Advertisement

ಸ್ಟೇ ಹಂಗ್ರಿ ಆ್ಯಂಡ್‌  ಸ್ಟೇ ಫ‌ೂಲಿಶ್‌; ಖ್ಯಾತ ಆ್ಯಪಲ್‌ ಕಂಪೆನಿ ಹುಟ್ಟಿಕೊಂಡಿದ್ದೇಗೆ?

03:11 PM Sep 29, 2020 | Karthik A |

ಸುರಕ್ಷತೆ, ಕಾರ್ಯ ದಕ್ಷತೆ, ಗುಣಮಟ್ಟ ಹೀಗೆ ಯಾವುದೇ ವಿಚಾರದಲ್ಲೂ ರಾಜಿಯಾಗದೆ ವಿಶ್ವ ಶ್ರೇಷ್ಠ ದರ್ಜೆಯ ಸರಕುಗಳನ್ನು ಒದಗಿಸುತ್ತಿರುವ ಹೆಮ್ಮೆ ಆ್ಯಪಲ್‌ ಕಂಪೆನಿಯದ್ದು.

Advertisement

ಜಗತ್ತಿನ ಅತ್ಯಂತ ವಿಶ್ವಾಸಾರ್ಹ ಕಂಪ್ಯೂಟರ್‌ ಹಾಗೂ ಮೊಬೈಲ್‌ ಕಂಪೆನಿ ಆ್ಯಪಲ್‌ ಅನ್ನು ಸ್ಥಾಪಿಸಿ, ಬೆಳೆಸಿದ ಕೀರ್ತಿ ಸ್ಟೀವ್‌ ಜಾಬ್ಸ್ ಅವರಿಗೆ ಸಲ್ಲುತ್ತದೆ. ಆ್ಯಪಲ್‌ ಕಂಪೆನಿ ಕಟ್ಟಿ ಬೆಳೆಸುವಲ್ಲಿ ಅವರ ಅಪಾರ ಶ್ರಮವಿದೆ.

ಆ್ಯಪಲ್‌ ಸಂಸ್ಥೆಯ ಸರಕು ಮಾರಾಟ ಹೆಚ್ಚಿಸಲು ಸ್ಟೀವ್‌ “ಥಿಂಕ್‌ ಡಿಫ‌ ರೆಂಟ್‌’ ಎಂಬ ಕ್ಯಾಂಪೇನ್‌ ಹಮ್ಮಿಕೊಂಡರು. ಈ ಮೂಲಕ ಜಗತ್ತಿನ ಅಗ್ರ ಕಂಪೆನಿಯಾಗುವಂತೆ ಮಾಡಿದ ಕೀರ್ತಿ ಅವರದ್ದು. ಐಮ್ಯಾಕ್‌, ಐಟ್ಯೂನ್ಸ್‌, ಐಟ್ಯೂನ್ಸ್‌ ಸ್ಟೋರ್, ಆ್ಯಪಲ್‌ ಸ್ಟೋರ್‌, ಐಪೋಡ್‌, ಐಫೋನ್‌, ಆ್ಯಪ್‌ ಸ್ಟೋರ್‌ ಗಳನ್ನು ಹುಟ್ಟಿಹಾಕಿದರು. ಇಂದು ಆ್ಯಪಲ್‌ ಮೊಬೈಲ್‌ ಖರೀದಿ  ಅದೆಷ್ಟೋ ಜನರ ಹಿರಿಯಾಸೆಯಾಗಿದೆ.

