Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಗೌಡರನ್ನು ಭೇಟಿ ಮಾಡಿದ್ದ ರಾಮಲಿಂಗಾರೆಡ್ಡಿಯವರು, ಬಿಬಿಎಂಪಿಯಲ್ಲಿ ಈ ಬಾರಿಯೂ ಮೈತ್ರಿ ಮುಂದುವರಿಸೋಣ. ಜೆಡಿಎಸ್ ಕಾಂಗ್ರೆಸ್‌ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
Related Articles
Advertisement
ಗೌಡರ ಜತೆ ಸಿದ್ದು ಫೋನ್ಇನ್ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿ ಮೈತ್ರಿ ವಿಚಾರವಾಗಿ ದೇವೇಗೌಡರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಬಿಬಿಎಂಪಿಯಲ್ಲಿ ಯಥಾಸ್ಥಿತಿ ಮುಂದುವರಿಸೋಣ, ಏನಾದರೂ ವ್ಯತ್ಯಾಸ ಇದ್ದರೆ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು. ಆ ನಂತರವೇ ರಾಮಲಿಂಗಾರೆಡ್ಡಿಯವರಿಗೆ ಮಾತುಕತೆಗೆ ಸೂಚಿಸಿದರು ಎಂದು ಹೇಳಲಾಗಿದೆ. ಉಪಮೇಯರ್ ಸ್ಥಾನಕ್ಕೆ ಟೆಂಡರ್! ಜಮೀರ್
ಜೆಡಿಎಸ್‌ನಲ್ಲಿ ಉಪಮೇಯರ್ ಸ್ಥಾನಕ್ಕಾಗಿ ಟೆಂಡರ್ ಕರೆಯಲಾಗಿದೆ ಎಂದು ಪಕ್ಷದ ಬಂಡಾಯ ಶಾಸಕ ಜಮೀರ್ ಅಹ್ಮದ್ ಲೇವಡಿ ಮಾಡಿದ್ದಾರೆ.ಜತೆಗೆ ಜೆಡಿಎಸ್ ಜಾತ್ಯತೀತ ಪಕ್ಷ ಎಂಬುದಾದರೆ ಕಾಂಗ್ರೆಸ್ ಜತೆ ಹೋಗಲಿ. ಆದರೆ, ಹದಿನಾಲ್ಕು ಸದಸ್ಯರನ್ನು ಇಟ್ಟುಕೊಂಡು ಮೇಯರ್ ಸ್ಥಾನ ಕೇಳುವುದು ಧರ್ಮವಲ್ಲ ಎಂದು ಅಭಿಪ್ರಾಯ ಹೊರ ಹಾಕಿದ್ದಾರೆ. ಎರಡನೇ ಅವಧಿಗೆ ಮುಸ್ಲಿಂ ಅಭ್ಯರ್ಥಿಗೆ ಕೊಡಲಾಗುವುದು ಎಂದು ಹೇಳಿದ್ದರು, ಆದರೆ, ಕೊಡಲಿಲ್ಲ. ಇದೀಗ ಯಾರಿಗೆ ಕೊಡ್ತಾರೋ ನೋಡಬೇಕು ಎಂದೂ ಹೇಳಿದ್ದಾರೆ. ಸೀಟ್‌ಗಾಗಿ ಪೈಪೋಟಿಯೂ ಜೋರು
ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಕಾ ಆಗುವ ಸಾಧ್ಯತೆ ಕಂಡುಬರುತ್ತಿದ್ದಂತೆ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ದೇವರ ಜೀವನಹಳ್ಳಿ ವಾರ್ಡ್‌ನ ಸಂಪತ್‌ರಾಜ್ ಹಾಗೂ ಸುಭಾಷ್‌ನಗರ ವಾರ್ಡ್‌ನ ಗೋವಿಂದರಾಜ್, ಉಪ ಮೇಯರ್ ಸ್ಥಾನಕ್ಕೆ ಕಾವಲ್‌ಬೈರಸಂದ್ರ ವಾರ್ಡ್‌ನ ನೇತ್ರಾ ನಾರಾಯಣ್ ಹಾಗೂ ಕಾವೇರಿಪುರ ವಾರ್ಡ್‌ನ ರಮಿಳಾ ಉಮಾಶಂಕರ್‌ನಡುವೆ ಪೈಪೋಟಿ ಆರಂಭಗೊಂಡಿದೆ. ಬಿಬಿಎಂಪಿ ಮೈತ್ರಿ ವಿಚಾರ ರಾಮಲಿಂಗಾರೆಡ್ಡಿಯವರು ಮನೆಗೆ ಬಂದು ಮಾತನಾಡಿದರು. ಕುಮಾರಸ್ವಾಮಿ ಜತೆ ಮಾತನಾಡಲು ಸೂಚಿಸಿದ್ದೇನೆ. ಮೈತ್ರಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ಎಚ್.ಡಿ.ಕುಮಾರಸ್ವಾಮಿಗೆ ವಹಿಸಲಾಗಿದೆ.
-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ ಬಿಬಿಎಂಪಿ ವಿಚಾರದಲ್ಲಿ ಮುಖ್ಯಮಂತ್ರಿ ಸೂಚನೆ ಮೇರೆಗೆ ರೆಡ್ಡಿ ದೇವೇಗೌಡರನ್ನು ಭೇಟಿ ಮಾಡಲಿದ್ದಾರೆ. ಅವರೇನು ಚರ್ಚಿಸಿದ್ದಾರೆ ಗೊತ್ತಿಲ್ಲ. ನಮ್ಮ ಸದಸ್ಯರು ಮೇಯರ್ ಸ್ಥಾನ ಬೇಕು ಎಂದು ಹೇಳಿದ್ದಾರೆ. ದೇವೇಗೌಡರ ಜತೆ ಏನು ಮಾತನಾಡಿದ್ದಾರೆ ಎಂಬುದನ್ನು ತಿಳಿದುಕೊಂಡು ಕುಪೇಂದ್ರರೆಡ್ಡಿ ಸೇರಿ ಎಲ್ಲರ ಜತೆ ಚರ್ಚಿಸುತ್ತೇನೆ.
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜತೆ ಜೆಡಿಎಸ್ ಮೈತ್ರಿ ಮುಂದುವರಿಸುವ ವಿಶ್ವಾಸವಿದೆ. ದೇವೇಗೌಡರು ಜಾತ್ಯತೀತ ನಿಲುವು ಹಾಗೂ ನಂಬಿಕೆ ಹೊಂದಿದ್ದಾರೆ. ಹೀಗಾಗಿ, ಮೈತ್ರಿ ಕುರಿತು ಗೊಂದಲ ಉಂಟಾಗದು. ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿಯೇ ಆಡಳಿತ ನಡೆಸಲಿದೆ.
-ರಾಮಲಿಂಗಾರೆಡ್ಡಿ, ಗೃಹ ಸಚಿವ