Advertisement

ಕಾವ್ಯ ಉಳಿಯುವುದು ಸತ್ವದ ಮೇಲೆ: ಡಾ|ಹರಿಕೃಷ್ಣ  ಭರಣ್ಯ

02:05 AM Jul 13, 2017 | Harsha Rao |

ಬದಿಯಡ್ಕ: ಷಟ³ದಿಗಳನ್ನು ಬಳಸಿ ಕಾವ್ಯಗಳನ್ನು ಹೊಸೆಯುವುದು ಈಗಿನ ಕಾಲದಲ್ಲಿ ವಿರಳವಾಗಿದೆ. ಇಂತಹ ಕಾವ್ಯ ಉಳಿಯುವುದು ಇದರ ಸತ್ವದ ಮೇಲೆ ಎಂದು ಖ್ಯಾತ ಸಾಹಿತಿ, ವಿಶ್ರಾಂತ ಕನ್ನಡ ವಿಭಾಗ ಮುಖ್ಯಸ್ಥ ಡಾ| ಹರಿಕೃಷ್ಣ ಭರಣ್ಯ ಹೇಳಿದರು.

Advertisement

ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಕನ್ನಡ ಸಾಹಿತ್ಯಪರಿಷತ್ತು ಕೇರಳ ಗಡಿನಾಡ ಘಟಕದ ನೇತೃತ್ವದಲ್ಲಿ ಉದಯೋನ್ಮುಖ ಕವಿ, ಕೃಷಿಕ, ಅಬ್ಬಿಮೂಲೆ ಶಂಕರ ಶರ್ಮ ಕುಳಮರ್ವ ಅವರು ಭಾಮಿನಿ ಷಟ³ದಿಯಲ್ಲಿ ರಚಿಸಿದ “ಕುಮಾರೇಶ್ವರ ಚರಿತ್ರೆ’ಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಪುರಾಣ ಇತಿಹಾಸವನ್ನು ಬಿಂಬಿಸುವ ಇಂತಹ ಕೃತಿಗಳ ಸತ್ವವು ಉಳಿದರೆ ಮಾತ್ರ ಸಾರಸ್ವತ ಲೋಕ ಸಮೃದ್ಧವಾಗಬಲ್ಲದು. ಅವುಗಳನ್ನು ಸಂಗ್ರಹಿಸಿ ಪ್ರಕಟಿಸುವ ಮೂಲಕ ಮುಂದಿನ ಜನಾಂಗಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್‌.ವಿ. ಭಟ್‌ ಸಮಾರಂಭದ ಅಧ್ಯಕ್ಷತೆ ವಹಿಸಿ ದ್ದರು. ಸಾಹಿತಿ, ವಿಮರ್ಶಕ, ಕಾಸರ ಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ  ಡಾ| ರಾಧಾಕೃಷ್ಣ ಬೆಳ್ಳೂರು ಕೃತಿ ಅವಲೋಕನ ನಡೆಸಿ ಮಾತನಾಡಿ, ಮಿಶ್ರ ಭಾಷಾ ಶೈಲಿಯನ್ನು ಬಳಸಿದ ಖಂಡ ಕಾವ್ಯಗಳಿಗಿಂತ ತುಸು ವಿಸ್ತಾರವಾದ ಕೃತಿ ಇದಾಗಿದೆ. ಕನ್ನಡದಲ್ಲಿ ಇಂತಹ ಕಾವ್ಯ ಇಲ್ಲ ಎಂಬ ಕೊರತೆ ಇಂದು ನೀಗಿದೆ. ಸರಳ, ಸಹಜವಾಗಿರುವ ಈ ಕಾವ್ಯ ದಲ್ಲಿ ಕನ್ನಡಿಗರಿಗೆ ವಿಶಿಷ್ಟವಾದಂತಹ ಕಥಾ ವಸ್ತು ಒಳಗೊಂಡಿದೆ. ಈ ಕೃತಿಯು ಖಂಡ ಕಾವ್ಯಗಳಿಗೆ ಅಣ್ಣನಂತಿದೆ. ಇಷ್ಟು ದೀರ್ಘ‌ ವಾದ ಕೃತಿ ಈ ತನಕ ಬಂದಿಲ್ಲ. ಇದು ಕನ್ನಡ ಕ್ಕೊಂದು ಶ್ರೇಷ್ಠ ವಾದ ಕೊಡುಗೆೆ. ಇನ್ನಷ್ಟು ಕೃತಿಗಳು ಅವರ ಮೂಲಕ ಹೊರ ಹೊಮ್ಮಲಿ ಎಂದು ಹಾರೈಸಿದರು.

ಶಾಲಾ ಪ್ರಬಂಧಕ ಜಯದೇವ ಖಂಡಿಗೆ ಶುಭಾಶಂಸನೆಗೈದರು. ಮೇಧಾ ನಾಯರ್‌ಪಳ್ಳ “ಕುಮಾರೇಶ್ವರ ಚರಿತ್ರೆ’ಯ ಆಯ್ದಭಾಗದ ಕಾವ್ಯ ವಾಚನ ಮಾಡಿದರು.

Advertisement

ಈ ಸಂದರ್ಭದಲ್ಲಿ ಕ.ಸಾ.ಪ. ಕೇರಳ ಗಡಿ ನಾಡ ಘಟಕದ ವತಿಯಿಂದ ಕೃತಿಕಾರ ದಂಪತಿಯನ್ನು ಶಾಲು ಹೊದೆಸಿ ಫಲಪುಷ್ಪಗಳನ್ನಿತ್ತು ಗೌರವಿಸಲಾಯಿತು. ಕೃತಿಕಾರ ಅಬ್ಬಿಮೂಲೆ ಶಂಕರ ಶರ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕನ್ನಡ ಹೋರಾಟಗಾರ ನ್ಯಾಯವಾದಿ ಅಡೂರು ಉಮೇಶ ನಾೖಕ್‌ ಉಪಸ್ಥಿತರಿದ್ದರು.
ಕ.ಸಾ.ಪ. ಕೇರಳ ಗಡಿನಾಡ ಘಟಕದ ಪದಾಧಿಕಾರಿ ಸುಬ್ಬಣ್ಣ ಶೆಟ್ಟಿ ಕಾರ್ಯ ಕ್ರಮ ನಿರೂಪಿಸಿದರು. ಕ.ಸಾ.ಪ. ಕೇರಳ ಗಡಿನಾಡ ಘಟಕದ ಗೌರವ ಕಾರ್ಯ ದರ್ಶಿ ನವೀನ್‌ಚಂದ್ರ ಎಂ.ಎಸ್‌. ಮಾನ್ಯ ಸ್ವಾಗತಿಸಿದರು.  ಗೌರವ ಕಾರ್ಯದರ್ಶಿ ರಾಮಚಂದ್ರ ಭಟ್‌ ಪಿ. ಧರ್ಮತ್ತಡ್ಕ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next