Advertisement

ದುಶ್ಚಟಗಳಿಂದ ದೂರವಿರಿ: ಪಿಎಸೈ ನಾಯಕ ಸಲಹೆ

03:51 PM Jun 04, 2022 | Team Udayavani |

ಕೊಲ್ಹಾರ: ಪೊಲೀಸ್‌ ಇಲಾಖೆಯ ಕರ್ತವ್ಯಕ್ಕೆ ಪೂರಕವಾಗಿ ಯುವಕರು ಸಮಾಜಮುಖೀ ಕೆಲಸಕ್ಕೆ ಸಹಕರಿಸಬೇಕು. ದುಶ್ಚಟಕ್ಕೆ ದಾಸರಾಗದೆ ಸದೃಢ ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಬೇಕು ಎಂದು ಪಿಎಸೈ ಪ್ರೀತಮ್‌ ನಾಯಕ ಹೇಳಿದರು.

Advertisement

ಪೊಲೀಸ್‌ ಠಾಣೆಯಲ್ಲಿ ಯುವಕರ ಸಭೆ ನಡೆಸಿ ಮಾತನಾಡಿದ ಅವರು, ತಮ್ಮ ಆಸುಪಾಸಿನ ವ್ಯಾಪ್ತಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದ್ದರೆ ಪೊಲೀಸ್‌ ಇಲಾಖೆಯ ಗಮನಕ್ಕೆ ತರುವ ಮೂಲಕ ಇಲಾಖೆಯ ಕಾರ್ಯಕ್ಕೆ ಕೈಜೊಡಿಸಿ ಅಪರಾಧ ತಡೆಗಟ್ಟುವಲ್ಲಿ ಸಹಕಾರ ನೀಡಬೇಕು ಎಂದು ಕೋರಿದರು.

ಪತ್ರಕರ್ತ ಈರಯ್ಯ ಗಣಕುಮಾರ ಮಾತನಾಡಿ, ಯುವಕರು ಅನೇಕ ದುಶ್ಚಟಗಳಿಗೆ ಶರಣಾಗಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ದುಶ್ಚಟಗಳಿಗೆ ದಾಸರಾಗದೆ ಸಮಾಜಕ್ಕೆ ಪೂರಕವಾಗುವಂತೆ ಬದುಕಬೇಕು ಮನೆಯ ಹಿರಿಯರು ಕೂಡ ಯುವಕರ ಕಡೆ ಗಮನ ಕೊಡುತ್ತಾ ತಪ್ಪು ಮಾಡಿದಾಗ ತಿದ್ದುತ್ತಾ ಇರಬೇಕು ಎಂದು ಹೇಳಿದರು.

ಎಎಸ್‌ಐ ವಿ.ಎಚ್‌. ಹತ್ತಳ್ಳಿ ಹಾಗೂ ಇಮ್ರಾನ್‌ ಪೆಂಡಾರಿ ಯುವಕರಿಗೆ ಕಾನೂನಿನ ಅರಿವು ಹಾಗೂ ದುಶ್ಚಟಗಳಿಂದ ದೂರವಿರುವಂತೆ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಕೊಲ್ಹಾರ ಪಟ್ಟಣದ ಹಾಗೂ ಕೊಲ್ಹಾರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಬರುವ ಅನೇಕ ಗ್ರಾಮಗಳ ಯುವಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next