ತೀರ್ಥಹಳ್ಳಿ : ರಾಷ್ಟ್ರೀಯ ಹೆದ್ದಾರಿ 169 ರ ತೀರ್ಥಹಳ್ಳಿ – ಕೊಪ್ಪ – ಶೃಂಗೇರಿ ಮಾರ್ಗದ ಜಯಚಾಮರಾಜೇಂದ್ರ ಸೇತುವೆ ಸಮೀಪ ಒಂದು ವರ್ಷಗಳ ಹಿಂದೆ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಅಗಲೀಕರಣ ಉತ್ತಮವಾಗಿ ನೆಡೆದಿದೆ.
ಆದರೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿಯ ಇಂಜಿನಿಯರ್ ಗಳ ಬೇಜವಾಬ್ದಾರಿತನದಿಂದ ಕಬ್ಬಿಣದ ವಿದ್ಯುತ್ ಕಂಬ ತೆರವು ಮಾಡಿ ರಸ್ತೆ ಪಕ್ಕದಲ್ಲಿ ಹಾಕಿದ್ದರೂ ಕೂಡ ಹಳೆ ಕಬ್ಬಿಣದ ವಿದ್ಯುತ್ ಕಂಬವನ್ನು ಅರ್ಧ ಕಟ್ ಮಾಡಿ ಒಂದು ವರ್ಷದಿಂದ ಹಾಗೆಯೇ ಬಿಟ್ಟಿದ್ದು ಆ ಜಾಗದಲ್ಲಿ ಸುತ್ತಲೂ ಇಂಟರ್ ಲಾಕ್ ಕೂಡ ಅಳವಡಿಸಲಾಗಿದೆ.
ಕಬ್ಬಿಣದ ತುಂಡಾದ ವಿದ್ಯುತ್ ಕಂಬಕ್ಕೆ 2-3 ಚೀಲ ಮರಳು ತುಂಬಿ ಇಡಲಾಗಿದೆ. ಈಗ ಮರಳು ಚೀಲ ಚೆಲ್ಲಾಪಿಲ್ಲಿಯಾಗಿ ಕಬ್ಬಿಣದ ಸಲಾಕೆ ಎದ್ದು ಕಾಣುತ್ತಿದೆ. ಇದು ರಸ್ತೆ ಬದಿಯಲ್ಲಿ ಓಡಾಡುವ ಪಾದಚಾರಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು ಈಗಾಗಲೇ ಕೆಲವರಿಗೆ ತುಕ್ಕು ಹಿಡಿದ ಕಬ್ಬಿಣದ ಗ್ರಿಲ್ ತಾಗಿ ಸಣ್ಣ ಪುಟ್ಟ ಗಾಯಾಗಳಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ ಹೆದ್ದಾರಿ ಅಧಿಕಾರಿಗಳಿಗೆ ಹಿಡಿ ಶಾಪ ಹಾಕಿದ ನಿದರ್ಶನ ಕೂಡ ಇದೆ.
ಇನ್ನಾದರೂ ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಹಾಗೂ ಅಧಿಕಾರಿಗಳು ನಿದ್ರೆ ಮಂಪರಿನಿಂದ ಎದ್ದು ಬೇಜವಾಬ್ದಾರಿತನವನ್ನು ಬಿಟ್ಟು ತಕ್ಷಣವೇ ತುಕ್ಕು ಹಿಡಿದ ಕಬ್ಬಿಣದ ಗ್ರಿಲ್ ತೆಗೆಯುವ ಮೂಲಕ ಓಡಾಡುವ ಪಾದಚಾರಿಗಳಿಗೆ ತೊಂದರೆ ಆಗದಂತೆ ಕೆಲಸ ಮಾಡುತ್ತಾರ? ಕಾದು ನೋಡಬೇಕಿದೆ.
ಇದನ್ನೂ ಓದಿ: Election: ಪುರಸಭೆ 14ನೇ ವಾರ್ಡಿನ ಉಪಚುನಾವಣೆ… ಕಾಂಗ್ರೆಸ್ – ಬಿಜೆಪಿ ಮಧ್ಯೆ ನೇರ ಹಣಾಹಣಿ