ಈ ಹಾದಿಯಲ್ಲಿ ಅವಮಾನ, ಮೋಸ, ನಿರಾಸೆ, ಅನಿರೀಕ್ಷಿತ ಆಘಾತ ಎಲ್ಲವನ್ನೂ ಜಾಬ್ಸ್ ಅನುಭವಿಸಿದ್ದಾರೆ. ಇವರ “ಸ್ಟೇ ಹಂಗ್ರಿ ಆ್ಯಂಡ್‌ ಸ್ಟೇ ಫ‌ೂಲಿಶ್‌’ ವಾಕ್ಯ ಎಷ್ಟೋ ಸಾಧಕರಿಗೆ ಧ್ಯೇಯ ವಾಕ್ಯವಾಗಿದೆ. ಸ್ಟೀವ್‌ ಜನ್ಮದಾತೆ ಜಾನ್ನೆ ಸ್ಕೀಬಲ್‌ಗೆ ಕಾಲೆಜು ಶಿಕ್ಷಣದ ವೇಳೆ ಸಹಪಾಠಿ ಅಬ್ದುಲ್‌ಪತಾಹ್‌ ಜೊಂಡಾಲಿಯೊಂದಿಗೆ ಪ್ರೇಮಾಂಕುರವಾಗುತ್ತದೆ. ಕಾಲಾನಂತರ ಜಾನ್ನೆ ಗರ್ಭಿಣಿಯಾಗುತ್ತಾಳೆ. ಜಾನ್ನೆ ಕಟ್ಟಾ ಕ್ರೈಸ್ತಳಾದರೆ ಇತ್ತ ಜೊಂಡಾಲಿ ಕಟ್ಟಾ ಮುಸ್ಲಿಂ.ಹೀಗಾಗಿ ವಿವಾಹ ಸಾಧ್ಯವಾಗಲಿಲ್ಲ. ಅಮೆರಿಕದಲ್ಲಿ ಆಗ ಭ್ರೂಣ ಹತ್ಯೆಯು ಶಿಕ್ಷಾರ್ಹ ಅಪರಾಧ‌ವಾಗಿತ್ತು. ಹೀಗಾಗಿ 1955ರ ಫೆ. 24ರಂದು ಜನಿಸಿದ ಮಗುವನ್ನು ಪೌಲ್‌ ಜಾಬ್ಸ್ ಮತ್ತು ಕ್ಲಾರಾ ದಂಪತಿಗೆ ದತ್ತು ಕೊಡುತ್ತಾಳೆ.

ಸ್ಟೀವ್‌ ತಮ್ಮ ಓದನ್ನು ಅರ್ಧಕ್ಕೆ ಬಿಟ್ಟು ಉದ್ಯಮದತ್ತ ಮುಖ ಮಾಡಿದವರು. ಅಷ್ಟಕ್ಕೂ ಇವರು ಸುಖಾಸುಮ್ಮನೆ ಡ್ರಾಪೌಟ್‌ ಆದವರಲ್ಲ. ತಂದೆ ಮೆಕ್ಯಾನಿಕ್‌, ತಾಯಿ ಅಕೌಟೆಂಟ್‌ ಆದುದರಿಂದ ಸ್ಟೀವ್‌ನನ್ನು ಸೇರಿದ್ದಸಿದ್ದ ರೀಡ್‌ ಕಾಲೇಜಿನ ಶುಲ್ಕ ಕಟ್ಟಲು ಅವರು ಪಡುತ್ತಿದ್ದ ಪರಿಪಾಟಲನ್ನು ಕಂಡು ತಾನೂ ಕೆಲಸಮಾಡುತ್ತಿದ್ದ. ಆದರೂ ದುಬಾರಿ ಶುಲ್ಕ ಭರಿಸಿ ಓದುವುದು ವ್ಯರ್ಥವೆನಿಸಿ ಅರ್ಧಕ್ಕೆ ನಿಲ್ಲಿಸಿ, ಅದೇ ಕಾಲೇಜಿನಲ್ಲಿ ಕ್ಯಾಲಿಯೋಗ್ರಫಿ ಕೋರ್ಸ್‌ ಕಲಿಯಲು ಸೇರಿಕೊಂಡ. ಹಣ ಉಳಿಸಲು ಸ್ನೇಹಿತರ ಕೋಣೆಯಲ್ಲೇ ನೆಲದ ಮೇಲೆ ಮಲಗುವುದು, ರಸ್ತೆ ಪಕ್ಕ ಬಿದ್ದಿರುವ ಬಾಟಲಿ ಆಯ್ದು ಬಂದ ಹಣದಲ್ಲೇ ಊಟ ಮಾಡುತ್ತಿದ. ವಾರಕ್ಕೊಮ್ಮೆ ಹೊಟ್ಟೆತುಂಬ ಊಟಕ್ಕಾಗಿ ಅಲ್ಲಿನ ಹರೆಕೃಷ್ಣ ಮಂದಿರಕ್ಕೆ ತೆರಳುತ್ತಿದ್ದ. ಇವು ಅವನ ಬಾಲ್ಯದ ಕಷ್ಟದ ದಿನಗಳು.

