooo, you couldn’t hear properly, sit down now.
Advertisement
ಇದು ಕೆಲವೊಂದು ಯೂನಿವರ್ಸಲ್ ಟ್ರಾಥ್‌ಗಳ ಲೋಕಲ್ ರೂಪಾಂತರ ಆಗದಿದ್ದರ ಎಡವಟ್ಟಿನ ಪುಟ್ಟ ಉದಾಹರಣೆ. ಈಗ ಇಲೆಕ್ಟ್ರಾನಿಕ್ ಮೀಡಿಯಾ ಪ್ರಭಾವದಿಂದ ಪ್ರತಿ ಮಗುವೂ ಹಲ್ಲು ಬರುವುದಕ್ಕೆ ಮೊದಲೇ ನರ್ಸರಿ ರೈಮ್ ಎಂಬ ಗುಡಾಣದೊಳಗೆ ಇಲಿ ಮರಿಗಳಂತೆ ಓಡಾಡಿಕೊಂಡಿರುತ್ತವೆ. ಮಕ್ಕಳಿರುವ ಪ್ರತಿ ಮನೆಯಲ್ಲೂ ನರ್ಸರಿ ರೈಮ್ಸ… ಭಾಗವತ ಪುರಾಣಗಳಂತೆ. ಪ್ರತಿದಿನ ಪ್ರತಿ ಹೊತ್ತು ಊಟ-ತಿಂಡಿ ಹೊಟ್ಟೆ ದಾರಿ ಸರಾಗವಾಗಿ ಹಿಡಿಯಲು ಜಾನಿ, ಜಾಕ್, ಜಿಲ್ ಬರಲೇ ಬೇಕು. ಎಲ್ಲ ಅಪ್ಪ-ಅಮ್ಮ ಇರಲಿ ಅಜ್ಜ-ಅಜ್ಜಿ ಬಾಯಲ್ಲೂ ಜಾನಿ ಜಾನಿ, ಟ್ವಿಂಕಲ್ ಟ್ವಿಂಕಲ್, ಬಾ ಬಾ ಬ್ಲ್ಯಾಕ್ ಶೀಪು… ಪ್ಲೇ ಸ್ಕೂಲ್‌ಗೆ ಹೋಗುವ ಮಕ್ಕಳು ಊರಿಂದ ಬಂದ ಅಜ್ಜ-ಅಜ್ಜಿಗೆ ಒಂದು ವಾರದಲ್ಲಿ ಅದೆಷ್ಟು ಇಂಗ್ಲಿಷ್ ಪದಗಳ ಅಭ್ಯಾಸ ಮಾಡಿಸಿರುತ್ತವೆ ಅಂದರೆ ಮಗು ಅಜ್ಜನಲ್ಲಿ ಗಂಟೆ ಕೇಳಿದರೆ ಅಜ್ಜ ನೈನ್ ಥರ್ಟಿ ಅಂತಾನೆ. ಅಂದರೆ ಅಜ್ಜ ಒಂಬತ್ತೂವರೆಯಿಂದ ನೈನ್ ಥರ್ಟಿಗೆ ಅಪ್‌ಗೆÅàಡ್ ಆಗಿ¨ªಾನೆ.
