Advertisement
ಒಬ್ಬಂಟಿ ಮೇಲೆ ದಾಳಿಲಕ್ಷ್ಮೀನಾರಾಯಣ ನೂರಿತ್ತಾಯರ ಪುತ್ರ ನಾಗೇಂದ್ರ ಪ್ರಸಾದ್ ಒಬ್ಬರೇ ವಾಸಿಸುತ್ತಿದ್ದು ಅವರ ಮನೆಯಲ್ಲಿ ದರೋಡೆ ನಡೆದಿದೆ. ಮಂಗಳವಾರ ರಾತ್ರಿ 10.30ಕ್ಕೆ ಸುಮಾರಿಗೆ ಪ್ರಸಾದ್ ಅವರು ಪೇಟೆಯಿಂದ ಮನೆಗೆ ಬಂದಿದ್ದಾರೆ. ಮನೆಯ ಬೀಗ ತೆಗೆದು ಒಳಗೆಹೋಗುತ್ತಿ ದ್ದಂತೆಯೇ ಮನೆಯ ಸಮೀಪವೇ ಅಡಗಿ ಕುಳಿತಿದ್ದ ದರೋಡೆಕೋರರು ಪ್ರಸಾದ್ ಮೇಲೆ ದಾಳಿ ನಡೆಸಿದ್ದಾರೆ.
ದರೋಡೆಕೋರರು ಮನೆಯಲ್ಲಿದ್ದ 40 ಸಾವಿರ ರೂ. ನಗದು, ಸುಮಾರು 60 ಸಾವಿರ ರೂ.ಮೌಲ್ಯದ ಚಿನ್ನದ ಸರ, ಮೊಬೆ„ಲ್,ಎ.ಟಿ.ಎಂ ಕಾರ್ಡುಗಳನ್ನು ಅಪಹರಿಸಿದ್ದಾರೆ. ಹಣ ನೀಡುವಂತೆ ಇಲ್ಲದಿದ್ದರೆ ಕೊಲೆ ಮಾಡುವುದಾಗಿಯೂ ಪ್ರಸಾದರಿಗೆ ಬೆದರಿಕೆ ಹಾಕಿದೆ. ಚೂರಿ ಹಿಡಿದು ಎ.ಟಿ.ಎಂ ಕಾರ್ಡಿನ ಪಿನ್ ನಂಬರ್‌ಗಳನ್ನು ಪಡೆದುಕೊಂಡಿದ್ದಾರೆ ಎಂದು ಪ್ರಸಾದ್ ಪೊಲೀಸರಿಗೆ ತಿಳಿಸಿದ್ದಾರೆ.
Related Articles
ಪ್ರಸಾದರನ್ನು ಕಟ್ಟಿ ಹಾಕಿಯೇ ದರೋಡೆಕೋರರು ತೆರಳಿದ್ದು ಬಳಿಕ ಅವರು ಹಲ್ಲಿನಿಂದ ಕಚ್ಚಿಯೇ ಕೈಗೆ ಕಟ್ಟಿದ್ದ ಬಟ್ಟೆಯನ್ನು ಬಿಚ್ಚಿದ್ದಾರೆ. ಇದಕ್ಕಾಗಿ ಸುಮಾರು ಮೂರು ಗಂಟೆಗೂ ಹೆಚ್ಚು ಸಮಯ ಪರದಾಡಿದ್ದಾರೆ. ಬಳಿಕ ನೆರೆಯ ಮನೆಗೆ ತೆರಳಿ ಮಾಹಿತಿ ನೀಡಿ, ಧರ್ಮಸ್ಥಳ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
Advertisement
ತನಿಖೆಘಟನಾ ಸ್ಥಳಕ್ಕೆ ಬಂಟ್ವಾಳ ಎ.ಎಸ್‌ಪಿ ಡಾ| ಅರುಣ್‌ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳವನ್ನು ಕರೆಸಲಾಗಿದ್ದು ಅದು ಮನೆಯಿಂದ ಸ್ವಲ್ಪ ದೂರ ಮುಖ್ಯ ರಸ್ತೆಯಲ್ಲಿ ಹೋಗಿ ಹಿಂತಿರುಗಿದೆ. ಬೆರಳಚ್ಚು ತಜ್ಞರೂ ಸ್ಥಳಕ್ಕೆ ಆಗಮಿಸಿ ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಧರ್ಮಸ್ಥಳ ಪಟ್ರಮೆ ರಸ್ತೆಗೆ ತಾಗಿಕೊಂಡಿರುವ ಒಂಟಿ ಮನೆ ಇದಾಗಿದ್ದು ಮನೆಯಲ್ಲಿ ಇವರೊಬ್ಬರೇ ಇರುವ ಮಾಹಿತಿಯಿರುವವರು ಯಾರಾದರೂ ದರೋಡೆಕೋರರೊಂದಿಗೆ ಸಹಕರಿಸಿರಬಹುದು ಎಂದು ಪೋಲೀಸರು ಅನುಮಾನಿಸುತ್ತಿದ್ದಾರೆ. ತಂಡದ ಸದಸ್ಯರು ಹಿಂದಿಯಲ್ಲಿ ಮಾತನಾಡುತ್ತಿದ್ದರು ಎಂದು ಪ್ರಸಾದ್ ತಿಳಿಸಿದ್ದಾರೆ. ಎಟಿಎಂ ಮೂಲಕ ಡ್ರಾ
ದರೋಡೆ ಕೋರರು ಅಲ್ಲಿಂದ ತೆರಳಿ ರಾತ್ರಿಯೇ ಅಪಹರಿಸಿದ್ದ ಎ.ಟಿ.ಎಂ ಕಾರ್ಡನ್ನು ಉಪಯೋಗಿಸಿ ಮೂವತ್ತು ಸಾವಿರ ನಗದನ್ನು ತೆಗೆದಿದ್ದಾರೆ. ಮತ್ತೂಂದು ಕಾರ್ಡನ್ನು ಉಪಯೋಗಿಸಿ ಬೆಳಿಗ್ಗೆ ರೂ. 40 ಸಾವಿರ ನಗದೀಕರಿಸಿರುವುದಾಗಯೂ ತಿಳಿದು ಬಂದಿದೆ. ದರೋಡೆಕೋರರು ಹಣ ಡ್ರಾ ಮಾಡಿರುವ ಎ.ಟಿ.ಎಂ. ಅನ್ನು ಪೊಲೀಸರು ಪತ್ತೆ ಹಚ್ಚಿದ್ದು ಅಲ್ಲಿನ ಸಿಸಿ ಕ್ಯೆಮಾರಾಗಳಲ್ಲಿ ದರೋಡೆಕೋರರ ಚಹರೆಗಳು ಪತ್ತೆಯಾಗಬಹುದೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿದೆ.