Advertisement
ಅಖಂಡ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಯಲ್ಲಿ ನೀತಿ, ತತ್ತÌಗಳಿಂದ ಪ್ರಭಾವಿತವಾದ ಪ್ರತಿಮೆಗಳು ಸಮಾಜದಲ್ಲಿ ಸೌಹಾರ್ದ, ಸಾಮರಸ್ಯ, ಸಂಘಟನೆ, ಸಮಾನತೆಯನ್ನು ಎತ್ತಿ ಹಿಡಿಯಬೇಕೇ ವಿನಾ ಸಮಾಜದಲ್ಲಿ ವಿಘಟನೆ, ಅಶಾಂತಿ ಆಗಬಾರದು ಪ್ರತಿಮೆಗಳ ಪ್ರತಿಷ್ಠಾಪಕ ರಾಗಲಿ, ಪ್ರತಿಷ್ಠಾಪನೆಯನ್ನು ವಿರೋಧಿ ಸುವವರಾಗಲಿ ಸಮುದಾಯಗಳ ಮಧ್ಯೆ ಅಸಮಾನತೆ, ಅಸಹಿಷ್ಣುತೆಗೆ ಕಾರಣವಾಗುವಂತಹ ಕೆಲಸಗಳನ್ನು ಮಾಡಬಾರದು. ಪ್ರಾದೇಶಿಕತೆಯ ಒಗ್ಗಟ್ಟಿನಿಂದಲೇ ರಾಷ್ಟ್ರೀಯ ಏಕತೆ ಬೆಳೆಯುತ್ತದೆ ಹೀಗಿರುವಾಗ ಪ್ರತಿಮೆಗಳ ಪ್ರತಿಷ್ಠಾಪನೆಯ ಪರ- ವಿರೋಧ ಗಳೆರಡೂ ಪ್ರತಿಷ್ಠೆಯಾಗದಿರಲಿ ಪ್ರತಿಮೆಗಳು ಪ್ರೀತಿಯನ್ನ ಪಸರಿಸಲಿ ಪ್ರತಿಮೆಗಳ ತತ್ತÌಗಳ ಆರಾಧನೆಗಿಂತ ತತ್ತÌಗಳ ಅನುಷ್ಠಾನ ವಾದಾಗ ಪ್ರತಿಮೆಗಳ ಅನುಕರಣೆಗೊಂದು ಅರ್ಥ ಬರುತ್ತದೆ ಧರ್ಮ, ಜಾತಿಯ ನೀತಿಗಳಿಗಿಂತ ನೆರೆಹೊರೆಯವರೊಂದಿಗೆ ನಾವು ಬದುಕುವ ರೀತಿಯು ಬಹಳ ಮುಖ್ಯವಾಗುತ್ತದೆ ನಮ್ಮ ಸುಖ-ದುಃಖಕ್ಕೆ ನೆರಹೊರೆಯವರು ಧಾವಿಸುತ್ತಾರೆಯೇ ಹೊರತು ದೂರದಲ್ಲಿದ್ದು ಪ್ರಚೋದಿಸುವವರಲ್ಲ. ಹಾಗಾಗಿ ವ್ಯಕ್ತಿ ಪ್ರತಿಷ್ಠೆಗಿಂತ ವ್ಯಕ್ತಿತ್ವ ಪ್ರತಿಷ್ಠಾಪನೆಯಾದಾಗ ಬದುಕಿಗೊಂದು ಅರ್ಥ ಬರುತ್ತದೆ. ಪ್ರತಿಮೆ ಯಾಗುವ ಮಹಾನ್ ಚೇತನಗಳು ಬದುಕಿದ್ದಾಗ ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಮಾಡುವ ಮೂಲಕ ನಿಸ್ವಾರ್ಥತೆ ಯಿಂದ “ಲೋಕಾಃ ಸಮಸ್ತಾಃ ಸುಖೀನೋ ಭವಂತು, ಸಮಸ್ತ ಸನ್ಮಂಗಳಾನಿ ಭವಂತು’ ಎಂಬ ಸಂದೇಶಗಳನ್ನು ಸಮಾಜಮುಖೀ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ನುಡಿದಂತೆ ನಡೆದು ಕೊಂಡಿರುತ್ತಾರೆ. ಆದರೆ ಇಂದು ಅಂತಹ ಮಹಾನ್ ವ್ಯಕ್ತಿಗಳ ಪ್ರತಿಮೆಗಳ ಅನಾವರಣ ವಿಚಾರದಲ್ಲಿ ಸಮಾಜದ ಸ್ವಾಸ್ಥ್ಯ ಕೆಡಿಸುವಂತಹದು ಆತಂಕಕಾರಿ ಬೆಳವಣಿಗೆಯಾಗಿದೆ . ಪ್ರತಿಮೆಗಳ ಪ್ರತಿಷ್ಠಾಪನೆಗಿಂತ ನೀತಿಗಳ ಪ್ರತಿಷ್ಠಾಪನೆ ಯಾಗಬೇಕು ಜಾತಿಗಳ ಛಾತಿಗಿಂತ ಬದುಕುವ ರೀತಿ ಮುಖ್ಯವಾಗಬೇಕು ಮಹಾನ್ ವ್ಯಕ್ತಿಗಳನ್ನು ಅರ್ಥ ಮಾಡಿ ಕೊಂಡವರು ಅರ್ಥ ಪೂರ್ಣವಾಗಿ ಬದುಕುತ್ತಾರೆ.
ಕನಕ ಗುರುಪೀಠ, ಶ್ರೀಕ್ಷೇತ್ರ ಕಾಗಿನೆಲೆ.