Advertisement

ಕಾರ್ಮಿಕರ ಶಿಬಿರಗಳ ಸ್ಥಿತಿಗತಿ: ಹೈಕೋರ್ಟ್‌ ನಿರ್ದೇಶ

11:34 PM Apr 05, 2020 | Team Udayavani |

ಬೆಂಗಳೂರು: ವಲಸೆ ಕಾರ್ಮಿಕರಿಗಾಗಿ ರಾಜ್ಯಾದ್ಯಂತ ಸರಕಾರದಿಂದ ಸ್ಥಾಪಿಸಲಾಗಿರುವ ಶಿಬಿರಗಳಿಗೆ ಭೇಟಿ ಕೊಟ್ಟು ಮೂಲಸೌಕರ್ಯ ಪರಿಶೀಲಿಸಿ ವರದಿ ಸಲ್ಲಿಸುವಂತೆ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹೈಕೋರ್ಟ್‌ ನಿರ್ದೇಶ ನೀಡಿದೆ.

Advertisement

ಪಿಯುಸಿಎಲ್‌ ಸಲ್ಲಿಸಿರುವ ಮನವಿಯನ್ನು ಮಧ್ಯಾಂತರ ಅರ್ಜಿ ಯನ್ನಾಗಿ ಪರಿಗಣಿಸಿ ಹೈಕೋರ್ಟ್‌ ವಿಭಾಗೀಯ ನ್ಯಾಯಪೀಠ ಈ ಆದೇಶ ನೀಡಿದೆ.

ಸರಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌, ಜಿಲ್ಲಾವಾರು ಮಾಹಿತಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಈ ಮಧ್ಯೆ ಪಿಯುಸಿಎಲ್‌ ಪರ ವಕೀಲರು ವಾದ ಮಂಡಿಸಿ, ರಾಜ್ಯಾದ್ಯಂತ ಮಾಲಕರು ಅಥವಾ ಉದ್ಯೋಗದಾತರು ತೆರೆದಿರುವ ಕ್ಯಾಂಪ್‌ಗ್ಳಲ್ಲಿ ಆಹಾರ ಸಿಗುತ್ತಿಲ್ಲ ಎಂದು ಸುಮಾರು 10,000ಕ್ಕೂ ಹೆಚ್ಚು ಕಾರ್ಮಿಕರಿಂದ ನಮ್ಮ ಸಂಸ್ಥೆಗೆ ದೂರುಗಳು ಬಂದಿವೆ ಎಂದರು. ವಾದವಿವಾದ ಆಲಿಸಿದ ನ್ಯಾಯಪೀಠ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ನೀಡಿದ ಮಾಹಿತಿ ಆಧರಿಸಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರವು ವರದಿ ಸಲ್ಲಿಸಬೇಕು ಎಂದು ಆದೇಶಿಸಿತು.

Advertisement

Udayavani is now on Telegram. Click here to join our channel and stay updated with the latest news.

Next