Advertisement

ಉತ್ತರ ಪ್ರದೇಶದಲ್ಲಿ ತಲೆ ಎತ್ತಲಿದೆ 170 ಅಡಿ ವಿವೇಕಾನಂದ ಪ್ರತಿಮೆ

06:00 AM Mar 16, 2018 | |

ನವದೆಹಲಿ: ಉತ್ತರ ಪ್ರದೇಶದಲ್ಲಿ ಸ್ವಾಮಿ ವಿವೇಕಾನಂದರ ಅತಿ ಎತ್ತರದ ಪ್ರತಿಮೆಯೊಂದು ವರ್ಷಾಂತ್ಯಕ್ಕೆ ಪ್ರತಿಷ್ಠಾಪನೆಗೊಳ್ಳಲಿದೆ! ಈ ಬೃಹತ್‌ ಪ್ರತಿಮೆ ನಿರ್ಮಾಣಕ್ಕೆ ಈಗಾಗಲೇ ಎಲ್ಲಾ ತಯಾರಿ ನಡೆದಿದೆ. ಅಷ್ಠಧಾತುಗಳ ಪ್ರತಿಮೆ ಇದಾಗಿರಲಿದೆ. ಅಂತಾರಾಷ್ಟ್ರೀಯ ಯುವ ಕಲಾವಿದ ವಾಜಿದ್‌ ಖಾನ್‌ ಅದನ್ನು ನಿರ್ಮಿಸಲಿದ್ದಾರೆ. ಲಕ್ನೋ ಅಥವಾ ಆಗ್ರಾದಲ್ಲಿ ಅದನ್ನು ಪ್ರತಿಷ್ಠಾಪಿಸುವ  ಸಾಧ್ಯತೆ ಇದೆ. 

Advertisement

ವಿಶೇಷವೇನು?: ಅದು ಬರೋಬ್ಬರಿ 170 ಅಡಿ ಎತ್ತರ ಇರಲಿದೆ. ಅಷ್ಠಧಾತುಗಳಿಂದ ಅಂದರೆ, ಕಬ್ಬಿಣ, ಚಿನ್ನ, ಬೆಳ್ಳಿ, ತಾಮ್ರ, ಸೀಸ, ತವರ ಮತ್ತು ಪಾದರಸಗಳಿಂದ ಪ್ರತಿಮೆ ನಿರ್ಮಾಣಗೊಳ್ಳಲಿದೆ.

ಯಾರಿವರು ವಾಜಿದ್‌?: 37 ವರ್ಷ ಪ್ರಾಯದ ವಾಜಿದ್‌ ಖಾನ್‌ ಮೂಲತಃ ಮಧ್ಯ ಪ್ರದೇಶದವರು. ಸದ್ಯ ಇಂದೋರ್‌ನಲ್ಲಿ ನೆಲೆಸಿದ್ದು, ಅಲ್ಲಿಯೇ ಸ್ಟುಡಿಯೋ ಹೊಂದಿದ್ದಾರೆ. ಡ್ರಾಯಿಂಗ್‌ ಮತ್ತು ಪೇಂಟಿಂಗ್‌ನಲ್ಲಿ ಪದವಿ ಪಡೆದಿರುವ ವಾಜಿದ್‌ ಕಬ್ಬಿಣದ ಮೊಳೆಗಳಿಂದ ಶಿಲ್ಪ ರಚನೆ ಮಾಡುವ ಪರಿಣಿತ ಕಲಾವಿದರಾಗಿದ್ದಾರೆ. ಈಗಾಗಲೇ ಲಂಡನ್‌ನ ರಾಯಲ್‌ ಅರಮನೆಯಲ್ಲಿ ಬ್ರಿಟಿಷ್‌ ರಾಣಿ ಎಲಿಜಬೆತ್‌ ಅವರ ಬೃಹತ್‌ ಪ್ರತಿಮೆ ನಿರ್ಮಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next