Advertisement

Mangaluru ತುಳುವಿಗೆ ಸ್ಥಾನಮಾನ ಟ್ವೀಟ್‌ ಅಭಿಯಾನ

12:47 AM Nov 02, 2023 | Team Udayavani |

ಮಂಗಳೂರು: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಬೇಕು ಎಂದು ಆಗ್ರಹಿಸಿ, ಹಲವು ಸಂಘಟನೆಗಳು ನ. 1ರ ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನವನ್ನಾಗಿ ಆಚರಿಸಿದೆ.

Advertisement

ಟ್ವಿಟ್ಟರ್‌ನಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಟ್ವೀಟ್‌ ಅಭಿಯಾನ ಹಮ್ಮಿಕೊಂಡಿದ್ದು, ಸಾವಿರಾರು ಮಂದಿ ಟ್ವೀಟ್‌ ಮಾಡುವ ಮೂಲಕ ತುಳು ಭಾಷಾ ಮಾನ್ಯತೆಗಾಗಿ ಆಗ್ರಹಿಸಿದ್ದಾರೆ.

ತುಳು ಭಾಷೆ ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡಬೇಕು, ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಹಲವು ವರ್ಷಗಳಿಂದ ಅಭಿಯಾನ ಸೇರಿದಂತೆ ಹಲವು ಸಂಘಟನೆಗಳು ಮನವಿ ನೀಡುತ್ತಾ ಬಂದಿದೆ. ಆದರೆ ಇನ್ನೂ ತುಳುನಾಡಿಗರ ಈ ಕನಸು ಈಡೇರಿಲ್ಲ.

ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹೀಗಾಗುತ್ತಿದ್ದು, ಜನಪ್ರತಿನಿಧಿಗಳಿಗೆ ಕಲಾಪಗಳಲ್ಲಿ ಆಗ್ರಹಿಸಬೇಕು ಎಂದು ಅನೇಕರು ತಮ್ಮ ಟ್ವೀಟ್‌ ಮೂಲಕ ಪ್ರಧಾನಿ, ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಸಹಿತ ವಿವಿಧ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ.

ಕಾರ್ಯಗತಗೊಳ್ಳದ ವರದಿ
ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯನ್ನಾಗಿ ಘೊಷಣೆ ಮಾಡುವ ನಿಟ್ಟಿನಲ್ಲಿ ಬಿಜೆಪಿ ಸರಕಾರದ ಅವಧಿಯಲ್ಲಿ ಸಮಿಯೊಂದನ್ನು ರಚಿಸಿತ್ತು. ಆದರೆ ಸಮಿತಿ ರಚಿಸಿದ ಸಮಿತಿಯ ವರದಿ ಇನ್ನೂ ಬಹಿರಂಗಗೊಂಡಿಲ್ಲ. ವಿಸ್ತೃತ ವರದಿಯನ್ನು ರಾಜ್ಯ ಸರಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದ್ದು, ಬಳಿಕ ಚುನಾವಣೆ ವಿಚಾರ ಬಂದ ಕಾರಣ ಮುನ್ನೆಲೆಗೆ ಬರಲಿಲ್ಲ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next