Related Articles
ಮಾಣಿ ಮಾಣಿ ಮಂಡ್ಯ
ಸುಕುನುಂಡೇ ತಿಂದ್ಯಾ
ಆನಲ್ಲ ಅಪ್ಪಯ್ಯ
ಆಚೆಮನೆ ಮಾಣಿ
ನಮ್ಮೂರಲ್ಲಿ ಎಲ್ಲ ಮಕ್ಕಳ ಬಾಯಲ್ಲೂ ನಲಿಯುವ ಇನ್ನೆರಡು ಚುಟುಕು ಹೀಗಿದೆ,
ಕಾರ್ತೀಕ ಮಾಸೇ
ಕಾಯಾØಲು ದೋಸೆ
ಯಾಕ್ ಬಂದೆ ಕೂಸೆ
ನಿನಗಿಲ್ಲ ದೋಸೆ
ಕುಣಿ ಕುಣಿ ತಿಪ್ಪ
ಕುಣಿಯಲಾರೆನಪ್ಪ
ಕೋಲ್ ತರ್ತೀನಪ್ಪ
ಕುಣಿತೀನಿ ಕುಣಿತೀನಿ ಕುಣಿತೀನಿ
ಹೀಗೆ ಒಂದು ಪ್ರಾಂತ್ಯದಿಂದ ಇನ್ನೊಂದು ಪ್ರಾಂತ್ಯಗಳಿಗೆ ಸ್ವಲ್ಪ ಸ್ವಲ್ಪ ಮಾರ್ಪಾಟಿನಿಂದ ಇಂತಹ ಅನೇಕ ಪುಟ್ಟ ಪುಟ್ಟ ಹಾಯುRಗಳು ಮಕ್ಕಳ ಬಾಯಲ್ಲಿ ನಲಿದಾಡುತ್ತವೆ .
Advertisement
ಊರಿಂದ ಬಂದ ರಂಗಜ್ಜ ಒಂದು ವಾರವಿಡೀ ಕೇಳಿದ ರೈಮ್ಸ…ಗಳನ್ನೇ ಮೂರೂ ಹೊತ್ತು ಕೇಳಿ ಕೇಳಿ ಸುಸ್ತಾದ. ಮೊಮ್ಮಗನ ಆಟ-ಪಾಠ ನೋಡಿ ಸಣ್ಣಪುಟ್ಟ ಇಂಗ್ಲಿಷ್ ಪದಗಳನ್ನು ಪ್ರಯೋಗಿಸುವುದನ್ನು ಕಲಿತರೂ ನಮ್ಮ ಮಾತೃಭಾಷೆಯ ಸೊಗಡು, ಮಾಧುರ್ಯ ಮೊಮ್ಮಗನ ರೈಮ್ಸ…ನಲ್ಲಿಲ್ಲ ಅನ್ನಿಸಿತು. ಜಿ. ಪಿ. ರಾಜರತ್ನಂರಂಥವರ ಕೊಡುಗೆ ಅಪಾರ ಎಂದು ನೆನೆದನು. ತನ್ನದೇ ವರ್ಷನ್‌ನಲ್ಲಿ Old MacDonald had a farm E A E A , And on his farm he had a cow… ಹೇಳಿಕೊಟ್ಟ ಚಿಂಟುಗೆ .ನಮ್ ರಂಗಜ್ಜಂದೊಂದು ತ್ವಾಟ ಇತ್ತು ಅ ಆ ಇ ಈ ಉ …
ತ್ವಾಟದÇÉೊಂದು ಕರಿದನ ಇತ್ತು ಅ ಆ ಇ ಈ ಉ
ಅಲ್ಲೂ ಅಂಬಾ ಇಲ್ಲೂ ಅಂಬಾ ಎÇÉೆಲ್ಲೂ ಅಂಬಾ …
ನಮ್ ರಂಗಜ್ಜಂದೊಂದು ತ್ವಾಟ ಇತ್ತು ಅ ಆ ಇ ಈ ಉ
ತ್ವಾಟದÇÉೊಂದು ಹಂಡುYನ್ನಿ ಇತ್ತು ಅ ಆ ಇ ಈ ಉ
ಅಲ್ಲೂ ಬೌ ಬೌ ಇಲ್ಲೂ ಬೌ ಬೌ ಎÇÉೆಲ್ಲೂ ಬೌ ಬೌ …