Advertisement

ಗ್ಯಾರೇಜ್‌ನಲ್ಲೇ ಆ್ಯಪಲ್‌ ಕಂಪೆನಿಯನ್ನು ಆರಂಭ
ಜಾಬ್ಸ್ ತನ್ನ ಕಾಲೇಜು ಸಹಪಾಠಿ ವೋಜಾ°ಯಿಕ್‌ ಜತೆ ಸೇರಿ 1976ರಲ್ಲಿ ತಾವು ತಯಾರಿಸುವ ಕಂಪ್ಯೂಟರ್‌ಗಳನ್ನು ಮಾರಲು ತನ್ನ ತಂದೆಯ ಗ್ಯಾರೇಜ್‌ನಲ್ಲೇ ಆ್ಯಪಲ್‌ ಕಂಪೆನಿಯನ್ನು ಆರಂಭಿಸುತ್ತಾರೆ (ಇಂದು ಆ್ಯಪಲ್‌ ಇಂಕ್‌ ಆಗಿದೆ). ಆಗ ಜಾಬ್ಸ್ಗೆ ಕೇವಲ 20ರ ಹರೆಯ. ಜಾಬ್ಸ್ರ ಕಠಿನ ಪರಿಶ್ರಮದಿಂದ ಕಂಪೆನಿ ಉತ್ತುಂಗಕ್ಕೇರಿತು. ಇಬ್ಬರಿಂದ ಪ್ರಾರಂಭವಾದ್ದು ನಾಲ್ಕು ಸಾವಿರ ಕಾರ್ಮಿಕರು ಮತ್ತು 2 ಬಿಲಿಯನ್‌ ಡಾಲರ್‌ ಲಾಭಗಳಿಸುವ ಮೂಲಕ ವಿಶಾಲ ಕಂಪೆನಿಯಾಗಿ ಬೆಳೆಯಿತು.

ಸ್ಟೀವ್‌ ಭಾರತಕ್ಕೆ ಬಂದಿದ್ದರು
ಸ್ಟೀವ್‌ ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ. ಭಾರತಕ್ಕೆ ಪ್ರವಾಸ ಬರುವುದು ಆತನ ಕನಸಾಗಿತ್ತು. ಅದಕ್ಕಾಗಿ ಹಣವನ್ನೂ ಕೂಡಿಡುತ್ತಿದ್ದ. ಅದರಂತೆ 1974ರಲ್ಲಿ ಕೈಂಚಿ ಆಶ್ರಮದ ನೀಮ್‌ ಕರೋಲಿ ಬಾಬಾರನ್ನು ಹುಡುಕಿಕೊಂದು ಭಾರತಕ್ಕೆ ಬಂದ. ಆದರೆ ಬಾಬಾ 1973ರಲ್ಲೇ ಕೈಲಾಸವಾಸಿಯಾಗಿದ್ದರು. ಅನಂತರ 7 ತಿಂಗಳು ಇಲ್ಲಿಯೇ ಇದ್ದು, ವಿವಿಧ ಪಣ್ಯಕ್ಷೇತ್ರಗಳಿಗೆ ಭೇಟಿ ನೀಡಿ ಅಮೇರಿಕ್ಕೆ ಮರಳಿದ. ಈ ವೇಳೆಯಲ್ಲಿ ಅವರಲ್ಲಿ ಅಗಾಧ ಧನಾತ್ಮಕ ಬದಲಾವಣೆ ಉಂಟಾಗಿತ್ತು.

ಸ್ವಂತ ಕಂಪೆನಿಯಿಂದಲೇ ಹೊರಬರಬೇಕಾಯಿತು
1983ರಲ್ಲಿ ಪೆಪ್ಸಿಕೊದ ಅಧ್ಯಕ್ಷರಾಗಿದ್ದ ಜಾನ್‌ ಸ್ಕೆಲ್ಲಿಯನ್ನು ಆ್ಯಪಲ್‌ನ ಸಿಇಒ ಆಗಿ ನೇಮಿಸಿಕೊಳ್ಳ ಲಾಗುತ್ತದೆ. ತನ್ನೋಂದಿಗೆ ಸೇರಿ ಕಂಪೆನಿ ಏಳಿಗೆಗೆ ದುಡಿಯು ತ್ತಾನೆಂದು ಜಾಬ್ಸ್ ನಂಬಿದ್ದು ತಪ್ಪಾಯಿತು. ಬರು ಬರುತ್ತಾ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟ್ಟು, ಅದು ಬೋರ್ಡ್‌ ಆಫ್ ಡೈರೆಕ್ಟರಿ ವರೆಗೂ ಹೋಯಿತು. ಅಲ್ಲಿ ಜಾಬ್ಸ್ ಅವರನ್ನೇ ತಪ್ಪಿತಸ್ಥರನ್ನಾಗಿಸಿ ಕಂಪೆನಿಯಿಂದ ಹೋರ ಹಾಕಲಾಯಿತು.

