Advertisement

Ekkamale oil: ಎಕ್ಕಮಾಲೆ ಎಣ್ಣೆ ಉತ್ಪಾದನೆ, ಮಾರಾಟಕ್ಕೆ ತಡೆಯಾಜ್ಞೆ

08:30 PM Aug 03, 2024 | Team Udayavani |

ಕಾಪು: ಜಿಲ್ಲೆಯ ಕಾರ್ಕಳ ತಾಲೂಕಿನ ರೇಂಜಾಳ ಗ್ರಾಮದ ಸುಧಾಕರ್‌ ಎಂ. ಪೂಜಾರಿ ಅವರ ರಿಜಿಸ್ಟರ್ಡ್‌ ಟ್ರೇಡ್‌ ಮಾರ್ಕ್‌ ಹೊಂದಿರುವ ‘ಎಕ್ಕದ’ ಎಂಬ ನೋವಿನ ಎಣ್ಣೆಯ ಟ್ರೇಡ್‌ ಮಾರ್ಕ್‌ಗೆ ಸಂಬಂಧಪಟ್ಟಂತೆ, ಈ ಟ್ರೇಡ್‌ ಮಾರ್ಕ್‌ ಉಲ್ಲಂಘಿಸಿ ‘ಎಕ್ಕಮಾಲೆ’  ಎಂಬ ಹೆಸರಿನಲ್ಲಿ ಉತ್ಪಾದನೆ ಮತ್ತು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ನೋವಿನ ಎಣ್ಣೆಗೆ ಉಡುಪಿ ಜಿಲ್ಲಾ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

Advertisement

ಮೂಡುಬಿದಿರೆಯ ಸಂಜೀವಿನಿ ಆಯುರ್ವೇದಿಕ್‌ ಎಂಬ ಹೆಸರಿನಲ್ಲಿ ಎಕ್ಕಮಾಲೆ ಎಂಬ ನೋವಿನ ಎಣ್ಣೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ಮೋಹಿದ್ದಿನ್‌ ಕುನ್ನಿ ಯಾನೆ ಎಂ. ಕೆ. ಗಾರ್ಡಡಿ ಅವರಿಗೆ ಉತ್ಪಾದನೆ ಮತ್ತು ಮಾರಾಟ ಮಾಡದಂತೆ ತಡೆಯಾಜ್ಞೆ ವಿಧಿಸಿ ಉಡುಪಿ ನ್ಯಾಯಾಲಯ ಆದೇಶ ಮಾಡಿದೆ.

ಈ ಕುರಿತಂತೆ ಸುಧಾಕರ್‌ ಪೂಜಾರಿ ಅವರು ಉಡುಪಿ ನ್ಯಾಯಾಲಯದಲ್ಲಿ ಟ್ರೇಡ್‌ ಮಾರ್ಕ್‌ ಕಾನೂನಿನ ಅನ್ವಯ ದಾವೆಯನ್ನು ಹೂಡಿದ್ದರು. ದಾವೆದಾರ ಸುಧಾಕರ್‌ ಎಂ. ಪೂಜಾರಿ ಪರವಾಗಿ ನ್ಯಾಯಾಲಯದಲ್ಲಿ ಉಡುಪಿಯ ನ್ಯಾಯವಾದಿ ಮಂಜುನಾಥ್‌ ವಿ. ಹಾಗೂ ನವನೀತ್‌ ಡಿ. ಹಿಂಗಾಣಿ ವಾದಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next