ಅಂದಾಗ ಚಿಂಟು ಫುಲ್ ಖುಶ್. ಇಂದಿನ ದಿನಗಳಲ್ಲಿ ರೈಮ್ಸ… ಸಿಡಿಗಳದ್ದು ಒಂದು ಉದ್ಯಮವಾಗಿರುವುದರಿಂದ ಅಲ್ಲೂ R-D ಈ ಆಗಿ ಈಗ ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಹಳೆಯ ಶಿಶುಗೀತೆಗಳನ್ನೆಲ್ಲ ಮಕ್ಕಳಿಗೆ ಪರಿಚಯಿಸುತ್ತಿ¨ªಾರೆ, ಸಂತೋಷ. ಆದರೆ ಕೆಲವೊಂದು ಕ್ಲಾಸಿಕ್‌ಗಳಂತೆ ಬಿಂಬಿತವಾಗಿರುವ ಇಂಗ್ಲಿಷ್ ರೈಮ್ಸ…ಗಳನ್ನು ನಮ್ಮ ಮಕ್ಕಳು ನುಂಗುವ ಕಣ್ಣಿನಿಂದ ನೋಡುತ್ತವೆ. ಎಲ್ಲ ಪುಟ್ಟ ಹೆಣ್ಣುಮಕ್ಕಳ ಫೇವರಿಟ್ Chubby Cheeks Dimpled chin ಎಲ್ಲೋ ಒಂದು ಕಡೆ ನಮ್ಮ ಪುಟ್ಟ ಕಂದಮ್ಮಗಳ ಯೋಚನೆಯನ್ನು ದಾರಿ ತಪ್ಪಿಸುವಂತೆ ತೋಚುತ್ತದೆ, ಗುಳಿ ಕೆನ್ನೆ , ಗುಲಾಬಿ ತುಟಿ, ಗುಂಗುರು ಕೂದಲು, ನೀಲಿ ಕಂಗಳು ಇದ್ದರೆ ಮಾತ್ರ ಟೀಚರ್ಸ್ ಪೆಟ್ ಆಗುತ್ತಾರೆ ಎಂಬ ಸಂದೇಶ ಕೊಡುವಂತಿದೆ. Educative ಎಂಬ ಹಣೆಪಟ್ಟಿ ಹೊತ್ತ ರೈಮ್ಸ… ಸಂಖ್ಯೆ ಸಾಕಷ್ಟಿದ್ದರೂ ಸೊ ಕಾಲ್ಡ… ಕ್ಲಾಸಿಕ್‌ಗಳನ್ನು ಬಿಡಲಾಗದೆ ಇಂದಿನ ಶಾಲೆಗಳು á London bridge is falling down, falling down ಎಂದು Fall down ಆಗುತ್ತಲೇ ಇವೆ.
ಈಗ ಮತ್ತೆ ಚಿಂಟುವಿನ ಕ್ಲಾಸ್ ರೂಮ್ ವಿಷಯಕ್ಕೆ ಬರೋಣ, ಚಿಂಟು : ಅಪ್ಪಾ ನಂಗೆ ಮಿಸ್ಸು ಅನಿಮಲ್ ಸೌಂಡ್ಸ್ ವರ್ಕ್‌ಶೀಟ್‌ನಲ್ಲಿ “ಕೌ ಸೇಸ್ ಅಂಬಾ’ ಅಂತ ಬರಿªದ್ದಕ್ಕೆ ರಾಂಗ್ ಹಾಕಿದಾರೆ. ಯಾಕಪ್ಪಾ? ಅಪ್ಪ: ಪುಟ್ಟು , ನಿನ್ನ ಅಜ್ಜನ್ ಮನೇಲಿ ಹಸು “ಅಂಬಾ’ ಅನ್ನತ್ತಲ್ವಾ. ಸ್ಟೆÇÉಾ ಮಿಸ್ ತಾತನ ಮನೇಲಿ ಹಸು “ಮೂ ಮೂ ಮೂ’ ಅನ್ನತ್ತಂತೆ. ಮಲ್ಕೋ ಪುಟ್ಟ ಈಗ. – ವಿದ್ಯಾ ಹೊಸಕೊಪ್ಪ