ಪಿಕ್ಸರ್‌ ಕಂಪೆನಿ ಆರಂಭ
ನೆಕ್ಸ್ಟ್ ಯಶಸ್ವಿಯಾಗಿ ಮುನ್ನಡೆಯುತ್ತಿರುವಾಗ ಪಿಕ್ಸರ್‌ (ಕಜ್ಡಿಚr) ಎಂಬ ಎನಿಮೇಶನ್‌ ಆ್ಯಂಡ್‌ ವಿಶುವಲ್‌ ಎಪೆಕ್ಟ್$Õ ಕಂಪೆನಿ ಸ್ಥಾಪಿಸಿದರು. ಇದರ ಮೂಲಕ ತಯಾರಿಸಿದ 3ಡಿ ಕಂಪ್ಯೂಟರ್‌ ಆ್ಯನಿ ಮೇಟೆಡ್‌ ಫಿಲ್ಮ್ “ಟಾಯ್‌ ಸ್ಟೋರಿ’ (1995) ಜಗತ್ತಿ ನಾದ್ಯಂತ ಜನಪ್ರಿಯತೆ ಗಳಿಸಿತು. ಇತ್ತ ಜಾಬ್ಸ್ ನ ಅನುಪಸ್ಥಿತಿಯಲ್ಲಿ ಆ್ಯಪಲ್‌ ಕಂಪೆನಿಯ ಮಾರಾಟ ಕುಸಿದು ಅವನತಿಯತ್ತ ಸಾಗತೊಡಗಿತ್ತು.

ಮತ್ತೆ ಆ್ಯಪಲ್‌ ಕಂಪೆನಿಗೆ
1996ರಲ್ಲಿ 427 ಮಿ. ಡಾಲರ್‌ಗೆ ಪಿಕ್ಸ್‌ರ್‌ ಕಂಪೆನಿಯನ್ನು ಖರೀದಿಸುವ ಆ್ಯಪಲ್‌ನ ಪ್ರಸ್ತಾವಕ್ಕೆ ಜಾಬ್ಸ್ ಸಮ್ಮತಿಸಿ ಮತ್ತೆ ಆ್ಯಪಲ್‌ ಕಂಪೆನಿ  ಸೇರಿ ಸಿಇಒ ಹುದ್ದೆ ಅಲಂಕರಿಸಿದರು. ಆ್ಯಪಲ್‌ ಅನಂತರ ಉತ್ಪಾದನೆಯ ಪ್ರಮಾಣ ಕಡಿಮೆ ಮಾಡಿ ಗುಣಮಟ್ಟವನ್ನು ಹೆಚ್ಚಿಸುವತ್ತ ಒತ್ತು ನೀಡಿದರು. ಹೊಸದಾಗಿ ಪರಿಚಯಿಸಿದ ಮ್ಯಾಕ್‌ ಒಎಸ್‌, ಐಮ್ಯಾಕ್‌ ಮ್ಯಾಕಿಂಟೋಸ್‌ ಡೆಸ್ಕ್ ಟಾಪ್‌ ಕಂಪ್ಯೂಟರ್‌ ಜನಪ್ರಿಯಗೊಂಡು ಮುಳು ಗುತ್ತಿದ್ದ ಆ್ಯಪಲ್‌ ಇಂಕ್‌ ಫಿನಿಕ್ಸ್‌ನಂತೆ ಮತ್ತೆ ಮೇಲೆದ್ದಿತು.

ಪ್ಯಾಂಕ್ರಿಯಾಟಿಕ್‌ ಕ್ಯಾನ್ಸರ್‌
ಸ್ಟೀವ್‌ ಪ್ಯಾಂಕ್ರಿಯಾಟಿಕ್‌(ಮೆದೋಜಿರಕ ಗ್ರಂಥಿ) ಕ್ಯಾನ್ಸರ್‌ಗೆ ತುತ್ತಾಗಿದ್ದರು. 2011ರಲ್ಲಿ ಮತ್ತೆ ಕ್ಯಾನ್ಸರ್‌ಗೆ ತುತ್ತಾಗಿ ಅಕ್ಟೋಬರ್‌ 5ರಂದು ನಿಧನ ಹೊಂದಿದರು. ಇವೆಲ್ಲದರ ಹೊರತಾಗಿ ಸ್ಟೀವ್‌ ಒಬ್ಬ ಉದಾರವಾದಿ ವ್ಯಕ್ತಿ, ಚತುರ ವಾಗ್ಮಿ, ಸ್ಫೂರ್ತಿದಾಯಕ ಮಾತುಗಾರ, ಕಾರ್ಮಿಕರನ್ನು ಅತ್ಯಂತ ಪ್ರೀತಿಯಿಂದ ಕಾಣುತ್ತಿದ್ದ ಸಹೃದಯಿ.

  ಶಿವಾನಂದ ಎಚ್‌. 

Advertisement

Udayavani is now on Telegram. Click here to join our channel and stay updated with the latest news.

Next